ಅಕ್ಕ ಸೋನಾಕ್ಷಿ ಚಿತ್ರಕ್ಕೆ ಸಹೋದರ ಕುಶ್​ ಸಿನ್ಹಾ ಆ್ಯಕ್ಷನ್​-ಕಟ್​: ಮೇ 30ಕ್ಕೆ ನಿಕಿತಾ ರಾಯ್​ ರಿಲೀಸ್

roy1
Published on

ಕಳೆದ ಜೂನ್‌ನಲ್ಲಿ ನಟಿ ಸೋನಾಕ್ಷಿ ಸಿನ್ಹಾ, ನಟ ಜಹೀರ್ ಇಕ್ಬಾಲ್ ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಕೆಲವೇ ಕೆಲವು ದಿನಗಳಲ್ಲಿ ನಟಿಯ ‘ಕಾಕುಡ’ ಚಿತ್ರ ತೆರೆಕಂಡಿತ್ತು. ಅದು ಅಷ್ಟೇನೂ ಸದ್ದು ಮಾಡಿರಲಿಲ್ಲ. ಕಳೆದ ಐದು ವರ್ಷದಲ್ಲಿ ಅವರ ನಟನೆಯ ಯಾವುದೇ ಸಿನಿಮಾವು ದೊಡ್ಡಮಟ್ಟದಲ್ಲಿ ಯಶಸ್ಸು ಕಂಡಿಲ್ಲ. ಒಂದು ಕಾಲದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದ ಸೋನಾಕ್ಷಿ ಸಿನ್ಹಾ ಇದೀಗ ಒಂದು ಯಶಸ್ಸಿಗೆ ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿ ವಿಭಿನ್ನ ಜಾನರ್ ಸಿನಿಮಾದ ಮೂಲಕ ತೆರೆ ಮೇಲೆ ಬರುತ್ತಿದ್ದಾರೆ. ಅದುವೇ ‘ನಿಕಿತಾ ರಾಯ್’. ಇದು ಸೋನಾಕ್ಷಿ ಸಹೋದರ ಕುಶ್ ಸಿನ್ಹಾ ನಿರ್ದೇಶನದ ಮೊದಲ ಸಿನಿಮಾ. ಅಕ್ಕನ ಚಿತ್ರಕ್ಕೆ ಸಹೋದರ ಆ್ಯಕ್ಷನ್-ಕಟ್ ಹೇಳುತ್ತಿರುವುದು ವಿಶೇಷ. ಈ ಹಿಂದೆ ಹಲವು ಸಿನಿಮಾಗಳಲ್ಲಿ  ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಕುಶ್, ಇದೀಗ ಸ್ವತಂತ್ರವಾಗಿ ನಿರ್ದೇಶನಕ್ಕಿಳಿದಿದ್ದಾರೆ.  ಅಕ್ಕನ ಸಿನಿಮಾದ ಮೂಲಕವೇ ತಮ್ಮ ವೃತ್ತಿ ಆರಂಭಿಸುತ್ತಿರುವುದು ಕುಶ್ ವಿಶೇಷವಾಗಿದೆ.  ಇನ್ನು ಸೋನಾಕ್ಷಿ ಕೂಡ ಹಲವು ವರ್ಷಗಳಿಂದ ಯಶಸ್ಸು ಕಂಡಿಲ್ಲ. ಹೀಗೆ ಸಹೋದರ ಚಿತ್ರದ ಮೂಲಕ ಮತ್ತೊಂದು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈಗಾಗಲೇ ಶೂಟಿಂಗ್​ ಪೂಂರ್ಣ ಗೊಳಿಸಿರುವ ಚಿತ್ರತಂಡವು ಬಿಡುಗಡೆಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಹೊಸ ಪೋಸ್ಟರ್ ಮೂಲಕ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದೆ. ಸೈಕಲಾಜಿಕಲ್ ಥ್ರಿಲ್ಲರ್ ಅಂಶದ ‘ನಿಕಿತಾ ರಾಯ್’ ಇದೇ ಮೇ 30ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಮಾನಸಿಕ ಒತ್ತಡ ಹಾಗೂ ಮನುಷ್ಯನ ದುರ್ಬಲತೆಗಳ ಮೇಲೆ ಬೆಳಕು ಚೆಲ್ಲಲಾಗುತ್ತಿದೆ. ಸೋನಾಕ್ಷಿ ಸಿನ್ಹಾ ಸೇರಿ ಅರ್ಜುನ್ ರಾಮ್‌ಪಾಲ್, ಪರೇಶ್ ರಾವಲ್, ಸುಹೇಲ್ ನಯ್ಯರ್ ಕಲಾಬಳಗದಲ್ಲಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net