

ಹುಬ್ಬಳ್ಳಿ: ಇಲ್ಲಿಯ ನವನಗರದ ಕುರುಹಿನಶೆಟ್ಟಿ (ನೇಕಾರ) ಅಭಿವೃದ್ಧಿ ಸಂಘದ ದ್ವೀತಿಯ ವಾರ್ಷಿಕೋತ್ಸವ ಹಾಗೂ ಸದಸ್ಯರ ವಾರ್ಷಿಕ ಸಭೆ ಭಾನುವಾರ ಚಿಕೇನಕೊಪ್ಪ ಶ್ರೀಚನ್ನವಿರ ಶರಣರ ಅಂಧರ ಕಲ್ಯಾಣ ಆಶ್ರಮದಲ್ಲಿ ಜರುಗಿತು.
ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷ ರವೀಂದ್ರ ಹರ್ತಿ ಮಾತನಾಡಿ, ನವನಗರದ ಕುರುಹಿನಶೆಟ್ಟಿ ಸಂಘವು ಎರಡು ವರ್ಷಗಳ ಅಲ್ಪಾವಧಿಯಲ್ಲಿಯೇ ಉತ್ತಮ ಏಳಿಗೆ ಕಂಡಿದೆ. ನೇಕಾರ ಸಮಾಜದ ಇತರ ಸಂಘಗಳಿಗೆ ಮಾದರಿಯಾಗುವಂತೆ ಬೆಳೆದಿದೆ. ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾವೇನು ನೀಡಿದ್ದೇವೆ ಎಂಬ ಮನೋಭಾವ ಬಂದಾಗ ಸಂಘದ ಬೆಳವಣಿಗೆ ಸಾಧ್ಯ ಎಂದು ಹೇಳಿದರು.
ಶಿವಮೊಗ್ಗ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಅಶೋಕ ಎನ್.ಕೆ. ಮಾತನಾಡಿ, ಕುರುಹಿನಶೆಟ್ಟಿ ಸಮಾಜವು ಶೈಕ್ಷಣಿಕ, ಸಾಮಾಜಿಕ, ಆಥಿರ್ಕ ಹಾಗೂ ರಾಜಕೀಯವಾಗಿ ಬಹಳ ಹಿಂದುಳಿದಿದೆ. ಗ್ರಾಮೀಣ ಪ್ರದೇಶದಲ್ಲಿ ಅನೇಕರು ಉನ್ನತ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದರು.
ಸಂಘದ ಅಧ್ಯಕ್ಷ ಮಹಾಂತೇಶ ಕೋಳಿವಾಡ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಚವಡಿ, ನಾಗೇಂದ್ರ ಮನಗೂಳಿ, ಸುಶೀಲಾ ಡೊಳ್ಳಿನ ಮಾತನಾಡಿದರು.
ಸಂಘದ ಹಿರಿಯ ಹಾಗೂ ಹೊಸ ಸದಸ್ಯರು, ಸೇವಾ ನಿವೃತ್ತರು, ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಾಧಕರಿಗೆ ಸನ್ಮಾನಿಸಲಾಯಿತು.
ಮಲ್ಲೇಶಪ್ಪ ಇಟಿಗಟ್ಟಿ, ಶಂಭುಲಿಂಗ ದಿಬ್ಬದಮನಿ, ಗೀತಾ ನೆಲ್ಲೂರ, ಸಬರಾಜ ಬಾವೂರ, ಮಂಜುನಾಥ ನೇಕಾರ, ಲಲಿತಾ ಡೊಳ್ಳಿನ, ಕಮಲಾ ಚವಡಿ, ಇತರರು ಪಾಲ್ಗೊಂಡಿದ್ದರು.
ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಗುಡ್ಡಾನವರ ವಾಷಿರ್ಕ ವರದಿ ಮಂಡಿಸಿದರು. ಖಜಾಂಚಿ ವೀರಭದ್ರಪ್ಪ ಚವಡಿ ಲೆಕ್ಕಪತ್ರ ಮಾಹಿತಿ ನೀಡಿದರು. ದೀಪಾ ನಂದಿಹಳ್ಳಿ ಪ್ರಾರ್ಥಿಸಿದರು. ಕಳಕಪ್ಪ ಡೊಳ್ಳಿನ ಸ್ವಾಗತಿಸಿದರು. ನಂದಿನ ಕೋಳಿವಾಡ ನಿರೂಪಿಸಿದರು.