

ಕಡಬ: ಭಕ್ತಿ, ಶ್ರದ್ಧೆಯನ್ನು ಉದ್ದೀಪನಗೊಳಿಸುವುದರ ಜತೆಗೆ ಧರ್ಮ ಜಾಗೃತಿ, ಸಾಮರಸ್ಯಕ್ಕೆ ಭಜನಾ ಕಾರ್ಯಕ್ರಮ ಸಹಕಾರಿಯಾಗಿದೆ. ವೇದಗಳ ಕಾಲದಲ್ಲಿ ಭಜನೆ ನಡೆಯುತಿತ್ತು. ಆದರೆ ಈಗ ಭಜನೆ, ಭಜಕರ ವಿರುದ್ಧ ನಿಂದನೆ ಕೇಳಿ ಬರುತ್ತಿದೆ. ಅಪಹಾಸ್ಯ, ವಿರೋಧ ಮಾಡುವವರೇ ಮುಂದೆ ಸ್ವೀಕಾರ ಮಾಡುತ್ತಾರೆ ಎಂದು ದೇವಾಲಯ ಸಂವರ್ಧನಾ ಸಮಿತಿ ರಾಜ್ಯ ಸಂಯೋಜಕ ಮನೋಹರ ಮಠದ್ ಹೇಳಿದರು.
ರಾಮಕುಂಜ ಗ್ರಾಮದ ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ಮೈದಾನದಲ್ಲಿ ಕಡಬ ತಾಲೂಕು ದೇವಾಲಯ ಸಂವರ್ಧನಾ ಸಮಿತಿ ಆಶ್ರಯದಲ್ಲಿ ಶ್ರೀ ರಾಮಕುಂಜೇಶ್ವರ ದೇವಸ್ಥಾನ, ಹಳೆನೇರಿಂಕಿ ಶ್ರೀ ವಿಷ್ಣುಮೂರ್ತಿ ಭಜನಾ ಮಂದಿರ, ವರ್ನಡ್ಕ ಶ್ರೀದೇವಿ ಭಜನಾ ಮಂದಿರ, ಶಾರದನಗರ ಶ್ರೀ ಶಾರದಾ ಭಜನಾ ಮಂದಿರ, ಕುಂಡಾಜೆ ಶ್ರೀ ನಾಗಬ್ರಹ್ಮ ಭಜನಾ ಮಂಡಳಿ, ಕಡಬ ತಾಲೂಕು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಸಹಕಾರದಲ್ಲಿ ನಡೆದ ಕುಣಿತ ಭಜನೋತ್ಸವದಲ್ಲಿ ದಿಕ್ಸೂಚಿ ಬಾಷಣ ಮಾಡಿದರು.
ದೇವಾಲಯ ಸಂವರ್ಧನಾ ಸಮಿತಿ ರಾಮಕುಂಜ ಗ್ರಾಮ ಸಂಯೋಜಕ ಯೋಗೀಶ್ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘ, ಕಡಬ ತಾಲೂಕು ಸಂಘ ಚಾಲಕ ದಿವಾಕರ ರಾವ್ ಪಂಚವಟಿ, ರಾಷ್ಟ್ರ ಸೇವಿಕಾ ಸಮಿತಿ ಪುತ್ತೂರು ಜಿಲ್ಲಾ ಸಂಚಾಯಿಕ ಸವಿತಾ ಪಿ.ಜಿ.ಭಟ್, ಕಡಬ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಅಧ್ಯಕ್ಷ ಸುಂದರ ಗೌಡ ಬಿಳಿನೆಲೆ, ಶ್ರೀರಾಮಕುಂಜೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ್, ಹಳೆನೇರೆಂಕಿ ಶ್ರೀ ವಿಷ್ಣುಮೂರ್ತಿ ಭಜನಾ ಮಂದಿರ ಅಧ್ಯಕ್ಷ ಚರಣ್ ಪಿ.ಪಾಲೆತ್ತಡ್ಡ, ವರ್ನಡ್ಕ ಶ್ರೀ ದೇವಿ ಭಜನಾ ಮಂದಿರ ಉಪಾಧ್ಯಕ್ಷ ಸಚಿನ್ ಬೈರಕಂಡ, ಶಾರದಾನಗರ ಶ್ರೀ ಶಾರದಾ ಭಜನಾ ಮಂದಿರ ಅಧ್ಯಕ್ಷ ಗಣೇಶ್ ಉಪಸ್ಥಿತರಿದ್ದರು. ದೇವಾಲಯ ಸಂವರ್ಧನಾ ಸಮಿತಿ ಕಡಬ ತಾಲೂಕು ಸಂಯೋಜಕ ಯದುಶ್ರೀ ಆನೆಗುಂಡಿ ಪ್ರಸ್ತಾವಿಸಿ ಸ್ವಾಗತಿಸಿದರು. ವೀರೇಂದ್ರ ಹಳೆನೇರೆಂಕಿ ವೈಯಕ್ತಿಕ ಗೀತೆ ಹಾಡಿದರು. ನಿಶ್ಚಿತ್ ಶಾರದಾನಗರ ವಂದಿಸಿದರು. ಪ್ರಕಾಶ್ ಕೆಮ್ಮಾರ, ಶ್ವೇತಾ ಬದೆಂಜ ಕಾರ್ಯಕ್ರಮ ನಿರೂಪಿಸಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ, ದೇವಾಲಯ ಸಂವರ್ಧನಾ ಸಮಿತಿ ವಿಭಾಗ ಪ್ರಮುಖ್ ಮುಳಿಯ ಕೇಶವ ಪ್ರಸಾದ್ ಉದ್ಘಾಟಿಸಿ, ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಕುಣಿತ ಭಜನೆಗೆ ಚಾಲನೆ ನೀಡಿದರು. ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲಾ ಕಾರ್ಯದರ್ಶಿ ಕೆ.ಸೇಸಪ್ಪ ರೈ, ಡಾ.ಸುಧಾರಾವ್ ಪುತ್ತೂರು, ಪ್ರಶಾಂತ್ ದೊಡ್ಡಡ್ಕ, ಜನಾರ್ದನ ಸೂಡ್ಲು, ವಿಶಾಲಾಕ್ಷಿ ಪಿಲಿಗೂಡು, ವೇದಾವತಿ, ಮೊದಲಾದವರು ಇದ್ದರು.
ಒಂದು ತಾಸು ಕುಣಿತ ಭಜನೆ
ಕಡಬ, ಪುತ್ತೂರು ತಾಲೂಕಿನ ವಿವಿಧ ಭಜನಾ ತಂಡಗಳಿಂದ ಏಕಕಾಲದಲ್ಲಿ ಮಂಡಲದಲ್ಲಿ ಕುಣಿತ ಭಜನೆ ನಡೆಯಿತು. 60ಕ್ಕೂ ಹೆಚ್ಚು ಭಜನಾ ತಂಡ ಭಾಗವಹಿಸಿದ್ದು, ಒಂದು ತಾಸಿಗೂ ಹೆಚ್ಚು ಕಾಲ ಕುಣಿತ ಭಜನೆ ನಡೆಯಿತು. ಕಡಬ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಸುಂದರ ಗೌಡ ಬಿಳಿನೆಲೆ ಭಜನೆ ನಡೆಸಿಕೊಟ್ಟರು. ಹಾರ್ಮೋನಿಯಂನಲ್ಲಿ ವಿಜಯ ಆಚಾರ್ಯ ಸುಳ್ಯ, ತಬಲದಲ್ಲಿ ಹರೀಶ್ ಸುಬ್ರಹ್ಮಣ್ಯ ಸಹಕರಿಸಿದರು. ಭಾಗವಹಿಸಿದ ಎಲ್ಲಾ ತಂಡಗಳಿಗೂ ಗೌರವಾರ್ಪಣೆ ನಡೆಯಿತು.