ಬೆಲೆ ಏರಿಕೆ ಹಿಂಪಡೆಯುವ ತನಕ ಹೋರಾಟ ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ

kumpaa-620x369
Published on


ಮಂಗಳೂರು : ರಾಜ್ಯದ ಕಾಂಗ್ರೆಸ್ ಸರ್ಕಾರದ ಇಂಧನ ಬೆಲೆ ಏರಿಕೆಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ.ಜನತೆಗೆ ಮಾರಕವಾದ ಈ ಬೆಲೆ ಏರಿಕೆಯನ್ನು ಹಿಂಪಡೆಯುವ ತನಕ ಹೋರಾಟ ತೀವ್ರಗೊಳಿಸಲಾಗುವುದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ.
ತಮ್ಮನ್ನು ತಾವು ದೊಡ್ಡ ಆರ್ಥಿಕ ತಜ್ಞ ಎಂದು ಬಣ್ಣಿಸುವ ಸಿದ್ದರಾಮಯ್ಯ ಚುನಾವಣೆ ಸಂದರ್ಭ ಉಚಿತ ಗ್ಯಾರಂಟಿಗಳ ಅನುಷ್ಠಾನಕ್ಕೆ ಜನರ ಮೇಲೆ ಯಾವುದೇ ತೆರಿಗೆ ಹಾಕುವುದಿಲ್ಲ ಎಂದು ತಿಳಿಸಿದ್ದರು. ಉಚಿತ ಗ್ಯಾರಂಟಿಗಳನ್ನು ಘೋಷಿಸಿದ ಪರಿಣಾಮ ಈಗ ರಾಜ್ಯದ ಆರ್ಥಿಕತೆ ಬುಡಮೇಲುಗೊಂಡಿದೆ. ಅಬಕಾರಿ ಸುಂಕದಲ್ಲಿ ಹೆಚ್ವಳ, ವಿದ್ಯುತ್ ಬೆಲೆಯಲ್ಲಿ ಹೆಚ್ಚಳ ಈಗ ಪೆಟ್ರೋಲ್ ಬೆಲೆ ಹೆಚ್ಚಳ ಹೀಗೆ ಕಾಂಗ್ರೆಸ್ ಸರ್ಕಾರ ಜನತೆಗೆ ಕೊಟ್ಟದ್ದಕ್ಕಿಂತ ಬಡ ಜನರಿಂದ ಸುಲಿಗೆ ಮಾಡಿದ್ದೇ ಜಾಸ್ತಿ ಆಗಿದೆ. ಬೊಮ್ಮಯಿ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಜನತೆಯ ಹಿತ ದೃಷ್ಟಿಯಿಂದ ಪೆಟ್ರೋಲ್ ಮೇಲಿನ ತೆರಿಗೆಯನ್ನು ಶೇ.10ರಷ್ಟು ಇಳಿಸಿತ್ತು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net