ಕುಂಭಮೇಳದಲ್ಲಿ ಮೊಹಮ್ಮದ್ ಶಮಿ ಕೂಡ ಪುಣ್ಯಸ್ನಾನ ಮಾಡಿದ್ದಾರೆ; ಯುಪಿ ಸಿಎಂ Yogi Adityanath ಹೇಳಿಕೆ ವೈರಲ್

Yogi Shami
Published on

ಲಖನೌ: ಫೆಬ್ರವರಿ 26ರಂದು ಸಂಪನ್ನಗೊಳ್ಳಲಿರುವ ಕುಂಭಮೇಳಕ್ಕೆ ಯಾವುದೇ ಧರ್ಮಭೇದವಿಲ್ಲದೇ ದೇಶ-ವಿದೇಶಗಳಿಂದ ಭಕ್ತರು ಭೇಟಿ ನೀಡಿ ಪುಣ್ಯಸ್ನಾನ ಮಾಡುತ್ತಿದ್ದು, ಖ್ಯಾತನಾಮರು ಕೂಡ ಇದಕ್ಕೆ ಹೊರತಾಗಿಲ್ಲ. ಇನ್ಣೂ ಟೀಮ್​ ಇಂಡಿಯಾ ಆಟಗಾರ ಮೊಹಮ್ಮದ್​ ಶಮಿ ಕೂಡ ಕುಂಭಮೇಳಕ್ಕೆ ಭೇಟಿ ನೀಡಿ ಪುಣ್ಯಸ್ನಾನ ಮಾಡಿದ್ದಾರೆ ಎಂದು ಹೇಳುವ ಮೂಲಕ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಉತ್ತರಪ್ರದೇಶದ ವಿಧಾನಸಭೆಯನ್ನು ಉದ್ಧೇಶಿಸಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್​ (Yogi Adityanath) ವಿಪಕ್ಷಗಳು ಕುಂಭಮೇಳದ ಕುರಿತು ಮಾಡಿರುವ ಆರೋಪಗಳಿಗೆ ತಕ್ಕ ತಿರುಗೇಟು ನೀಡಿದರು. ಈ ವೇಳೆ ಮಾಜಿ ಕ್ರಿಕೆಟಿಗ ಮೊಹಮ್ಮದ್​ ಕೈಫ್​ ಪುಣ್ಯಸ್ನಾನ ಮಾಡಿರುವುದನ್ನು ಹೇಳಲು ಹೋಗಿ ಮೊಹಮ್ಮದ್​ ಶಮಿ ಕೂಡ ಫೆಬ್ರವರಿ 19ರಂದು ಮಹಾಕುಂಭಮೇಳಕ್ಕೆ ಭೇಟಿ ನೀಡಿ ಪುಣ್ಯಸ್ನಾನ ಮಾಡಿದ್ದಾರೆ ಎಂದು ಹೇಳಿದರು.

ಇದೀಗ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿದ್ದು, ವಿಪಕ್ಷಗಳು ಸ್ಥಳಗಳ ಹೆಸರು ಬದಲಾಯಿಸಿದಂತೆ ಕ್ರಿಕೆಟಿಗರ ಹೆಸರು ಯಾವಾಗ ಬದಲಾಯಿಸಲು ಶುರು ಮಾಡಿದ್ರಿ ಎಂದು ಪ್ರಶ್ನಿಸಿದ್ಧಾರೆ. ಈ ಸಂಬಂಧ ಟ್ವೀಟ್​ ಮಾಡಿರುವ ಎಸ್​ಪಿ ನಾಯಕ, ಸಂಸದ ಅಖಿಲೇಶ್​ ಯಾದವ್ ಯೋಗಿ ಆದಿತ್ಯನಾಥ್ (Yogi Adityanath) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಗರಗಳ ಹೆಸರನ್ನು ಬದಲಾಯಿಸಿದಂತೆ ಕ್ರಿಕೆಟಿಗರ ಹೆಸರನ್ನು ಯಾವಾಗ ಬದಲಾಯಿಸಲು ಶುರು ಮಾಡಿದ್ರಿ ಎಂದು ಟೀಕಿಸಿದ್ದಾರೆ. ಇವರ ಟ್ವೀಟ್​ನಲ್ಲಿ ಸರ್ಕಾರದ ಈ ಹಿಂದಿನ ಆದೇಶವನ್ನು ಉಲ್ಲೇಖಿಸಿದ್ದಾರೆ. ಸದ್ಯ ಯುಪಿ ಸಿಎಂ ಯೋಗಿ ಆದಿತ್ಯನಾಥ್ ನೀಡಿರುವ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net