

ಬೆಂಗಳೂರು: ಕನ್ನಡ ಚಿತ್ರರಂಗದ ಕೆಲವು ಸಿನಿಮಾಗಳಲ್ಲಿ ಪೋಷಕ ಪಾತ್ರವನ್ನು ಮಾಡಿರುವ ನಟ ಕುಳ್ಳ ಅನಂತ್, ಇತ್ತೀಚೆಗೆ ವಿಜಯವಾಣಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾಗಳಾದ 'ಮಾಸ್ಟರ್ಪೀಸ್', 'ಸತ್ಯ ಹರಿಶ್ಚಂದ್ರ', 'ನಡುವೆ ಅಂತರವಿರಲಿ' ಸೇರಿದಂತೆ ಒಂದಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಅನಂತ್, ಚಿತ್ರರಂಗದಲ್ಲಿ ತಮಗೆ ಒಲಿದು ಬರುತ್ತಿರುವ ಆಫರ್ಗಳು, ಮುಂಬರುವ ಸಿನಿಮಾಗಳ ಬಗ್ಗೆ ಕೆಲವು ವಿಚಾರಗಳನ್ನು ತಿಳಿಸಿದ್ದು, ನಟ ಚಿಕ್ಕಣ್ಣ ಅವರ ಪ್ರೇಯಸಿ ಯಾರು ಎಂಬ ಪ್ರಶ್ನೆಗೆ ಈ ರೀತಿ ಉತ್ತರಿಸಿದ್ದಾರೆ.
"ಚಿಕ್ಕಣ ನನಗೆ ಅಣ್ಣ ಆ ರೀತಿ ಇದ್ದಾರೆ ಅವರು, ನಾನು ಅವರೊಟ್ಟಿಗೆ ನಡುವೆ ಅಂತರವಿರಲಿ ಸೇರಿದಂತೆ ರಿಲೀಸ್ಗೆ ರೆಡಿಯಿರುವ ಉಪಾಧ್ಯಕ್ಷ ಚಿತ್ರದಲ್ಲೂ ಸಹ ನಟಿಸಿದ್ದೇನೆ. ನಾನು ಅವರು ಅಣ್ಣ-ತಮ್ಮ ಇದ್ದಂತೆ, ಚಿಕ್ಕಣ್ಣ ಅವರ ಗರ್ಲ್ಫ್ರೆಂಡ್ ಬಗ್ಗೆ".......ಕೆಳಗಿನ ಸಂದರ್ಶನದ ವಿಡಿಯೋ ಕ್ಲಿಕ್ ಮಾಡಿ, ಹೆಚ್ಚಿನ ಮಾಹಿತಿ ತಿಳಿಯಿರಿ.