ಕುಲಾಲ ಬಾಂಧವರು ಒಗ್ಗಟ್ಟಾಗುವ ಪ್ರಯತ್ನ : ಮಯೂರ್ ಉಳ್ಳಾಲ್ ಆಶಯ

mng-8oct-kulala
Published on



ಮಂಗಳೂರು : ನಗರದ ಮಂಗಳಾದೇವಿ ಸಮೀಪ ನ.23ರಂದು ನಡೆಯಲಿರುವ ಕುಲಾಲ ಭವನ ಮಂಗಳೂರು ಇದರ ಲೋಕಾರ್ಪಣೆ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಮುಂಬೈಯ ಸಂತಕ್ರೂಸ್ ಪೂರ್ವದ ಪೇಜಾವರ ಮಠದಲ್ಲಿ ನಡೆಯಿತು.
ಕುಲಾಲ ಭವನ ಕುಲಾಲ ಸಮಾಜದ ಹೆಮ್ಮೆಯಾಗಿದ್ದು, ಕುಲಾಲ ಬಾಂಧವರು ಒಗ್ಗಟ್ಟಾಗುವ ಉದ್ಘಾಟನೆಯ ಕಾರ್ಯ ಬಹಳ ಅದ್ದೂರಿಯಾಗಿ ನಡೆಯಲಿದೆ ಎಂದು ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ತಿಳಿಸಿದರು.
ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಘು ಮೂಲ್ಯ ಪಾದಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಮುಂಬೈ ಬಂಟರ ಸಂಘದ
ಗೌರವ ಪ್ರಧಾನ ಕಾರ್ಯದರ್ಶಿ ಡಾ.ಆರ್.ಕೆ. ಶೆಟ್ಟಿ , ಸಂತಕ್ರೂಸ್ ಮಂತ್ರದೇವತೆ ಚಾರಿಟೇಬಲ್ ಟ್ರಸ್ಟ್‌ನ ಆಡಳಿತ ಮೊಕ್ತೇಸರ ವಾಸುದೇವ ಕೆ. ಬಂಜನ್ ಶುಭ ಹಾರೈಸಿದರು.
ಕಟ್ಟಡದ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್.ಬಿ. ಸಾಲ್ಯಾನ್ ಬಂಟ್ವಾಳ , ಉಪ ಕಾರ್ಯಾಧ್ಯಕ್ಷ ಸುನಿಲ್. ಆರ್.ಸಾಲ್ಯಾನ್,
ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತ .ಡಿ.ಬಂಜನ್ ಅವರು ಉದ್ಘಾಟನಾ ಸಮಾರಂಭದಲ್ಲಿ ಎಲ್ಲರೂ ಭಾಗವಹಿಸಲು ವಿನಂತಿಸಿದರು.
ಉದ್ಯಮಿ ಜಗದೀಶ್.ಆರ್.ಬಂಜನ್, ಅಮರನಾಥ್, ಕುಲಾಲ ಸಂಘದ ವಿವಿಧ ಘಟಕಗಳ ಪ್ರಮುಖರಾದ ಡಿ.ಐ. ಮೂಲ್ಯ, ಕರುಣಾಕರ.ಬಿ. ಸಾಲ್ಯಾನ್, ಆನಂದ್.ಕೆ.ಕುಲಾಲ್, ಲಕ್ಷ್ಮಣ್. ಸಿ ಮೂಲ್ಯ, ಸದಾನಂದ ಎಸ್.ಕುಲಾಲ್, ವಿಶ್ವನಾಥ ಬಂಗೇರ, ಉದಯ ಅತ್ತಾವರ, ಮೋಹನ್ ಬಂಜನ್, , ಆನಂದ .ಬಿ. ಮೂಲ್ಯ, ಬಿ.ದಿನೇಶ್ ಕುಲಾಲ್ ಉಪಸ್ಥಿತರಿದ್ದರು. ಮುಂಬೈ ಕುಲಾಲ ಸಂಘದ ಗೌರವಾಧ್ಯಕ್ಷ ಪಿ. ದೇವದಾಸ್ ಎಲ್. ಕುಲಾಲ್ ಸ್ವಾಗತಿಸಿದರು. ಉಮೇಶ್.ಎಂ ಬಂಗೇರ ಮತ್ತು ಕವಿತಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net