ಕ್ಷಯರೋಗ ನಿರ್ಮೂಲನೆ ಎಲ್ಲರ ಜವಾಬ್ದಾರಿ

Untitled design
Published on

ಕುಕನೂರು: ಕ್ಷಯಮುಕ್ತ ಜಿಲ್ಲೆಯನ್ನಾಗಿಸಲು 100 ದಿನ ನಡೆಯುವ ಅಭಿಯಾನದ ಜಾಗೃತಿ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಮುಖ್ಯವಾಗಿದೆ ಎಂದು ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಪ್ರವೀಣಕುಮಾರ ಹೇಳಿದರು.

ತಾಲೂಕಿನ ಮಂಗಳೂರು ಸರ್ಕಾರಿ ಪದವಿಪೂರ್ವ ಕಾಲೇಜನಲ್ಲಿ 100 ದಿನಗಳ ಕ್ಷಯಮುಕ್ತ ಕೊಪ್ಪಳ ಅಭಿಯಾನ ಜಾಗೃತಿ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

ಹೊಸ ಕ್ಷಯರೋಗಿಗಳ ಪತ್ತೆ ಹಚ್ಚುವಿಕೆ, ಕ್ಷಯರೋಗಿಗಳ ಮರಣ ಪ್ರಮಾಣ ಕಡಿಮೆಯಾಗಲಿದೆ. ಕ್ಷಯರೋಗ ಮೈಕೊಬ್ಯಾಕ್ಟಿರಿಯಮ್ ಟ್ಯುಬರಕ್ಲೊಸಿಸ್ ಎಂದ ಬ್ಯಾಕ್ಟೀರಿಯಾದಿಂದ ಹರಡುತ್ತದೆ. ಎರಡು ವಾರ ಮೇಲ್ಪಟ್ಟ ಕೆಮ್ಮು, ಎದೆನೋವು, ಜ್ವರ, ರಾತ್ರಿ ವೇಳೆ ಬೆವರುವಿಕೆ, ನಿರಂತರ ಆಯಾಸ, ತೂಕ, ಹಸಿವು ನಂತಹ ಲಕ್ಷಣ ಹೊಂದಿದವರು ಹತ್ತಿರದ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು ಎಂದರು.

ಕ್ಷಯರೋಗ ಪರೀಕ್ಷೆಗಾಗಿ ಸರ್ಕಾರಿ ಆರೋಗ್ಯ ಕೇಂದ್ರ ಮಂಗಳೂರಿನಲ್ಲಿ ಟ್ರೂನ್ಯಾಟ ಮಷಿನ್ ಇದ್ದು, ಇದರ ಮೂಲಕ ತ್ವರಿತ ಮತ್ತು ನಿಖರವಾದ ಫಲಿತಾಂಶವನ್ನು ನೀಡಲಾಗುತ್ತದೆ. ಕ್ಷಯರೋಗ ಲಕ್ಷಣ ಹೊಂದಿದವರು. ಇದರ ಸದುಪಯೋಗ ಪಡೆಯಬೇಕು. ಜೊತೆಗೆ ಕ್ಷಯರೋಗ ನಿರ್ಮೂಲನೆ ಎಲ್ಲರ ಜವಾಬ್ದಾರಿಯಾಗಿದ್ದು, ಎಲ್ಲರೂ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳಿಗೆ ಸಹಕಾರ ನೀಡಬೇಕು ಎಂದರು.

ಪ್ರಾಚಾರ್ಯ ಎನ್.ಈರೇಶಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು. ಆಪ್ತ ಸಮಾಲೋಚಕರಾದ ಅಮರೇಶ ಅಂಗಡಿ, ಉಪನ್ಯಾಸಕರಾದ ಅಲ್ಲಾಸಾಬ, ಶರಣಬಸವರಾಜ, ಭೀಮಪ್ಪ ಗೊಲ್ಲರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net