ಕೂಡ್ಲಿಗಿ ದೊಡ್ಡ ಕೆರೆಗೆ ಗಂಗಮ್ಮ ಪೂಜೆ

kudlgi puj
ಕೂಡ್ಲಿಗಿಯ ದೊಡ್ಡ ಕೆರೆಗೆ ದೈವಸ್ಥರು ಗಂಗಮ್ಮ ಪೂಜೆ ಸಲ್ಲಿಸಿದರು. ಕೂಡ್ಲಿಗಿ ಜೋಯಿಸರಾದ ಹಯವದನ ಆಚಾರ್, ಪುರೋಹಿತರಾದ ಹಿ.ಮ. ಚಿದಾನಂದಸ್ವಾಮಿ, ಚೌಡಪ್ಪ ಪೂಜಾರ್, ಬಣಕಾರ ಮಂಜುನಾಥ, ಅರ್ಚಕ ನಾಗರಾಜ ಇತರರಿದ್ದರು.
Published on

ಕೂಡ್ಲಿಗಿ: ನಿರಂತರ ಮಳೆಯಿಂದಾಗಿ ಮೈದುಂಬಿ ಕೋಡಿ ಹರಿಯುತ್ತಿರುವ ಪಟ್ಟಣದ ದೊಡ್ಡ ಕೆರೆಗೆ ದೈವಸ್ಥರು ಹಾಗೂ ಗ್ರಾಮಸ್ಥರು ಶುಕ್ರವಾರ ಕೆರೆ ಗಂಗಮ್ಮ ಪೂಜೆ ನೆರವೇರಿಸಿದರು.

ಪ್ರತಿ ಸಲ ಕೆರೆ ಕೋಡಿ ಬಿದ್ದಾಗ ಯಾವುದೇ ವಿಘ್ನವಾಗದಂತೆ, ಸಕಲ ಜನ, ಜಾನುವಾರುಗಳಿಗೆ ಸಮೃದ್ದಿಯನ್ನುಂಟು ಮಾಡಲಿ ಎಂದು ಪ್ರಾರ್ಥಿಸಿ ಗಂಗಮ್ಮ ಪೂಜೆ ಸಲ್ಲಿಸಲಾಗುತ್ತದೆ. ಅದರಂತೆ ಶುಕ್ರವಾರ ದೊಡ್ಡ ಕೆರೆ ಕೋಡಿ ಬಳಿ ಇರುವ ಕನ್ನೀರಮ್ಮ ದೇವತೆಗೆ ಗಂಗಮ್ಮ ಪೂಜೆ ಮಾಡಲಾಯಿತು.

ಕೆರೆಯ ಅಂಗಳದಲ್ಲಿರುವ ರಾಮಲಿಂಗೇಶ್ವರಸ್ವಾಮಿಗೂ ಪೂಜೆ ಸಲ್ಲಿಸಲಾಯಿತು. ನಂತರ ಅರಿಶಿಣ, ಕುಂಕುಮ, ಹಾಲು, ತುಪ್ಪ, ಎಲೆ ಅಡಕೆ, ಹೂಗಳನ್ನು ಬಾಗಿನ ರೂಪದಲ್ಲಿ ದೈವಸ್ಥರು ಕೆರೆಗೆ ಸಮರ್ಪಿಸಿದರು. ನಂತರ ಗಂಗೆಗೆ ಬೆಳಗಿದ ದೀಪವನ್ನು ಕೆರೆಯಲ್ಲಿ ಬಿಡಲಾಯಿತು.

ಕೂಡ್ಲಿಗಿ ಜೋಯಿಸರಾದ ಹಯವದನ ಆಚಾರ್, ಪುರೋಹಿತರಾದ ಹಿ.ಮ. ಚಿದಾನಂದಸ್ವಾಮಿ, ಚೌಡಪ್ಪ ಪೂಜಾರ್, ಬಣಕಾರ ಮಂಜುನಾಥ, ಅರ್ಚಕ ನಾಗರಾಜ, ತುಪ್ಪಳ್ಳಿ ಕೊಟ್ರೇಶ್, ಎನ್.ರಮೇಶ್, ರಾಮು, ತಳವಾರ ಸುರೇಶ್, ಕೆ.ಬಿ.ಕೊಟ್ರೇಶ್, ಕೆ.ಬಿ.ಶಿವಣ್ಣ, ಕೆ.ವಿಜಯಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net