ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಆಗಸ್ಟ್‌ನಲ್ಲಿ ಕುದಿ ಮುಹೂರ್ತ ನಡೆಯಬೇಕಿತ್ತಾದರೂ ಕಂಬಳ ಕೋಣಗಳ ಯಜಮಾನರ ಬೇಡಿಕೆಗೆ ಸ್ಪಂದಿಸಿ ಮುಹೂರ್ತ ನಡೆಸಲಾಗಿದೆ. ಜನವರಿ ಎರಡನೇ ವಾರದಲ್ಲಿ ಕಂಬಳ ನಡೆಯಲಿದ್ದು, ಮುಂದಿನ ದಿನಗಳಲ್ಲಿ ಆ ದಿನವನ್ನು ಶಾಶ್ವತವಾಗಿಸುವ ಪ್ರಯತ್ನ ನಡೆದಿದೆ ಎಂದು ಜಿಲ್ಲಾ ಕಂಬಳ ಸಮಿತಿ ಉಪಾಧ್ಯಕ್ಷ, ನರಿಂಗಾನ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಮಿತ್ತಕೋಡಿ ಹೇಳಿದರು.
ನರಿಂಗಾನ ಕಂಬಳ ಸಮಿತಿ ಆಶ್ರಯದಲ್ಲಿ ಗ್ರಾಮದ ಮೋರ್ಲ ಬೋಳದಲ್ಲಿರುವ ಲವಕುಶ ಜೋಡುಕರೆ ಮೂರನೇ ವರ್ಷದ ಹೊನಲು ಬೆಳಕಿನ ಕಂಬಳೋತ್ಸವಕ್ಕೆ ಭಾನುವಾರ ನಡೆದ ಕುದಿ ಮುಹೂರ್ತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಂಬಳ ಸಮಿತಿ ಉಪಾಧ್ಯಕ್ಷ ಮೋರ್ಲಗುತ್ತು ಚಂದ್ರಹಾಸ್ ಶೆಟ್ಟಿ, ಕರುಣಾಕರ ಶೆಟ್ಟಿ ಮೋರ್ಲ, ಪ್ರಧಾನ ಸಂಚಾಲಕ ಗಿರೀಶ್ ಆಳ್ವ ಮೋರ್ಲ, ನರಿಂಗಾನ ಗ್ರಾಮ ಪಂಚಾಯಿತಿ ಅಧ್ಯಕ್ಷ ನವಾಜ್ ನರಿಂಗಾನ, ಯಕ್ಷಗಾನ ಅಕಾಡೆಮಿ ಸದಸ್ಯ ಗುರಿರಾಜ್ ಭಟ್ ಕೈರಂಗಳ, ಸಂಚಾಲಕರಾದ ಮುರಲೀಧರ ಶೆಟ್ಟಿ ಮೋರ್ಲ, ಸುಂದರ ಪೂಜಾರಿ ಕೋಡಿಮಜಲು, ಕಾರ್ಯದರ್ಶಿ ಪ್ರೇಮಾನಂದ ರೈ ನೆತ್ತಿಲಕೋಡಿ, ಜಗದೀಶ್ ಶೆಟ್ಟಿ ಮೋರ್ಲ, ಗುತ್ತಿಗೆದಾರ ಅರುಣ್ ಡಿಸೋಜ ನಟ್ಟಿಹಿತ್ಲು, ಐತಪ್ಪ ಶೆಟ್ಟಿ ದೇವಂದಪಡ್ಪು, ರವಿ ಪೂಜಾರಿ ಮುಡಿಮಾರು, ಗಂಗಾಧರ ಶೆಟ್ಟಿ ನೆತ್ತಿಲಕೋಡಿ, ಶಿವಪ್ರಸಾದ್ ಚೌಕ, ಮಾಧವ ಪೂಜಾರಿ ಕುದ್ಕೋರಿ ಹಾಗೂ ಕೋಣಗಳ ಯಜಮಾನರು ಉಪಸ್ಥಿತರಿದ್ದರು. ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾಯಿ ನಿರೂಪಿಸಿದರು.
ಸ್ಪೀಕರ್ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ಎರಡು ವರ್ಷ ವಿಜ್ರಂಭಣೆಯಿಂದ ಕಂಬಳ ನಡೆದಿದೆ. ಮೂರನೇ ವರ್ಷದ ತಯಾರಿಯಾಗಿ ಕೋಣಗಳಿಗೆ ಓಟದ ತರಬೇತಿ ಹಿನ್ನೆಲೆಯಲ್ಲಿ ಕುದಿ ಮುಹೂರ್ತ ನಡೆದಿದೆ. ಕಳೆದ ಸಾಲಿನಲ್ಲಿ ಜಿಲ್ಲೆಯ 24 ಕಂಬಳಗಳ ಪೈಕಿ ಅತಿಹೆಚ್ಚು ಕೋಣಗಳು ಸ್ಪರ್ಧಿಸಿದ ಮೂರನೇ ಹಾಗೂ ಯಾವುದೇ ಲೋಪಗಳಿಲ್ಲದೆ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾದ ಕಂಬಳ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
-ಪ್ರಶಾಂತ್ ಕಾಜವ ಮಿತ್ತಕೋಡಿ, ನರಿಂಗಾನ ಕಂಬಳ ಸಮಿತಿ ಕಾರ್ಯಾಧ್ಯಕ್ಷ