

ವಿಜಯವಾಣಿ ಸುದ್ದಿಜಾಲ ಧಾರವಾಡ
ಇತ್ತೀಚೆಗೆ ನಿಧನರಾದ ಕನ್ನಡ ಸಾಹಿತ್ಯದ ಬರಹಗಾರ ಕೆ.ಟಿ. ಗಟ್ಟಿ ನೂರಕ್ಕೂ ಹೆಚ್ಚು ಕನ್ನಡ ಕೃತಿಗಳನ್ನು ರಚಿಸಿದ್ದು, 50ಕ್ಕೂ ಹೆಚ್ಚು ಕಾದಂಬರಿಗಳು ಅವರನ್ನು ಜನಮಾನಸದಲ್ಲಿ ಅತ್ಯಂತ ಜನಪ್ರಿಯ ಲೇಖಕನಾಗಿ ನೆಲೆಸುವಂತೆ ಮಾಡಿವೆ. ಅವರ ಜೀವಿತ ಕಾಲದಲ್ಲಿ ತಮಗೆ ಸಲ್ಲಬೇಕಾಗಿದ್ದ ಪ್ರಶಸ್ತಿ ಗೌರವಗಳಿಂದ ವಂಚಿತರಾಗಿದ್ದಾರೆ ಎಂದು ವಿಮರ್ಶಕ ಡಾ. ಶ್ರೀಧರ ಹೆಗಡೆ ಭದ್ರನ್ ಅಭಿಪ್ರಾಯಪಟ್ಟರು.
ನಗರದ ಸಾಹಿತ್ಯಿಕ ಸಂಟನೆ ಅನ್ವೇಷಣ ಕೂಟವು ಸಾಧನಕೇರಿಯ ಚೈತ್ರದ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೆ.ಟಿ. ಗಟ್ಟಿ ಅವರ ಅಬ್ರಾಹ್ಮಣ ಕಾದಂಬರಿ ಕುರಿತು ಅವರು ಮಾತನಾಡಿದರು.
ಆಕಾಶವಾಣಿ ನಿವೃತ್ತ ನಿರ್ದೇಶಕ ಸಿ.ಯು.ಬೆಳ್ಳಕ್ಕಿ ಮಾತನಾಡಿ, ಗಟ್ಟಿ ಅವರೊಂದಿಗಿನ ಕೆಲ ವರ್ಷಗಳ ತಮ್ಮ ಸಂಬಂಧ ಸ್ಮರಿಸಿ, ಗಟ್ಟಿಯವರ ಹಾಸ್ಯ ಪ್ರಜ್ಞೆ, ಚಿಂತನಗಳು, ವೈಚಾರಿಕ ಬಾನುಲಿ ಸಾಹಿತ್ಯ ರಚನೆ ಕರಿತು ವಿವರಿಸಿದರು.
ಚಿಂತಕ ಪ್ರೊ. ದುಷ್ಯಂತ ನಾಡಗೌಡ ಅಧ್ಯತೆ ವಹಿಸಿದ್ದರು. ಅನ್ವೇಷಣ ಕೂಟದ ಅಧ್ಯ ನರಸಿಂಹ ಪರಾಂಜಪೆ, ವೆಂಕಟೇಶ ದೇಸಾಯಿ, ರಾಜೀವ ಪಾಟೀಲ ಕುಲಕಣಿರ್, ಆನಂದ ಪಾಟೀಲ, ವಾಸುದೇವ ಕುಲಕಣಿರ್, ಮನೋಜ ಪಾಟೀಲ, ಜಿ.ಆರ್.ಭಟ್ಟ, ಅನಂತ ಸಿದ್ಧೇಶ್ವರ, ಮಲ್ಲಿಕಾರ್ಜುನ ಚಿಕ್ಕಮಠ, ಪ್ರೊ.ಶಿವಾನಂದ ಶೆಟ್ಟರ, ಎಚ್.ವಿ. ಕಾಖಂಡಕಿ, ಗಿರೀಶ ವಾಜಪೇಯಿ, ಸಂಗಮೇಶ ಚಲವಾದಿ, ಎಂ.ಎಂ.ಮಾನೆ, ಎಸ್.ಬಿ.ದ್ವಾರಪಾಲಕ, ಎಸ್.ಎಸ್.ಬಂಗಾರಿಮಠ, ಎಸ್.ಎಂ.ದೇಶಪಾಂಡೆ, ಡಾ. ಮಂದಾಕಿನಿ ಪುರೋಹಿತ, ವಿಷಯಾ ಜೇವೂರ, ಇತರರು ಇದ್ದರು.