More

    KSRTC ಕೇರಳ ಪಾಲು: ಬಾಬಾ ಸಾಹೇಬ್ ಸಾರಿಗೆ ಸಂಸ್ಥೆ ಎಂದು ಹೆಸರಿಡಲು ಸಂಸದೆ ಸುಮಲತಾ ಸಲಹೆ

    ಮಂಡ್ಯ: ಸಾರಿಗೆ ಬಸ್‌ಗಳಲ್ಲಿ ಕೆಎಸ್ಸಾರ್ಟಿಸಿ ಹೆಸರು ಮತ್ತು ಲೋಗೋ ಕೇರಳಕ್ಕೆ ಮಾತ್ರ ಸೀಮಿತವೆಂದು ಭಾರತ ಸರ್ಕಾರದ ಟ್ರೇಡ್‌ಮಾರ್ಕ್ ರಿಜಿಸ್ಟ್ರಿ ಮಂಜೂರು ಮಾಡಿದೆ. ಹೀಗಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೆಎಸ್ಸಾರ್ಟಿಸಿ ಹೆಸರನ್ನು ಬದಲಿಸಬೇಕಾದ ಸ್ಥಿತಿ ಬಂದಿರುವ ಹಿನ್ನೆಲೆಯಲ್ಲಿ ಜಾಲತಾಣದಲ್ಲಿ ಅನೇಕರು ತಮಗೆ ಹೊಳೆಯುವ ಹೆಸರನ್ನು ಸೂಚಿಸುತ್ತಿದ್ದಾರೆ.

    ಸಂಸದೆ ಸುಮಲತಾ ಅಂಬರೀಷ್​ ಅವರು ಸಹ ಹೆಸರೊಂದನ್ನು ಸೂಚಿಸಿದ್ದು, ಈ ಸಂಬಂಧ ಸಿಎಂ ಬಿಎಸ್​ವೈ ಹಾಗೂ ಸಾರಿಗೆ ಸಚಿವರಿಗೆ ಪತ್ರ ಬರೆದಿದ್ದಾರೆ.

    ಸಾರಿಗೆ ಸಂಸ್ಥೆಗೆ ಬಾಬಾ ಸಾಹೇಬ್ ಸಾರಿಗೆ ಸಂಸ್ಥೆ ಎಂದು ನಾಮಕರಣ ಮಾಡಲು ಸಂಸದೆ ಸುಮಲತಾ ಅಂಬರೀಶ್ ಸಲಹೆ ನೀಡಿದ್ದಾರೆ. ಡಾ. ಬಿ.ಆರ್ ಅಂಬೇಡ್ಕರ್ ಅವರ ನೆನಪಿನಾರ್ಥ “ಬಾಬಾಸಾಹೇಬ್ ಸಾರಿಗೆ ಸಂಸ್ಥೆ” ಎಂದು ನಾಮಕರಣ ಮಾಡಿ ಎಂದು ಪತ್ರ ಬರೆದಿದ್ದಾರೆ.

    ಕರ್ನಾಟಕ ಮತ್ತು ಕೇರಳ ನಡುವೆ ಕಳೆದ 8 ವರ್ಷಗಳಿಂದ ವಿವಾದ ನಡೆಯುತ್ತಿತ್ತು. ಇದೀಗ ಟ್ರೇಡ್‌ಮಾರ್ಕ್ ರಿಜಿಸ್ಟ್ರಾರ್ ಆದೇಶದಿಂದಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬಸ್ಸುಗಳು, ಕಚೇರಿ ಸೇರಿ ಇನ್ನಿತರ ಕಡೆಗಳಲ್ಲಿ ಬಳಸಿರುವ ಕೆಎಸ್ಸಾರ್ಟಿಸಿ ಹೆಸರು ಮತ್ತು ಲೋಗೋವನ್ನು ತೆಗೆಯಬೇಕಾಗಿದೆ ಹಾಗೂ ಇನ್ನು ಮುಂದೆ ಕೆಎಸ್ಸಾರ್ಟಿಸಿ ಹೆಸರೂ ಬಳಸಲು ಅಧಿಕಾರವಿಲ್ಲದಂತಾಗಿದೆ. (ದಿಗ್ವಿಜಯ ನ್ಯೂಸ್​)

    ರಾಜ್ಯದ ಪಾಲಿಗೆ ಕಹಿ ಸುದ್ದಿ: KSRTC ಹೆಸರು, ಲೋಗೋ ಕಳೆದುಕೊಳ್ಳಲಿದೆ ಕರ್ನಾಟಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts