More

    ನಿಖಿಲ್ ಅಭ್ಯರ್ಥಿಯಾದರೆ ಕಾಂಗ್ರೆಸ್‌ಗೆ ಕಠಿಣ ಪರಿಸ್ಥಿತಿ ಬರಲ್ಲ

    ಮದ್ದೂರು: ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಅಂತಿಮವಾಗಿ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾದರೂ ಯಾವುದೇ ಚಿಂತೆಯಿಲ್ಲ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.


    ತಾಲೂಕಿನ ಕೆಸ್ತೂರು ಬಳಿಯ ಮಾಚಹಳ್ಳಿ ಕೆರೆಯನ್ನು 1 ಕೋಟಿ ರೂ. ವೆಚ್ಚದಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.


    ಸ್ಥಳೀಯರಿಗಿಂತ ಹೊರಗಡೆಯವರೇ ಅಂತಿಮವಾಗಿ ಅಭ್ಯರ್ಥಿಯಾಗುತ್ತಿರುವುದರಿಂದ ನಮ್ಮ ಪಕ್ಷದ ಅಭ್ಯರ್ಥಿ ಸ್ಟಾರ್ ಚಂದ್ರು ಅವರಿಗೆ ಸ್ಪರ್ಧೆ ಕಠಿಣವಾಗುವುದರ ಬದಲು ಸುಲಭವಾದಂತಾಗುತ್ತದೆ ಎಂದು ಪ್ರತಿಕ್ರಿಯಿಸಿದರು.


    ಬೆಂಗಳೂರು ಗ್ರಾಮಾಂತರದಿಂದ ಎಚ್.ಡಿ.ದೇವೇಗೌಡರ ಅಳಿಯ ಡಾ.ಸಿ.ಎನ್.ಮಂಜುನಾಥ್ ಅವರಿಗೆ ಬಿಜೆಪಿಯಿಂದ ಲೋಕಸಭೆಗೆ ಟಿಕೆಟ್ ಕೊಡಿಸಿರುವುದು ಹಾಸ್ಯಾಸ್ಪದವಾಗಿದೆ ಎಂದ ಶಾಸಕರು, ಜೆಡಿಎಸ್‌ನಿಂದ ಬಿಟ್ಟು ಬಿಜೆಪಿಯಿಂದ ಟಿಕೆಟ್ ಕೊಡಿಸಿರುವುದರಿಂದ ಅಲ್ಲಿ ಅವರ ಜೆಡಿಎಸ್ ಪಕ್ಷ ವೀಕ್ ಆಗಿದೆ ಎಂದು ಅವರೇ ತಿಳಿಸಿದಂತಾಗಿದೆ ಅಲ್ಲವೇ ಎಂದು ವ್ಯಂಗ್ಯವಾಡಿದರು.


    ಕೆಲವರಿಗೆ ವೈಯಕ್ತಿಕವಾಗಿ ಆರೋಗ್ಯದ ಸಮಸ್ಯೆಗಳಿರುತ್ತದೆ. ಆದರೆ ಅವುಗಳನ್ನು ಬಹಿರಂಗವಾಗಿ ಯಾರೂ ಹೇಳಿಕೊಳ್ಳುವುದಿಲ್ಲ. ಆದರೆ ಇವರು ತಮ್ಮ ಮಗನ ಪರವಾಗಿ ಜನರಲ್ಲಿ ಅನುಕಂಪ ಗಿಟ್ಟಿಸುವ ಸಲುವಾಗಿ ತಮ್ಮ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಮಾತನಾಡಿದರ ಬಗ್ಗೆ ಹೇಳಿದರು.


    ಮುಖಂಡರಾದ ಗೋವಿಂದು, ವೆಂಕಟೇಶ್, ಉಮೇಶ್, ದಾಸೇಗೌಡ, ಪುನೀತ್, ಶಿವರಾಜು, ಕುಮಾರ್, ಆರ್.ಸಿ.ಎಸ್. ಶಿವು, ಯರಗನಹಳ್ಳಿ ಹರೀಶ್, ನಟರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts