VIDEO| ಟೋಲ್​ ಮೊತ್ತ ಉಳಿಸಲು ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇನಲ್ಲಿ ಯೂ ಟರ್ನ್​​ ಹೊಡೆದ ಬಸ್​

KSRTC Bus
Published on

ರಾಮನಗರ: ಟೋಲ್​ ಉಳಿಸುವ ಭರದಲ್ಲಿ KSRTC ಬಸ್​ ಚಾಲಕನೋರ್ವ ಹೆದ್ದಾರಿಯ ಮಧ್ಯದಲ್ಲೇ ಯೂಟರ್ನ್​ ತೆಗೆದುಕೊಂಡು ಸಂಚರಿಸಿರುವ ಘಟನೆ ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇನಲ್ಲಿ ನಡೆದಿದೆ.

ಘಟನೆಯೂ ಬಿಡದಿ ಬಳಿ ನಡೆದಿದ್ದು, ಟೋಲ್​ ಕೂಗಳತೆ ದೂರದಲ್ಲಿರುವ ಸಮಯದಲ್ಲಿ ಚಾಲಕ ಏಕಾಏಕಿ ಯೂಟರ್ನ್​ ತೆಗೆದುಕೊಂಡು ಒನ್​​ವೇನಲ್ಲಿ ಸಂಚರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ನರಸಿಂಹ ಉಪಾಧ್ಯಾಯ ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ, ಸಾರಿಗೆ ಹಾಗು ಪೊಲೀಸ್​ ಇಲಾಖೆಯನ್ನು ಟ್ಯಾಗ್​ ಮಾಡಿ ಈಗಾದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.

ರಾಮನಗರ ಡಿಪೋಗೆ KSRTC ಬಸ್​ ಬಿಡದಿ ಸಮೀಪ ಟೋಲ್​ ಪ್ಲಾಜಾಗೆ ಕೂಗಳತೆ ದೂರದಲ್ಲಿರುವ ವೇಳೆ ಏಕಾಏಕಿ ಯೂಟರ್ನ್​ ತೆಗೆದುಕೊಳ್ಳುವ ಮೂಲಕ ವಾಹನ ಸವಾರರಲ್ಲಿ ಆತಂಕ ಸೃಷ್ಟಿಸಿದ್ದಾರೆ. ಈ ಕುರಿತು ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಕೆಲ ದಿನಗಳ ಹಿಂದೆ KSRTC ಚಾಲಕನೋರ್ವ ಎಕ್ಸ್​ಪ್ರೆಸ್​ವೇಯ ವಿರುದ್ಧ ದಿಕ್ಕಿನಲ್ಲಿ ಚಲಿಸಿದ ದೃಶ್ಯವನ್ನು ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್​ ಫೋನಿನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ವ್ಯಾಪಕ ಖಂಡನೆ ವ್ಯಕ್ತವಾದ ಮೇರೆಗೆ ಪೊಲೀಸರು ಚಾಲಕನ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net