More

    ಕ್ರೋಧಿನಾಮ ಸಂವತ್ಸರ ಯುಗಾದಿ ರಾಶಿ ಫಲ

    ಇಂದಿನಿಂದ ಕ್ರೋಧಿನಾಮ ಸಂವತ್ಸರ ಶುರು ಆಗುತ್ತದೆ. ಈ ಸಂವತ್ಸರದಲ್ಲಿ ಮೇಷದಿಂದ ಮೀನ ರಾಶಿಯತನಕ ಹನ್ನೆರಡು ರಾಶಿಯವರಿಗೆ ಹೇಗಿದೆ ಎಂಬುದರ ವಿವರ ಇಲ್ಲಿದೆ. ಮುಂದಿನ ಒಂದು ವರ್ಷ, ಅಂದರೆ ಮಾರ್ಚ್ 29, 2025ರವರೆಗೆ ಗೋಚಾರ ಫಲ ಹೇಗಿರುತ್ತದೆ ತಿಳಿದುಕೊಳ್ಳಿ. ಇದು ಗೋಚಾರದ ಫಲ ಮಾತ್ರ. ಇದರ ಸಲುವಾಗಿ ಗುರು, ಶನಿ, ರಾಹು-ಕೇತು ಗ್ರಹಗಳ ಚಲನೆಯನ್ನು ಮಾತ್ರ ಪರಿಗಣಿಸಲಾಗುತ್ತದೆ. ಇದರ ಹೊರತಾಗಿ ತುಂಬ ಮುಖ್ಯವಾದ ತೀರ್ವನಗಳನ್ನು ಮಾಡಬೇಕಿದ್ದಲ್ಲಿ ನಿಮ್ಮ ಜನ್ಮಜಾತಕವನ್ನು ಒಮ್ಮೆ ತೋರಿಸಿ, ಅದರ ಅನ್ವಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ.

    ಮೇಷ: ನಿಮ್ಮ ರಾಶಿಯಿಂದ 2ನೇ ಮನೆಯಲ್ಲಿ ಗುರು ಸಂಚರಿಸುವುದರಿಂದ ಕುಟುಂಬ, ವಾಕ್, ಧನ ಉತ್ತಮ ಬೆಳವಣಿಗೆ ಆಗುತ್ತದೆ. ಮನೆಯಲ್ಲಿ ಸಂತಸದ ವಾತಾವರಣ. ದಂಪತಿ, ಪ್ರೇಮಿಗಳ ಮಧ್ಯೆ ಬಾಂಧವ್ಯ ಗಟ್ಟಿ ಆಗಲಿದೆ. ಪ್ರಭಾವಿಗಳಾಗಿ ಬೆಳೆಯಲಿದ್ದೀರಿ. ಪಿತ್ರಾರ್ಜಿತ ಆಸ್ತಿ ವ್ಯಾಜ್ಯ ಬಗೆಹರಿಯಲಿದೆ. ಮಾರಾಟಕ್ಕಿಟ್ಟಿರುವ ಆಸ್ತಿಗೆ ಉತ್ತಮ ಬೆಲೆ ಸಿಗಲಿದೆ. ನಿಮ್ಮ ನಿರೀಕ್ಷೆಗೆ ತಕ್ಕ ಮೊತ್ತ, ಸ್ಥಳದಲ್ಲಿ ಮನೆ-ಕೃಷಿಭೂಮಿ ಖರೀದಿಗೆ ಸಿಗಲಿದೆ. ಲಾಭ ಸ್ಥಾನಾಧಿಪತಿ ಶನಿ 11ರಲ್ಲಿ (ಲಾಭ ಸ್ಥಾನ) ಸಂಚರಿಸಲಿದ್ದು, ನಿಧಾನವಾಗಿಯಾದರೂ ಲಾಭ ತರಲಿದೆ. 12ನೇ ಮನೆಯಲ್ಲಿ ರಾಹು ಸಂಚರಿಸುವಾಗ ವಿಪರೀತ ಖರ್ಚು, ನಷ್ಟ ಹಾಗೂ 6ನೇ ಮನೆಯಲ್ಲಿನ ಕೇತುವಿನಿಂದಾಗಿ ಧಾರ್ವಿುಕ ವಿಚಾರಗಳಲ್ಲಿ ಆಸಕ್ತಿ, ಹಣಕಾಸಿನ ಹರಿವು ಇರುತ್ತದೆ. ಆದಾಯ-1 ವ್ಯಯ-2 ಗೌರವ-1 ಅವಮಾನ-2 ಸುಖ-1 ದುಃಖ-1 ಆರೋಗ್ಯ-1 ಅನಾರೋಗ್ಯ-2

    ವೃಷಭ: ಗುರು ಗ್ರಹ ಜನ್ಮ ರಾಶಿಯಲ್ಲಿ ಸಂಚರಿಸುವಾಗ ನಾನಾ ಬಗೆಯಲ್ಲಿ ದುಃಖ ಸಹಜ. ಉದ್ಯೋಗವನ್ನು ಬಿಡಬಾರದು. ಕೆಲಸಗಳನ್ನು ಮನಸ್ಸಿಟ್ಟು ಮಾಡಲು ಸಾಧ್ಯವಾಗದಿರಬಹುದು. ವೇತನ ಹೆಚ್ಚಳ, ಬಡ್ತಿ ದೊರೆಯದಿರಬಹುದು. ಜನ್ಮ ಗುರುವಿಗೆ ಆರಾಧನೆ, ಶಾಂತಿ ಮಾಡುವುದು ಕ್ಷೇಮ. ಇದರಿಂದ ಔದ್ಯೋಗಿಕ, ಸಾಂಸಾರಿಕ, ಮಾನಸಿಕ ಒತ್ತಡಗಳಿಂದ ಹೊರಬರಬಹುದು. ಹತ್ತರಲ್ಲಿನ ಶನಿ ಸಂಚಾರವು ಉದ್ಯೋಗ, ವೃತ್ತಿಗೆ ಶುಭವಲ್ಲ. ನಿಮ್ಮ ಮೇಲೆ ಆಪಾದನೆ ಬರಬಹುದು. ಉದ್ಯೋಗ ಸ್ಥಳದಲ್ಲಿ ನಿಮ್ಮನ್ನೇ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುತ್ತಾರೆ. ಕೆಲಸ ಕಳೆದುಕೊಳ್ಳುವ ಆತಂಕ. 11ನೇ ಮನೆಯ ರಾಹುವಿನಿಂದ ಭೂವ್ಯವಹಾರ, ಷೇರು ವ್ಯವಹಾರದಲ್ಲಿ ಅನುಕೂಲ. ಮಕ್ಕಳ ಆರೋಗ್ಯ, ಭವಿಷ್ಯ, ಶಿಕ್ಷಣದ ಬಗ್ಗೆ ಎಚ್ಚರಿಕೆ ಅಗತ್ಯ. ಹಿಂದೆ ಮಾಡಿದ್ದ ಕಾರ್ಯಗಳಲ್ಲಿ ಸಮಸ್ಯೆಗಳಾಗಿ, ಆತಂಕ ಎದುರಾಗಲಿದೆ. ಆದಾಯ-1 ವ್ಯಯ-4 ಗೌರವ-4 ಅವಮಾನ-2 ಸುಖ-4 ದುಃಖ-2 ಆರೋಗ್ಯ-2 ಅನಾರೋಗ್ಯ-1

    ಮಿಥುನ: 12ರಲ್ಲಿ ಗುರು ಸಂಚಾರ. ಪ್ರಭಾವಿಗಳ ಜತೆ ವೈರತ್ವ, ವಿನಾಕಾರಣ ಖರ್ಚು, ಮಾನಸಿಕ ಹಿಂಸೆ, ಆತಂಕ ಸಾಧ್ಯತೆ. ಆರೋಗ್ಯ ವ್ಯತ್ಯಯಗಳಿಗೆ ಕಾರಣ ಪತ್ತೆ ಸಾಧ್ಯವಾಗದೆ, ವಿಪರೀತ ಖರ್ಚು. ಹೂಡಿಕೆಯಲ್ಲಿ ನಷ್ಟ. ವಾಹನ ಅಪಘಾತ ಸಾಧ್ಯತೆ. ಗುರುವಿನ ಆರಾಧನೆಯಿಂದ ದುಷ್ಪ್ರಭಾವ ಕಡಿಮೆ ಆಗುತ್ತದೆ. ಶನಿ 9ನೇ ಮನೆಯಲ್ಲಿ ಸಂಚರಿಸುವುದರಿಂದ ಅದೃಷ್ಟ ನಂಬಿ, ಮಾಡುವ ಕೆಲಸಕ್ಕೆ ಕೈ ಹಾಕಬಾರದು. ನೀವಾಗಿಯೇ ಕೋರ್ಟ್- ಕಚೇರಿ ಮೆಟ್ಟಿಲು ಹತ್ತಬಾರದು. ತಂದೆ ಅಥವಾ ತಂದೆ ಸಮಾನರ ದೈಹಿಕ ಸಮಸ್ಯೆ ಚಿಂತೆಗೀಡು ಮಾಡುತ್ತದೆ. 10ನೇ ಮನೆಯ ರಾಹುವಿನಿಂದಾಗಿ ಆಪ್ತರ ಅಗಲಿಕೆ, ಮಾನಸಿಕ ವೇದನೆ. ಕೆಲಸದ ಸ್ಥಳದಲ್ಲಿ ಅಪಕೀರ್ತಿ. 4ರಲ್ಲಿ ಕೇತು ಸಂಚರಿಸುವುದರಿಂದ ವಾಹನ, ಮನೆ ರಿಪೇರಿಗೆ ಸಿಕ್ಕಾಪಟ್ಟೆ ಖರ್ಚು, ತಾಯಿ ಅನಾರೋಗ್ಯದಿಂದ ಚಿಂತೆ. ತಪ್ಪು ನಿರ್ಧಾರಗಳಿಂದ ಮಾನಸಿಕ ಸ್ಥೈರ್ಯ ಕಡಿಮೆ ಆಗುತ್ತದೆ. ಆದಾಯ-1 ವ್ಯಯ-1 ಗೌರವ-2 ಅವಮಾನ-1 ಸುಖ-2 ದುಃಖ-1 ಆರೋಗ್ಯ-1 ಅನಾರೋಗ್ಯ-1

    ಕರ್ಕಾಟಕ: 11ರಲ್ಲಿ ಗುರು ಸಂಚರಿಸುವುದರಿಂದ ನಾನಾ ಬಗೆಯ ಲಾಭ. ಆರೋಗ್ಯ ಚೇತರಿಕೆ ನಿರೀಕ್ಷೆ. ಶತ್ರುಗಳ ಕಾಟ- ಹಿಂಸೆ ಕಡಿಮೆ ಆಗಲಿದೆ. ವಾಹನ-ಗೃಹಲಾಭ ಮೊದಲಾದ ಶುಭಫಲ. ಉತ್ತಮ ಸ್ಥಾನಮಾನ, ಗೌರವ, ವಿದೇಶ ಪ್ರಯಾಣ ಸಾಧ್ಯತೆ. 8ರಲ್ಲಿ ಶನೈಶ್ಚರ ಸಂಚರಿಸುವುದರಿಂದ ಅವಮಾನಕ್ಕೆ ಗುರಿ. ವರ್ಚಸ್ಸಿಗೆ ಹಾನಿ. ಸಣ್ಣಪುಟ್ಟ ಅಪಘಾತ, ತೀವ್ರ ಅನಾರೋಗ್ಯ, ವಿಪರೀತ ಖರ್ಚು, ಚಿಂತೆ. 9ರಲ್ಲಿ ರಾಹು ಸಂಚರಿಸುವಾಗ ಅತಿ ಆತ್ಮವಿಶ್ವಾಸ ಕಾರಣಕ್ಕೆ ಹಿನ್ನಡೆ. ಇನ್ನೇನು ಕೈಗೆ ಸಿಕ್ಕೇಬಿಟ್ಟಿತು ಎಂಬಂಥದ್ದು ಹಾಗೇ ಜಾರಿಹೋಗಲಿದೆ. ಹೆಣ್ಣುಮಕ್ಕಳಿಗೆ ತವರುಮನೆಯ ಸ್ಥಿತಿ ಚಿಂತೆಗೆ ಕಾರಣ ಆಗಲಿದೆ. 3ರಲ್ಲಿನ ಕೇತುವಿನಿಂದ ಧರ್ಮಕಾರ್ಯದಲ್ಲಿ ಪಾಲ್ಗೊಳ್ಳುವ ಮನಸ್ಸು. ಸಾಲ ದೊರೆಯಲಿದೆ. ಆದಾಯ-2 ವ್ಯಯ-4 ಗೌರವ-1 ಅವಮಾನ-3 ಸುಖ-3 ದುಃಖ-1 ಆರೋಗ್ಯ-3 ಅನಾರೋಗ್ಯ-1

    ಸಿಂಹ: ಗುರು 10ನೇ ಮನೆಯಲ್ಲಿ ಸಂಚರಿಸುವಾಗ ಕೆಲಸಗಳಲ್ಲಿ ನಿರಾಸಕ್ತಿ. ವೃತ್ತಿ, ವ್ಯಾಪಾರದಲ್ಲಿ ಗಾಡ್​ಫಾದರ್ ಆಗಿದ್ದವರಿಂದ ಸಹಾಯ ಸ್ಥಗಿತ ಸಾಧ್ಯತೆ. ಉದ್ಯೋಗ ಬದಲಿಸಿದರೂ ಅನುಕೂಲ ಆಗದು. ವೃತ್ತಿ-ವ್ಯಾಪಾರ ಕೈ ಹಿಡಿಯುವುದಿಲ್ಲ. ಕೆಲವು ವ್ಯವಹಾರ ನಿಲ್ಲಿಸಲಿದ್ದೀರಿ. 7ನೇ ಮನೆಯಲ್ಲಿ ಶನಿ ಸಂಚರಿಸುವಾಗ ವೈವಾಹಿಕ ವಿಚಾರಗಳಲ್ಲಿ ಹಿನ್ನಡೆ. ನಿಶ್ಚಿತಾರ್ಥ ಆದವರು ಮಾತುಕತೆಯಲ್ಲಿ ಎಚ್ಚರಿಕೆಯಿಂದ ಇರಬೇಕು. ಬೇರೆಯವರ ಚಾಡಿಗೆ ಕಿವಿಗೊಡಬೇಡಿ. ಪಾರ್ಟನರ್​ಷಿಪ್ ವ್ಯವಹಾರ ಮಾಡುತ್ತಿರುವವರಲ್ಲಿ ಅಭಿಪ್ರಾಯಭೇದ. ಚರ್ಚೆ ಮೂಲಕ ಬಗೆಹರಿಸಿಕೊಳ್ಳಿ. ವೃಥಾ ಅಲೆದಾಟ, ದಣಿವು- ನಿರುತ್ಸಾಹ. 8ರಲ್ಲಿನ ರಾಹುವಿನಿಂದ ಜೀವನಶೈಲಿಗೆ ಸಂಬಂಧಿಸಿದಂತೆ ಅನಾರೋಗ್ಯ. ಮಾತುಗಳಿಂದ ವಿವಾದ. 2ರಲ್ಲಿನ ಕೇತುವಿನಿಂದಾಗಿ ಹಣದ ವಂಚನೆ, ದಾಂಪತ್ಯ ವಿರಸ, ವೃಥಾ ವಾಗ್ವಾದ. ಆದಾಯ-1 ವ್ಯಯ-5 ಗೌರವ-1 ಅವಮಾನ-2 ಸುಖ-1 ದುಃಖ-1 ಆರೋಗ್ಯ-5 ಅನಾರೋಗ್ಯ-2

    ಕನ್ಯಾ: ಗುರು ಗ್ರಹ 9ನೇ ಮನೆಯಲ್ಲಿ ಸಂಚರಿಸುವುದರಿಂದ ಬರಬೇಕಾದ ಹಣ, ಆಸ್ತಿ, ವ್ಯಾಪಾರದಲ್ಲಿನ ಪಾಲು, ಲಾಭ ಪಡೆಯುವುದಕ್ಕೆ ಅನುಕೂಲ. ಉತ್ತಮ ಮನೆ, ವಾಹನ ಬಳಸುವ ಯೋಗ. ಸಾಮಾಜಿಕ ಸ್ಥಾನಮಾನ ಹೆಚ್ಚಳ. ಕಾನೂನು ಅಡೆತಡೆ ನಿವಾರಣೆ. ಆರೋಗ್ಯ ಸಮಸ್ಯೆಗೆ ಸೂಕ್ತ ವೈದ್ಯೋಪಚಾರ. ನಿಮ್ಮಲ್ಲಿ ಒಂದು ಆಕರ್ಷಣಾ ಶಕ್ತಿ ಬರಲಿದೆ ಅಥವಾ ಹೆಚ್ಚಾಗಲಿದೆ. 6ನೇ ಮನೆಯಲ್ಲಿ ಶನಿ ಸಂಚರಿಸುವುದರಿಂದ ನಿಮ್ಮನ್ನು ಮಣಿಸುವುದಕ್ಕೆ, ದಣಿಸುವುದಕ್ಕೆ ಶತ್ರುಗಳು ಮಾಡುವ ಯತ್ನ ವಿಫಲ. ನಿಮ್ಮ ವಿಶ್ವಾಸಾರ್ಹತೆ ಕಳೆಯಲು ಇತರರು ಮಾಡುವ ಪ್ರಯತ್ನಗಳು ಅನುಕೂಲವಾಗಿ ಪರಿಣಮಿಸುತ್ತವೆ. ಆದಾಯದಲ್ಲಿ ಹೆಚ್ಚಳ. 7ನೇ ಮನೆಯಲ್ಲಿ ರಾಹು ಸಂಚರಿಸುವುದರಿಂದ ದಂಪತಿ/ಪ್ರೇಮಿಗಳ ಮಧ್ಯೆ ಮುನಿಸು, ಅಭಿಪ್ರಾಯಭೇದ ಸಾಧ್ಯತೆ. ಕೇತುವಿನಿಂದ ಆಲಸ್ಯ ಹೆಚ್ಚಳ. ದೊಡ್ಡ ಮಟ್ಟದಲ್ಲಿ ಉದ್ವಿಗ್ನತೆ. ಆದಾಯ-1 ವ್ಯಯ-1 ಗೌರವ-2 ಅವಮಾನ-1 ಸುಖ-2 ದುಃಖ-1 ಆರೋಗ್ಯ-1 ಅನಾರೋಗ್ಯ-1

    ತುಲಾ: 8ರಲ್ಲಿ ಗುರು ಸಂಚರಿಸುವುದರಿಂದ ನಿಮ್ಮ ಮೇಲೆ ನಿಮಗೇ ಅಪನಂಬಿಕೆ. ಆತ್ಮವಿಶ್ವಾಸ ಕೊರತೆ. ಸಣ್ಣ ಕೆಲಸ ಮಾಡುವುದಕ್ಕೂ ಇತರರ ಸಹಾಯ ಪಡೆಯಬೇಕಾಗುತ್ತದೆ. ಉದ್ಯೋಗಸ್ಥರಾಗಿದ್ದಲ್ಲಿ ಕೆಲಸ ಬಿಟ್ಟು, ಸ್ವಂತ ವ್ಯಾಪಾರ ಮಾಡಬೇಕು ಎನಿಸುತ್ತದೆ. ಆದರೆ ಭಾರಿ ನಷ್ಟ ಕಾಣುತ್ತೀರಿ. ಧ್ಯಾನ, ಯೋಗ, ಪ್ರಾಣಾಯಾಮ ಆರಂಭಿಸಿ. 5ರಲ್ಲಿ ಶನಿ ಸಂಚರಿಸುವಾಗ ಎಲ್ಲ ವಿಚಾರದಲ್ಲೂ ಅನುಮಾನ. ನಿಮ್ಮದಲ್ಲದ ತಪ್ಪನ್ನೂ ನೀವು ಒಪ್ಪಿಕೊಳ್ಳಬೇಕಾಗುತ್ತದೆ. ಮಕ್ಕಳಿಂದ ನೆಮ್ಮದಿಗೆ ಭಂಗ. ಅಥವಾ ಸಂತಾನ ವಿಚಾರಕ್ಕೆ ಚಿಂತೆ. ಹಣ ಹೂಡಿಕೆ ಮಾಡುವವರು ಎಚ್ಚರ ವಹಿಸಿ. ಸಾಲ ಮಾಡುವುದು- ಕೊಡಿಸುವುದು ಎರಡೂ ಅಪಾಯ. 6ನೇ ಮನೆಯ ರಾಹುವಿನಿಂದ ಭೂಮಿ-ಜಮೀನು ವ್ಯವಹಾರ ನಿಮ್ಮಂತೆ ಆಗಬಹುದು. ಸಂಧಾನದಿಂದ ಹಲವು ವ್ಯವಹಾರ ಲಾಭದಾಯಕ. ವ್ಯಯ ಸ್ಥಾನದ ಕೇತುವಿನಿಂದ ಕೆಟ್ಟ ಕಾರ್ಯಗಳಲ್ಲಿ ಜಾಸ್ತಿ ಆಸಕ್ತಿ. ಏಕಾಗ್ರತೆ ಕೊರತೆ. ಆದಾಯ-1 ವ್ಯಯ-4 ಗೌರವ-4 ಅವಮಾನ-2 ಸುಖ-4 ದುಃಖ-2 ಆರೋಗ್ಯ-2 ಅನಾರೋಗ್ಯ-1

    ವೃಶ್ಚಿಕ: 7ರಲ್ಲಿ ಗುರು ಸಂಚರಿಸುವುದರಿಂದ ವಿವಾಹ ವಿಚಾರದಲ್ಲಿ ಉತ್ತಮ ಪ್ರಗತಿ ನಿರೀಕ್ಷೆ. ಪ್ರೇಮಿಗಳ ಮಧ್ಯೆ ಅಭಿಪ್ರಾಯಭೇದ. ದೂರಾಗಿದ್ದಲ್ಲಿ ಮತ್ತೆ ಒಂದಾಗುವ ಅವಕಾಶ. ನಿಮ್ಮ ಮಾತಿನಲ್ಲಿ ಸಕಾರಾತ್ಮಕ ಬದಲಾವಣೆ ನಿರೀಕ್ಷೆ. ಹಿಂದೆ ಮಾಡಿದ್ದ ಉತ್ತಮ ಕೆಲಸಗಳ ಫಲ ಈಗ ಲಭ್ಯ. ಮನಸ್ಸಿನಲ್ಲಿರುವ ಪ್ರೇಮದ ವಿಚಾರ ನಿವೇದಿಸಲು ಉತ್ತಮ ಸಮಯ. ಸಂತಾನ ಅಪೇಕ್ಷಿತರಿಗೆ ಶುಭವಾರ್ತೆ. 4ರಲ್ಲಿನ ಶನಿಯಿಂದ ನೀವಾಗಿಯೇ ಸಮಸ್ಯೆ ಮೈಮೇಲೆ ಹಾಕಿಕೊಳ್ಳಲಿದ್ದೀರಿ. ಮನೆ- ವಾಹನ ದುರಸ್ತಿಗೆ ಖರ್ಚು. ತಪ್ಪು ಎಂದು ಗೊತ್ತಿದ್ದೂ ಕೆಲವು ಕೆಲಸಗಳನ್ನು ಮಾಡಿ, ಇತರರ ಸಿಟ್ಟಿಗೆ ಕಾರಣ ಆಗುತ್ತೀರಿ. ತಾಯಿಯ ಅಥವಾ ತಾಯಿ ಸಮಾನರ ಅನಾರೋಗ್ಯದಿಂದ ಚಿಂತೆ. 5ರಲ್ಲಿನ ರಾಹುವಿನಿಂದ ಮಕ್ಕಳ ಭವಿಷ್ಯದ ಚಿಂತೆ. ಮಾನಸಿಕ ಖಿನ್ನತೆ ಕಾಡಬಹುದು. 11ರಲ್ಲಿನ ಕೇತುವಿನಿಂದ ಧಾರ್ವಿುಕ ಪ್ರಜ್ಞೆ ಹೆಚ್ಚಳ. ನಿಧಾನಗತಿಯ ನಿರ್ಧಾರದಿಂದ ಕೆಲವು ಅನುಕೂಲ. ಆದಾಯ-1 ವ್ಯಯ-2 ಗೌರವ-1 ಅವಮಾನ-2 ಸುಖ-1 ದುಃಖ-1 ಆರೋಗ್ಯ-1 ಅನಾರೋಗ್ಯ-2

    ಧನುಸ್ಸು: 6ರಲ್ಲಿ ಗುರು ಸಂಚರಿಸುವಾಗ ಆರೋಗ್ಯ, ವಾಹನ, ಮನೆದುರಸ್ತಿ ಮುಂತಾದ ಕೆಲಸ ಮುಂದೂಡುವ ಪ್ರವೃತ್ತಿ. ಹಾಗೆ ಮಾಡಬೇಡಿ. ದೊಡ್ಡ ಹುದ್ದೆಯಲ್ಲಿರುವವರ ಜತೆ ಎಚ್ಚರ. ಅನಿಸಿದ್ದನ್ನು ನೇರ ಮಾತನಾಡುವ ಧೋರಣೆ ಬೇಡ. ವಿರೋಧಿಗಳು-ಶತ್ರುಗಳ ಬಗ್ಗೆ ಜಾಗ್ರತೆ. 3ರಲ್ಲಿ ಶನಿ ಸಂಚರಿಸುವಾಗ ಅಂದುಕೊಂಡ ಕೆಲಸಗಳನ್ನು ಶತಾಯಗತಾಯ ಮಾಡಲಿದ್ದೀರಿ. ಯಾರ ಜತೆ ಹೇಗೆ, ಏನು ಮಾತನಾಡಿದರೆ ಕೆಲಸ ಆಗುತ್ತವೆ ಎಂಬ ಲೆಕ್ಕಾಚಾರ, ಬುದ್ಧಿವಂತಿಕೆ ಹೆಚ್ಚಳ. ಆದಾಯ ಹೆಚ್ಚಿಸಿಕೊಳ್ಳುವ ಅವಕಾಶ. ಸೋದರಸಂಬಂಧಿಗಳ ಜತೆ ಮನಸ್ತಾಪವಾದರೂ ಶುಭಫಲ ನಿರೀಕ್ಷೆ. 4ರಲ್ಲಿನ ರಾಹುವಿನಿಂದ ಜಮೀನು ವ್ಯಾಜ್ಯ, ಸ್ನೇಹಿತರ ಜತೆ ಕಲಹ, ತಾಯಿ ಜತೆ ಮನಸ್ತಾಪ. ಹತ್ತರ ಕೇತುವಿನಿಂದ ಕೆಲಸಗಳಲ್ಲಿ ಅಡ್ಡದಾರಿ ಹಿಡಿದು, ಸಮಸ್ಯೆ ಸೃಷ್ಟಿ. ಆದಾಯ-5 ವ್ಯಯ-2 ಗೌರವ-2 ಅವಮಾನ-3 ಸುಖ-2 ದುಃಖ-1 ಆರೋಗ್ಯ-0 ಅನಾರೋಗ್ಯ-1

    ಮಕರ: 5ರಲ್ಲಿನ ಗುರುವಿನಿಂದಾಗಿ ನಷ್ಟಗಳು ಲಾಭವಾಗಿ ಪರಿವರ್ತನೆ ಆಗುವ ಯೋಗ. ಉದ್ಯೋಗ, ವ್ಯಾಪಾರಗಳಲ್ಲಿ ಕೀರ್ತಿ, ಯಶಸ್ಸು. ಹಿಂದೆ ನಿಮ್ಮೊಂದಿಗೆ ಕೆಲಸ ಮಾಡುತ್ತಿದ್ದವವರಿಂದ ಉದ್ಯೋಗದ ಉತ್ತಮ ಆಫರ್. ಸಾಮಾಜಿಕ, ಶೈಕ್ಷಣಿಕ ಸಾಧನೆ ಚೆನ್ನಾಗಿರಲಿದೆ. ಕನಸುಗಳನ್ನು ಈಡೇರಿಸಿಕೊಳ್ಳುವ ಸಮಯ. 2ರಲ್ಲಿನ ಶನಿಯಿಂದಾಗಿ ಮಾತಿನಲ್ಲಿ ಒರಟುತನ. ಸಂಗಾತಿ ಜತೆ ಕಲಹ, ಮನಸ್ತಾಪ. ಬೆಂಬಿಡದ ಚಿಂತೆ. ಹಣ ಹರಿವು ನಿಧಾನ. 3ರಲ್ಲಿ ರಾಹು ಸಂಚರಿಸುವಾಗ ಎಲ್ಲರ ಬಗ್ಗೆ, ಎಲ್ಲ ವಿಚಾರಗಳಲ್ಲಿ ಆತ್ಮವಿಶ್ವಾಸ. ಆದಾಯದ ದಾರಿಗಳು ಗೋಚರ. ಭೂವ್ಯವಹಾರದಲ್ಲಿ ಲಾಭ ನಿರೀಕ್ಷೆ. ಪ್ರತಿಷ್ಠೆ ಮಾಡಿಕೊಳ್ಳಬೇಡಿ. 9ರಲ್ಲಿನ ಕೇತುವಿನಿಂದ ಷೇರು- ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಜಾಗ್ರತೆ. ತಂದೆಗೆ ಅನಾರೋಗ್ಯ. ಕೆಲವು ಕೆಲಸಗಳಿಗೆ ಆರಂಭ ವಿಘ್ನ. ಆದಾಯ-1 ವ್ಯಯ-1 ಗೌರವ-2 ಅವಮಾನ-1 ಸುಖ-2 ದುಃಖ-2 ಆರೋಗ್ಯ-1 ಅನಾರೋಗ್ಯ-4

    ಕುಂಭ: 4ರ ಗುರುನಿಂದಾಗಿ ತಾಯಿ ಅಥವಾ ತಾಯಿ ಸಮಾನರಾದವರ ವರ್ತನೆ, ಆರೋಗ್ಯ ವಿಚಾರ, ಮನೆ-ವಾಹನಗಳು, ಗೆಳೆಯ- ಗೆಳತಿಯರ ನಡವಳಿಕೆ ಯಿಂದ ಬೇಸರ. ಆಸ್ತಿ ವಿಚಾರಕ್ಕೆ ಅಡ್ವಾನ್ಸ್ ನೀಡಿ, ನಷ್ಟ. ಸಂಬಂಧಿಗಳು, ಸ್ನೇಹಿತರು ಹಳೇ ದ್ವೇಷ ಸಾಧನೆ. ಹಿತೈಷಿ ಯಾರು, ವಿರೋಧಿ ಯಾರೆಂಬುದೇ ಗೊಂದಲ. ಚೀಟಿ, ಚೈನ್​ಲಿಂಕ್ ವ್ಯವಹಾರಗಳಿಂದ ನಷ್ಟ. ನಿಮ್ಮದೇ ಜನ್ಮರಾಶಿಯಲ್ಲಿ, ಅಂದರೆ 1ನೇ ಮನೆಯಲ್ಲಿ ಶನಿ ಸಂಚರಿಸುವುದರಿಂದ ದೈಹಿಕ ಬಾಧೆ. ಹೊಟ್ಟೆ- ಬೆನ್ನು ನೋವು, ಅಜೀರ್ಣ, ದೀರ್ಘ ಅನಾರೋಗ್ಯ. ಕುಟುಂಬ, ಉದ್ಯೋಗ, ವೃತ್ತಿ, ವ್ಯಾಪಾರದಲ್ಲಿ ಕುಗ್ಗಲಿದೆ ನಿಮ್ಮ ಪ್ರಾಮುಖ್ಯ. 8ರಲ್ಲಿನ ಕೇತುವಿನಿಂದಾಗಿ ನಿಮ್ಮದಲ್ಲದ ತಪ್ಪಿಗೆ ಭಾರಿ ಬೆಲೆ ತೆರಲಿದ್ದೀರಿ. ಆದಾಯ-1 ವ್ಯಯ-1 ಗೌರವ-2 ಅವಮಾನ-1 ಸುಖ-2 ದುಃಖ-2 ಆರೋಗ್ಯ-1 ಅನಾರೋಗ್ಯ-4

    ಮೀನ: 3ರಲ್ಲಿನ ಗುರುವಿನಿಂದಾಗಿ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದಿಲ್ಲ. ನಿಮಗೆ ಸಿಗಬೇಕಾದ ಗೌರವ, ಆಸ್ತಿ, ಹುದ್ದೆ, ವೇತನ ಹೆಚ್ಚಳ ಬೇರೆಯವರ ಪಾಲಾಗಲಿವೆ. ಕೆಲವು ಸನ್ನಿವೇಶದಲ್ಲಿ ನೀವೇ ಹಠಕ್ಕೆ ಬಿದ್ದು, ಪ್ರತಿಷ್ಠೆಯಾಗಿ ತೆಗೆದುಕೊಂಡು, ಸಮಸ್ಯೆ ಮಾಡಿಕೊಳ್ಳಲಿದ್ದೀರಿ. ಫಾಲೋಅಪ್ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ. ನಾನೇ ಸರಿ ಎಂಬ ಧೋರಣೆ ಬಿಡಿ. 12ರಲ್ಲಿ ಶನಿ ಇರುವುದರಿಂದ ಹೂಡಿಕೆಯಲ್ಲಿ ನಷ್ಟ. ವ್ಯಾಪಾರ- ವೃತ್ತಿಗಳಲ್ಲಿ ಸಕ್ರಿಯವಾಗಲು ಸಾಧ್ಯವಾಗದೆ ಧನನಷ್ಟ. ಸಾಲ ಮಾಡಿದ ಹಣದಲ್ಲಿ ಹೊಸ ಹೂಡಿಕೆ ಸಲ್ಲದು. ಜನ್ಮರಾಶಿಯಲ್ಲಿ ರಾಹು ಇರುವುದರಿಂದ ಭಾವನಾತ್ಮಕವಾಗಿ ದುರ್ಬಲರಾಗುತ್ತೀರಿ. ಮಾಸ್ಟರ್ ಚೆಕ್ ಅಪ್ ಮಾಡಿಸಿಕೊಳ್ಳುವುದು ಕ್ಷೇಮ. 7ರಲ್ಲಿನ ಕೇತುವಿನಿಂದಾಗಿ ವೈವಾಹಿಕ ಜೀವನದಲ್ಲಿ ವಿರಸ, ಪಾರ್ಟನರ್​ಷಿಪ್ ವ್ಯವಹಾರದಲ್ಲಿ ನಷ್ಟ. ಆದಾಯ-5 ವ್ಯಯ-2 ಗೌರವ-2 ಅವಮಾನ-3 ಸುಖ-2 ದುಃಖ-1 ಆರೋಗ್ಯ-0 ಅನಾರೋಗ್ಯ-1

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts