ಮಿಲನ ಜತೆ ಕೃಷ್ಣ ಡಿನ್ನರ್‌ಗೆ ಹೋಗಿದ್ದು ಯಾಕೆ ಗೊತ್ತಾ?

Darling Krishna Final
Published on

‘ಡಾರ್ಲಿಂಗ್’ ಖ್ಯಾತಿಯ ಕೃಷ್ಣ ಮತ್ತು ಮಿಲನ ಮದುವೆಯಾಗುತ್ತಿರುವುದು ಗೊತ್ತಲ್ವಾ? ‘ಲವ್ ಮಾಕ್‌ಟೇಲ್’ ಬಿಡುಗಡೆಯಾದ ಸಂದರ್ಭದಲ್ಲಿ ಕೃಷ್ಣ ಮತ್ತು ಮಿಲನ ಇಬ್ಬರೂ ಪರಸ್ಪರ ಪ್ರೀತಿಸುತ್ತಿರುವುದಾಗಿ ಹೇಳುವುದರ ಜತೆಗೆ, ಮದುವೆಯಾಗುವುದಾಗಿಯೂ ಮಾಧ್ಯಮದವರೊಂದಿಗೆ ಹೇಳಿಕೊಂಡಿದ್ದರು.

ಲಾಕ್‌ಡೌನ್ ಇರುವುದರಿಂದ ಮದುವೆ ಸದ್ಯಕ್ಕಿಲ್ಲ ಬಿಡಿ. ಈ ಮಧ್ಯೆ, ಕೃಷ್ಣ ಒಂದು ಫೋಟೋ ಶೇರ್ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ, ಮಿಲನ ಜತೆಗೆ ಡಿನ್ನರ್‌ಗೆ ಹೋದ ಸಂದರ್ಭದಲ್ಲಿ ಕ್ಲಿಕ್ಕಿಸಿದ ಒಂದು ಫೋಟೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಾಕುವುದರ ಜತೆಗೆ, ಚಿತ್ರ ನೋಡಿ ಗೆಲ್ಲಿಸಿದ ಪ್ರೇಕ್ಷಕರಿಗೆ ಥ್ಯಾಂಕ್ಸ್ ಹೇಳಿದ್ದಾರೆ.

‘‘ಲವ್ ಮಾಕ್ಟೇಲ್’ ಬಿಡುಗಡೆಗೂ ಮುನ್ನ ಮಿಲನ ಜತೆಗೆ ಒಮ್ಮೆ ಡಿನ್ನರ್‌ಗೆ ಹೋಗಿದ್ದೆ. ಹಿಂದೆ ಒಂದು ವರ್ಷದ ಶ್ರಮವಿತ್ತು. ಮುಂದೆ ಚಿತ್ರದ ಬಿಡುಗಡೆಯಿತ್ತು. ನಾಳೆ ಏನಾಗುತ್ತದೆ ಎಂದು ಗೊತ್ತಿರಲಿಲ್ಲ. ಮಿಲನಗೆ ಥ್ಯಾಂಕ್ಸ್ ಹೇಳುವುದರ ಜತೆಗೆ ಅವಳು ಖುಷಿಯಾಗಿರುವಂತೆ ಮಾಡಬೇಕಿತ್ತು. ಏಕೆಂದರೆ, ನಾಳೆ ಬಹಳ ಅನಿಶ್ಚಿತವಾಗಿತ್ತು. ಆದರೆ, ಕೊನೆಗೂ ನಾವು ಗೆದ್ದಿದ್ದೇವೆ ಎಂಬ ಸಂತೋಷವಿದೆ. ಆ ಗೆಲುವು ಕೊಟ್ಟಿದ್ದಕ್ಕೆ, ನಿಮಗೆಲ್ಲಾ ಧನ್ಯವಾದಗಳು’ ಎಂದು ಈ ಟ್ವೀಟ್ ಮೂಲಕ ಥ್ಯಾಂಕ್ಸ್ ಹೇಳಿದ್ದಾರೆ ಕೃಷ್ಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net