More

  ರಾಮಜನ್ಮಭೂಮಿ ಗೆದ್ದಾಯ್ತು ಮುಂದಿನದು ಶ್ರೀಕೃಷ್ಣ ಜನ್ಮಭೂಮಿ: ಸಿಎಂ ಯೋಗಿ ಆದಿತ್ಯನಾಥ್​ ಸುಳಿವು

  ಲಖನೌ: ಜನವರಿ 22ರಂದು ಅಯೋಧ್ಯೆಯ ನೂತನ ರಾಮಮಂದಿರದಲ್ಲಿ ನಡೆದ ಪ್ರಾಣಪ್ರತಿಷ್ಠಾ ಕಾರ್ಯಕ್ರಮವನ್ನು ಸ್ವಾಗತಿಸಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​, ಬಿಜೆಪಿಯ ಆದ್ಯತೆಯ ಪಟ್ಟಿಯಲ್ಲಿ ಕೃಷ್ಣ ಜನ್ಮಭೂಮಿ ಭೂ ವಿವಾದ ಮುಂದಿನ ಸ್ಥಾನದಲ್ಲಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

  ಇಂದು ಉತ್ತರ ಪ್ರದೇಶದ ವಿಧಾನಸಭೆಯಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್​, ನಂದಿ ಬಾಬಾ (ಶಿವನ ದೈವಿಕ ಗೂಳಿ) ಅಯೋಧ್ಯೆಯಲ್ಲಿ ನಡೆದ ಆಚರಣೆಗಳನ್ನು ನೋಡಿದ ನಂತರ ಅಚಲವಾದರು ಮತ್ತು ರಾತ್ರಿಯಲ್ಲಿ ಬ್ಯಾರಿಕೇಡ್‌ಗಳನ್ನು ಕಿತ್ತೆಸೆದರು. ಈಗ, ನಮ್ಮ ಕೃಷ್ಣ ಕನ್ಹಯ್ಯಾ ಅಚಲವಾಗಿದ್ದಾರೆ ಎನ್ನುವ ಮೂಲಕ ಬಿಜೆಪಿಯ ಮುಂದಿನ ಸರದಿ ಮಥುರಾ ದೇವಾಲಯ ಎಂಬ ಸುಳಿವನ್ನು ನೀಡಿದರು.

  ಸಿಎಂ ಯೋಗಿ ತಮ್ಮ ಮಾತುಗಳಲ್ಲಿ ಜ್ಞಾನವಾಪಿ ಮಸೀದಿ ವಿವಾದದವನ್ನು ಪರೋಕ್ಷವಾಗಿ ಉಲ್ಲೇಖಿಸಿದರು. ಸುಮಾರು ಮೂರು ದಶಕಗಳ ನಂತರ ಕಳೆದ ವಾರ ನ್ಯಾಯಾಲಯದ ಆದೇಶದ ನಂತರ ಜ್ಞಾನವಾಪಿ ಮಸೀದಿ ಸಂಕೀರ್ಣದ ನೆಲಮಾಳಿಗೆಯಲ್ಲಿ ಹಿಂದು ಆಚರಣೆಗಳು ಪುನಾರಂಭವಾಗಿದೆ. ಹೀಗಾಗಿ ಆದಿತ್ಯನಾಥ್ ಅವರು “ನಂದಿ ಬಾಬಾ” ಬ್ಯಾರಿಕೇಡ್‌ಗಳನ್ನು ತೆರೆದರು ಎಂದು ಉಲ್ಲೇಖಿಸಿದ್ದಾರೆ. ರಾತ್ರಿ 3 ಗಂಟೆಗೆ ‘ವ್ಯಾಸ್ ಕಾ ತಹಖಾನಾ’ ಎಂದು ಕರೆಯಲ್ಪಡುವ ಮಸೀದಿಯ ಸಂಕೀರ್ಣದಲ್ಲಿ ಹಿಂದೂ ಪ್ರಾರ್ಥನೆಗಳನ್ನು ನಡೆಯುತ್ತಿದೆ. ಗಮನಾರ್ಹವಾಗಿ, ನೆಲಮಾಳಿಗೆಯು ಪಕ್ಕದಲ್ಲಿರುವ ಕಾಶಿ ವಿಶ್ವನಾಥ ದೇವಾಲಯದಲ್ಲಿರುವ ನಂದಿ ವಿಗ್ರಹದ ಎದುರಿಗಿದೆ.

  ಭಾರತೀಯ ಪುರಾತತ್ವ ಇಲಾಖೆಯ ಸಮೀಕ್ಷಾ ವರದಿಯೊಂದು ಈ ಹಿಂದೆ ಅಸ್ತಿತ್ವದಲ್ಲಿದ್ದ ಹಿಂದು ದೇವಾಲಯದ ಮೇಲೆ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹೇಳಿದ ನಂತರ ಜ್ಞಾನವಾಪಿ ಮಸೀದಿಯು ಹೆಚ್ಚು ಮುನ್ನೆಲೆಗೆ ಬಂದಿದೆ. ಜ್ಞಾನವಾಪಿ ಮಸೀದಿ ಆವರಣದಲ್ಲಿ ಶಿವನ ವಿಗ್ರಹ ಸೇರಿ ಅನೇಕ ವಸ್ತುಗಳು ಸಿಕ್ಕಿದ್ದು, ಹಿಂದು ದೇವಾಲಯಕ್ಕೆ ಬಲವಾದ ಪುರಾವೆಗಳು ದೊರೆತಿದ್ದರಿಂದ ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ನ್ಯಾಯಾಲಯ ಸಮ್ಮತಿ ನೀಡಿದೆ. ಅಲ್ಲದೆ, ಕಳೆದ ವಾರ ಮಸೀದಿ ಸಂಕೀರ್ಣದ ನೆಲಮಾಳಿಗೆಯಲ್ಲಿ ಹಿಂದು ಆಚರಣೆ ಮಾಡಲು ನ್ಯಾಯಾಲಯ ಆದೇಶಿಸಿದೆ.

  ಇನ್ನೂ ಆದಿತ್ಯನಾಥ್ ಅವರ “ಕೃಷ್ಣ ಅಚಲ” ಹೇಳಿಕೆಯು ಕೃಷ್ಣ ಜನ್ಮಭೂಮಿ ಪ್ರಕರಣದ ಸ್ಪಷ್ಟ ಉಲ್ಲೇಖವಾಗಿದೆ. ಮಥುರಾದಲ್ಲಿರುವ 17ನೇ ಶತಮಾನದ ಶಾಹಿ ಈದ್ಗಾ ಮಸೀದಿಯು ಶ್ರೀಕೃಷ್ಣನ ಜನ್ಮಸ್ಥಳದಲ್ಲಿಯೇ ಇದೆ ಎಂದು ಹಿಂದೂಗಳು ನಂಬುತ್ತಾರೆ. ಈ ಸ್ಥಳದ ಪುರಾತತ್ವ ಸಮೀಕ್ಷೆಯನ್ನು ಅಲಹಾಬಾದ್ ಹೈಕೋರ್ಟ್ ಅನುಮೋದಿಸಿದೆ. ಆದಿತ್ಯನಾಥ್ ಅವರ ಈ ಹೇಳಿಕೆಗಳು ಬಿಜೆಪಿಯ ಆದ್ಯತೆಯ ಪಟ್ಟಿಯ ಸ್ಪಷ್ಟ ನೋಟವನ್ನು ಪ್ರಸ್ತುತಪಡಿಸುತ್ತವೆ. ಅಯೋಧ್ಯೆಯ ನಂತರ ಕೇಸರಿ ಪಕ್ಷವು ಕಾಶಿ (ವಾರಣಾಸಿ) ಮತ್ತು ಮಥುರಾ ವಿವಾದಿತ ಸ್ಥಳಗಳ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಲು ಮುಂದಾಗಿವೆ.

  ರಾಜ್ಯದಲ್ಲಿ ಇನ್ಮುಂದೆ ಹುಕ್ಕಾ ಮಾರಾಟ, ಸೇವನೆ ಬ್ಯಾನ್​: ಆರೋಗ್ಯ ಇಲಾಖೆಯಿಂದ ಮಹತ್ವದ ಆದೇಶ

  ಕಿದ್ವಾಯಿ ನಿರ್ದೇಶಕರಾಗಿ ಡಾ. ಸೈಯದ್ ಅಲ್ತಾಫ್ ತಾತ್ಕಾಲಿಕ ನೇಮಕ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts