More

    ಕಿದ್ವಾಯಿ ನಿರ್ದೇಶಕರಾಗಿ ಡಾ. ಸೈಯದ್ ಅಲ್ತಾಫ್ ತಾತ್ಕಾಲಿಕ ನೇಮಕ

    ಬೆಂಗಳೂರು: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕ ಡಾ. ವಿ. ಲೋಕೇಶ್ ಅವರನ್ನು ಬಿಡುಗಡೆ ಮಾಡಿ, ಸರ್ಜಿಕಲ್ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ. ಸೈಯದ್ ಅಲ್ತಾಫ್ಅವರನ್ನು ತಾತ್ಕಾಲಿಕವಾಗಿ ನಿರ್ದೇಶಕರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

    ಸಂಸ್ಥೆಯಲ್ಲಿನ ಅವ್ಯವಸ್ಥೆಗಳ ಕುರಿತು ಸಿಬ್ಬಂದಿ ಹಾಗೂ ಸಾರ್ವಜನಿಕರಿಂದ ನಿರಂತರ ದೂರುಗಳು ಹಿನ್ನೆಲೆಯಲ್ಲಿ ಸರ್ಕಾರ ಐಎಎಸ್ ಅಧಿಕಾರಿ ಡಾ. ಅರುಂಧತಿ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತ್ತು. ಸಮಿತಿಯು ಸರ್ಕಾರದಿಂದ ಸ್ವೀಕೃತವಾದ ದೂರುಗಳನ್ನು ಆಧರಿಸಿ ಸಂಸ್ಥೆಯಲ್ಲಿನ ಅಕ್ರಮ ಹಾಗೂ ಅವ್ಯವಸ್ಥೆಗಳ ಕುರಿತು ಒಂದು ತಿಂಗಳ ಕಾಲ ಸಮಗ್ರ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

    ವರದಿಯಲ್ಲಿ ಏನಿದೆ: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಕುರಿತು ಪ್ರಮುಖವಾಗಿ ಟೆಂಡರ್ ಪ್ರಕ್ರಿಯೆಗಳಲ್ಲಿ ಕೆಟಿಪಿಪಿ ಕಾಯ್ದೆ ಉಲ್ಲಂಘನೆ, ನಿರ್ಣಯ ಕೈಗೊಳ್ಳಲು ಅಸಾಧಾರಣ ವಿಳಂಬ, ಅಗತ್ಯ ಪೂರ್ವಭಾವಿ ಸಿದ್ಧತೆಯ ಕೊರತೆ, ಪರಿಣತರ ಸಮಿತಿಗಳ ಮರು ರಚನೆ, ಸಂಗ್ರಹಣೆಗಳ ಅನೇಕ ಪ್ರಕರಣಗಳಲ್ಲಿ ಅನಾವಶ್ಯಕ ಗೊಂದಲ, ಅನುಮೋದಿತ ದರಕ್ಕಿಂತಲೂ ಹೆಚ್ಚಿನ ದರ ಪಾವತಿಸಿಕೊಳ್ಳಲು ಖಾಸಗಿ ಸಂಸ್ಥೆಗಳಿಗೆ ಅವಕಾಶ ನೀಡಿರುವುದು, ಒಂದೇ ಪರೀಕ್ಷೆಗೆ ಪ್ರತ್ಯೇಕ ದರ ನಿಗದಿಪಡಿಸಿರುವುದು, ಒಂದೇ ಆವರಣದಲ್ಲಿ ವಿವಿಧ ಔಷಧಾಲಯಗಳಲ್ಲಿ ಪ್ರತ್ಯೇಕ ದರದಲ್ಲಿ ಔಷಧ ಮಾರಾಟಕ್ಕೆ ಅವಕಾಶ ನೀಡಿರುವುದು, ಹೊರಗುತ್ತಿಗೆ ಆಧಾರದ ಸೇವೆಗಳನ್ನು ಒದಗಿಸುತ್ತಿರುವ ಖಾಸಗಿ ಸಂಸ್ಥೆಗಳ ನಿಯಮಿತ ಮೇಲ್ವಿಚಾರಣೆಯ ಕೊರತೆ, ಪಾವತಿ ಪೂರ್ವದಲ್ಲಿ ಅಗತ್ಯ ಪರಿಶೀಲನಾ ಕ್ರಮಗಳನ್ನು ಅನುಸರಿಸಿದೇ ಇರುವುದು, ದಾಖಲೆಗಳ ಅಸಮರ್ಪಕ ನಿರ್ವಹಣೆ ಇತ್ಯಾದಿ ದೂರುಗಳು ನೈಜತೆಯಿಂದ ಕೂಡಿದ್ದು, ಸಂಸ್ಥೆಯ ಒಟ್ಟಾರೆ ಕಾರ್ಯನಿರ್ವಹಣೆಯಲ್ಲಿ ಸಮರ್ಥ ಆಡಳಿತ ವ್ಯವಸ್ಥೆ ಕೊರತೆ ಕಂಡು ಬಂದಿರುವುದಾಗಿ ಸಮಿತಿ ವರದಿ ಸಲ್ಲಿಸಿರುವುದಾಗಿ ಆದೇಶದಲ್ಲಿ ತಿಳಿಸಿದೆ.

    ಸಮಿತಿ ವರದಿ ಪರಿಶೀಲಿಸಲಾಗಿದ್ದು, ಕಿದ್ವಾಯಿ ಸಂಸ್ಥೆಯಲ್ಲಿ ಆಡಳಿತ ವ್ಯವಸ್ಥೆ ಹದಗೆಟ್ಟಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಸಂಸ್ಥೆಯ ಕಾರ್ಯನಿರ್ವಹಣೆ ಸುಧಾರಿಸಲು ಅಗತ್ಯ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ನಿರ್ದೇಶಕರನ್ನು ಬದಲಿಸಿ ಆದೇಶಿಸಿರುವ ಸರ್ಕಾರ, ಸಂಸ್ಥೆಯ ನಿರ್ದೇಶಕರಾಗಿದ್ದ ಡಾ. ವಿ. ಲೋಕೇಶ್ ಅವರನ್ನು ರೇಡಿಯೇಷನ್ ಆಂಕಾಲಜಿ ವಿಭಾಗದ ಪ್ರಾಧ್ಯಾಪಕರ ಹುದ್ದೆಯಲ್ಲಿ ಮುಂದುವರೆಯುವಂತೆ ಸೂಚಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts