More

    ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾರ್ಲಿಂಗ್‌ ಕೃಷ್ಣ-ಮಿಲನಾ ನಾಗರಾಜ್​!

    ಬೆಂಗಳೂರು: ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಸ್ಯಾಂಡಲ್‌ವುಡ್‌ನ ಕ್ಯೂಟ್ ದಂಪತಿ. ಪರಸ್ಪರ ಪ್ರೀತಿಸಿ ಕುಟುಂಬಸ್ಥರ ಒಪ್ಪಿಗೆ ಪಡೆದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸ್ವತಃ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯವನ್ನು ಅಧಿಕೃತವಾಗಿ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ವಿದೇಶದಲ್ಲಿ ಮದುವೆಯಾಗಲಿರುವ ಭಾರತೀಯರಿಗೆ ಪ್ರಧಾನಿ ಮೋದಿ ವಿಶೇಷ ಸಂದೇಶ!; ಏನಿದು ಮಿಷನ್ ʻವೆಡ್ ಇನ್ ಇಂಡಿಯಾ?


    2021ರ ಫೆಬ್ರವರಿ 14ರಂದು ಮದುವೆ ಆದ ಈ ಜೋಡಿ ಮೂರು ವರ್ಷಗಳ ಬಳಿಕ ಸಿಹಿ ಸುದ್ದಿ ನೀಡಿದ್ದಾರೆ. 2024ರ ಸೆಪ್ಟೆಂಬರ್​ನಲ್ಲಿ ಮಗುವಿನ ಆಗಮನ ಆಗಲಿದೆ ಎಂದು ಮಿಲನಾ ಹಾಗೂ ಕೃಷ್ಣ ಘೋಷಣೆ ಮಾಡಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ.

    ಮದುವೆಯ ಮೊದಲು ಮತ್ತು ನಂತರ ಪ್ರೀತಿ ತುಂಬಾ ಜೀವಂತವಾಗಿರುತ್ತದೆ. ಇದು ಯಾವಾಗಲೂ ರೋಮಾಂಚನಕಾರಿಯಾಗಿ ಉಳಿಯುತ್ತದೆ. ಮಿಲನಾ ಮತ್ತು ನಾನು ಹೀಗೆಯೇ ಕಾಯ್ದುಕೊಂಡಿದ್ದೇವೆ. ಆದಾಗ್ಯೂ, ನಟರಾಗಿ ನಾವು ಕೆಲಸಕ್ಕೆ ಬಂದಾಗ ಸಂಪೂರ್ಣವಾಗಿ ವೃತ್ತಿಪರರಾಗಿದ್ದೇವೆ ಎಂದು ಕೃಷ್ಣ ಹೇಳಿಕೊಂಡಿದ್ದರು.

    ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾರ್ಲಿಂಗ್‌ ಕೃಷ್ಣ-ಮಿಲನಾ ನಾಗರಾಜ್​!

    ನಟಿ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್​ ಕೃಷ್ಣ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. 2015ರಲ್ಲಿ ತೆರೆಗೆ ಬಂದ ‘ಚಾರ್ಲಿ’ ಸಿನಿಮಾದಲ್ಲಿ ಇಬ್ಬರೂ ಒಟ್ಟಾಗಿ ನಟಿಸಿದ್ದರು. ಆಗ ಇವರ ಮಧ್ಯೆ ಪ್ರೀತಿ ಮೂಡಿತ್ತು. ಪರಸ್ಪರ ಒಪ್ಪಿಗೆಯಿಂದ 2021ರಲ್ಲಿ ಮದವೆಯಾದರು. ಈಗ ಇವರ ಮನೆಗೆ ಹೊಸ ಸದಸ್ಯನ ಆಗಮನ ಆಗುತ್ತಿದೆ.

    ಇನ್​​ಸ್ಟಾಗ್ರಾಂ ಖಾತೆಯಲ್ಲಿ ಮಿಲನಾ ನಾಗರಾಜ್ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಮಗುವಿನ ಶರ್ಟ್​ ಫೋಟೋನ ಹಂಚಿಕೊಂಡಿದ್ದಾರೆ ಅವರು. ಇದಕ್ಕೆ ‘KrissMi’ ಎಂದು ಬರೆದು ಹಾರ್ಟ್ ಮಾರ್ಕ್ ಹಾಕಿದ್ದಾರೆ. ಸೆಪ್ಟೆಂಬರ್ 2024 ಎಂದು ಬರೆದಿದ್ದಾರೆ. ಈ ಮೂಲಕ ಮಗುವಿನ ಆಗಮನದ ಬಗ್ಗೆ ಘೋಷಣೆ ಮಾಡಿದ್ದಾರೆ. ಈಗ ಡಾರ್ಲಿಂಗ್ ಕೃಷ್ಣ ದಂಪತಿಗಳಿಂದ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ.

    ಡಾರ್ಲಿಂಗ್ ಕೃಷ್ಣ ಆರ್​​ಸಿಬಿ ಟೀಂ ಪರ ಆಡಬೇಕು: ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ ನಲ್ಲಿ ಕಿಚ್ಚ ಸುದೀಪ್‌ ತಂಡದಲ್ಲಿ ಆಟವಾಡುತ್ತಿರುವ ಕೃಷ್ಣ ಅದ್ಭುತ ಬ್ಯಾಟಿಂಗ್‌ ಶೈಲಿಗೆ ಕ್ರಿಕೆಟ್‌ ಅಭಿಮಾನಿಗಳು ಫಿದಾ ಆಗಿದ್ದಾರೆ. ಕರ್ನಾಟಕ ಬುಲ್ಡೋಜರ್‌ ತಂಡ ಸೋಲಿಲ್ಲದ ಸರದಾರನಂತೆ ನುಗ್ಗುತ್ತಿರುವುದಕ್ಕೆ ಕೃಷ್ಣನ ಆಟದ ಶೈಲಿಯೂ ಒಂದು ಕಾರಣ. ಕನ್ನಡ ಕ್ರಿಕೆಟ್‌ ಅಭಿಮಾನಿಗಳು ಡಾರ್ಲಿಂಗ್‌ ಕೃಷ್ಣ ಈ ಬಾರಿ ಐಪಿಎಲ್‌ ಆರ್‌ಸಿಬಿ ಟೀಂ ಪರವಾಗಿ ಆಡಬೇಕು ಅಂತ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಪ್ರತಿಕ್ರಿಯೆ ವ್ಯಕ್ತ ಪಡಿಸುತ್ತಿದ್ದಾರೆ. ಆರ್‌ಸಿಬಿ ಟೀಮ್‌ಗೆ ಕೃಷ್ಣ ಬೇಕೇ ಬೇಕು ಅಂತ ಕಾಮೆಂಟ್‌ ಮೂಲಕ ಒತ್ತಾಯಿಸುತ್ತಿದ್ದಾರೆ.

    ನಟ ರಾಮ್​ಚರಣ್​ ಜೊತೆ ಮದುವೆ ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ ಪತ್ನಿ ಉಪಾಸನಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts