ನಿಮಗೂ ಶೆಟ್ಟರ್‌ ಪರಿಸ್ಥಿತಿ ತರಲಿದೆ ಬಿಜೆಪಿ; ಸಿ.ಸಿ. ಪಾಟೀಲ್​ ಹೇಳಿಕೆಗೆ ಟಕ್ಕರ್​ ಕೊಟ್ಟ ಕಾಂಗ್ರೆಸ್​

congress
Published on

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಮತದಾನದ ದಿನ ಸಮೀಪಿಸುತ್ತಿರುವ ಬೆನ್ನಲ್ಲೇ ಬಿಜೆಪಿ ವಿರುದ್ಧ ತನ್ನ ವಾಗ್ದಾಳಿಯನ್ನು ಮುಂದುವರೆಸಿರುವ ಕಾಂಗ್ರೆಸ್​ ಸರಣಿ ಟ್ವೀಟ್​ ಮಾಡುವ ಮೂಲಕ ಹರಿಹಾಯ್ದಿದೆ.

ಈ ಕುರಿತು ಟ್ವೀಟ್​ ಮಾಡಿರುವ ರಾಜ್ಯ ಕಾಂಗ್ರೆಸ್​ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್​ ವಿರುದ್ಧ ಕಿಡಿಕಾರಿದೆ.

ತಾಕತ್ತಿದ್ದರೆ ಚುನಾವಣೆಗೆ ಸ್ಪರ್ದಿಸಿ

ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟು ಬಿಜೆಪಿಯಲ್ಲಿನ ಲಿಂಗಾಯತ & ಹಿಂದುಳಿದ ನಾಯಕತ್ವವನ್ನು ಮುಗಿಸಿದ ಬಿ.ಎಲ್​. ಸಂತೋಷ್​ ಎಂಬ ವ್ಯಕ್ತಿಗೆ ಚುನಾವಣೆ ಎದುರಿಸಲು ಭಯವೇಕೆ. ಗ್ರಾಮ ಪಂಚಾಯ್ತಿ ಚುನಾವಣೆಯಲ್ಲೂ ಸ್ಪರ್ದಿಸಲಾಗದ ವ್ಯಕ್ತಿಗೆ ಕಾಂಗ್ರೆಸ್ ಬಗ್ಗೆ ಮಾತನಾಡಲು ಯೋಗ್ಯತೆ ಇಲ್ಲ. ತಾಕತ್ತಿದ್ದರೆ ಚುನಾವಣೆಗೆ ಸ್ಪರ್ದಿಸಿ ಜನಬೆಂಬಲ ಪಡೆದು ಬರಲಿ ಎಂದು ಸವಾಲೆಸೆದಿದೆ.

ಇನ್ಯಾರ ಶವಕ್ಕಾಗಿ ಕಾದು ಕುಳಿತಿದೆ

ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಹಿಂದುತ್ವದ ಮುಖಂಡರಾದ ಪ್ರಮೋದ್ ಮುತಾಲಿಕ್, ಸತ್ಯಜಿತ್ ಸೂರತ್ಕಲ್ ಅವರುಗಳ ಭದ್ರತೆಯನ್ನು ಬಿಜೆಪಿ ಸರ್ಕಾರ ವಾಪಾಸ್ ಪಡೆದಿದೆ.

ಹೆಣ ರಾಜಕೀಯಕ್ಕೆ ಹೆಸರುವಾಸಿಯಾದ ಬಿಜೆಪಿ ಇನ್ಯಾರ ಶವಕ್ಕಾಗಿ ಕಾದು ಕುಳಿತಿದೆ. ಭದ್ರತೆ ವಾಪಸ್ ಪಡೆದಿರುವುದರ ಹಿಂದೆ ಯಾವ ಷಡ್ಯಂತ್ರ ಅಡಗಿದೆ ಎಂದು ಶಂಕಿಸಿದೆ.

ನಿಮಗೂ ಶೆಟ್ಟರ್‌ ಪರಿಸ್ಥಿತಿ ತರಲಿದೆ ಬಿಜೆಪಿ

ಬಿಎಸ್​ವೈ ಅವರನ್ನು ಪದಚ್ಯುತಿ ಮಾಡಿದಾಗಲೇ ಬಿಜೆಪಿಯ ಲಿಂಗಾಯತರ ಹತಾಶೆಯ ಅಣೆಕಟ್ಟು ಒಡೆದಿದೆ. ಆ ಅಣೆಕಟ್ಟೆಯ ನೀರೇ BSY ಕಣ್ಣಲ್ಲಿ ಜಿನುಗಿದ್ದಲ್ಲವೇ.

ಸಿ.ಸಿ. ಪಾಟೀಲ್​ ಅವರೇ ಬಿ.ಎಲ್​. ಸಂತೋಷ್​ ಅವರ ಕೃಪೆಗಾಗಿ ನೀವೆಷ್ಟೇ ಕಸರತ್ತು ಮಾಡಿದರೂ ನಿಮಗೆ ಬಿಜೆಪಿಯ ಗರ್ಭಗುಡಿಯೊಳಗೆ ಪ್ರವೇಶ ಸಿಗುವುದಿಲ್ಲ. ಮುಂದೆ ನಿಮಗೂ ಶೆಟ್ಟರ್‌ ಪರಿಸ್ಥಿತಿ ತರಲಿದೆ ಬಿಜೆಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net