ಕೋವಿ ಲೈಸೆನ್ಸ್ ನವೀಕರಣಕ್ಕೆ ಅಡ್ಡಿ - ನಿಯಮದ ಹೆಸರಿನಲ್ಲಿ ಸತಾಯಿಸುತ್ತಿರುವ ಅಽಕಾರಿಗಳು - ರೈತರಿಗೆ ಬೆಳೆ ನಷ್ಟವಾಗುವ ಆತಂಕ

Published on

ಕೃಷಿ ಹಾಗೂ ಆತ್ಮರಕ್ಷಣೆಯ ಕೋವಿ ಪರವಾನಗಿ ಹೊಂದಿದವರು ಕೋವಿ ಠಾಣೆಯಲ್ಲಿಡುವ ವಿಚಾರದಲ್ಲಿ ಕಾನೂನು ಉಲ್ಲಂಘಿಸಿ ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡ ಜಿಲ್ಲಾಡಳಿತ, ಪರವಾನಗಿ ನವೀಕರಣಕ್ಕೆ ಹೊಸ ಷರತ್ತು ವಿಽಸಿದೆ. ಇದರಿಂದ ಮುಂದಿನ ದಿನದಲ್ಲಿ ರೈತರು ತಮ್ಮ ಕೋವಿಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಕಾನೂನಿನ ಹೆಸರಿನಲ್ಲಿ ರೈತರು ಅಲೆದಾಟ ನಿಲ್ಲುವುದು ಯಾವಾಗ ಎಂಬ ಪ್ರಶ್ನೆ ಮೂಡಲಾರಂಭಿಸಿದೆ.


ಕೋವಿ ಪರವಾನಗಿ ನವೀಕರಣಕ್ಕೆ ಹಿಂದೆ ಜಿಲ್ಲಾಡಳಿತ ಅಥವಾ ತಾಲೂಕು ಆಡಳಿತಕ್ಕೆ ಅರ್ಜಿ ಸಲ್ಲಿಸಿ, ನಿರ್ದಿಷ್ಟ ಮೊತ್ತ ಪಾವತಿಸಿದರೆ ಸಾಕಿತ್ತು. ಆದರೆ ಈಗ ನವೀಕರಣಕ್ಕೆ ಆನ್‌ಲೈನ್ ಅರ್ಜಿ ಸಲ್ಲಿಸಿ, ಪ್ರತಿಯ ಜತೆಗೆ ಐದು ವರ್ಷಕ್ಕೆ ೨,೫೦೦ ರೂ.ಕಟ್ಟಿದ ರಸೀದಿ ಇಡಬೇಕು. ಇದನ್ನು ಜಿಲ್ಲಾಽಕಾರಿ ನವೀಕರಣ ಮಾಡುವ ಬದಲಾಗಿ ಪೊಲೀಸ್ ವರಿಷ್ಠಾಽಕಾರಿಗಳಿಗೆ ವಿಚಾರಣೆಗೆ ಕಳುಹಿಸಿಕೊಡಲಾಗುತ್ತದೆ. ಅವರಿಂದ ನವೀಕರಿಸಬಹುದೆಂಬ ವರದಿ ಬಂದ ಬಳಿಕವೇ ಮುಂದಿನ ಕ್ರಮ ಜಿಲ್ಲಾಡಳಿತದಿಂದ ನಡೆಯಲಿದೆ.


ಈ ಪ್ರಕ್ರಿಯೆಯ ಹೆಸರಿನಲ್ಲಿ ಕಳೆದ ಫೆಬ್ರವರಿಯಲ್ಲಿ ನವೀಕರಣಕ್ಕೆ ನೀಡಿದ ಹಲವರು ಲೈಸೆನ್ಸ್ ಮೂರು ತಿಂಗಳು ಕಳೆದರೂ ನವೀಕರಣವಾಗಿಲ್ಲ. ಕಳೆದ ಮಾರ್ಚ್‌ನಿಂದ ನವೀಕರಣಕ್ಕೂ ಪೊಲೀಸ್ ಇಲಾಖೆಯ ವಿಚಾರಣೆ ಅಗತ್ಯ ಎಂದು ಆದೇಶ ಹೊರಡಿಸಿದೆ.

ಭ್ರಷ್ಟಾಚಾರಕ್ಕೆ ಸುಲಭ ದಾರಿ?
ಕೋವಿ ಪಡೆಯಲು ಇಲಾಖೆಯ ಅಽಕಾರಿಗಳಿಗೆ ಕೇಳಿದಷ್ಟು ನೀಡಬೇಕೆಂಬುದು ಬಹಿರಂಗ ಗುಟ್ಟು. ಆದರೆ ಈಗ ನವೀಕರಣದ ಹೆಸರಿನಲ್ಲೂ ವಸೂಲಾತಿ ನಡೆಯುವ ಸಾಧ್ಯತೆ ಇದೆ. ಇಲ್ಲದಿದ್ದರೆ ವರದಿ ನೀಡದೆ ರೈತರನ್ನು ಸತಾಯಿಸುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಕಾನೂನಿನ ಹೆಸರಿನಲ್ಲಿ ಭ್ರಷ್ಟಾಚಾರಕ್ಕೆ ಸುಲಭ ದಾರಿಯಾಗಿದೆ.

ಕೋವಿಯ ವಿಚಾರದಲ್ಲಿ ಲೈಸೆನ್ಸ್‌ದಾರರ ಜತೆಗೆ ಪ್ರತಿಯೊಂದು ವಿಚಾರವನ್ನೂ ಪತ್ರ ವ್ಯವಹಾರ ನಡೆಸಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು ಎಂಬುದನ್ನು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. ಆದರೆ ಜಿಲ್ಲಾಡಳಿತ ಪರವಾನಗಿ ನವೀಕರಣದಲ್ಲಿ ಮೂರು ತಿಂಗಳಿನಿಂದ ಮಾಹಿತಿ ನೀಡಿಲ್ಲ. ನವೀಕರಣವನ್ನೂ ಮಾಡುತ್ತಿಲ್ಲ.
| ಮಾಣಿಮೂಲೆ ಗೋವಿಂದ ಭಟ್
ಕೃಷಿಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net