

ಬೆಂಗಳೂರು: ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಚಿತ್ರದ ಮೊದಲ ಲಿರಿಕಲ್ ವೀಡಿಯೋ ಸೋಮವಾರ ಬೆಳಿಗ್ಗೆ ಯೂಟ್ಯೂಬ್ನ ಆನಂದ್ ಆಡಿಯೋ ಚಾನಲ್ನಲ್ಲಿ ಬಿಡುಗಡೆಯಾಗಿದೆ. ಅಷ್ಟೇ ಅಲ್ಲ, ಹೊಸ ದಾಖಲೆಯನ್ನೇ ಬರೆದಿದೆ.
ಹೌದು, ‘ಕೋಟಿಗೊಬ್ಬ 3’ ಚಿತ್ರದ ಮೊದಲ ಲಿರಿಕಲ್ ವೀಡಿಯೋ ಹೊಸ ದಾಖಲೆಗೆ ಸಾಕ್ಷಿಯಾಗಿದೆ. ಬಿಡುಗಡೆಯಾದ ಕೇವಲ 46 ನಿಮಿಷಗಳಲ್ಲೇ ಈ ಹಾಡು ಐದು ಲಕ್ಷ ಹಿಟ್ಸ್ ಕಾಣುವ ಮೂಲಕ ಹೊಸ ದಾಖಲೆ ಬರೆದಿದೆ. ‘ಕನ್ನಡ ಚಿತ್ರರಂಗದಲ್ಲೇ ಯಾವೊಂದು ಹಾಡು ಸಹ ಇಷ್ಟು ಕಡಿಮೆ ಸಮಯದಲ್ಲಿ, ಅಷ್ಟೊಂದು ಹಿಟ್ಸ್ ಪಡೆದ ಉದಾಹರಣೆ ಇರಲಿಲ್ಲ. ಈಗ ‘ಕೋಟಿಗೊಬ್ಬ 3’, ಆ ದಾಖಲೆ ಮಾಡಿದೆ ಎಂದು ಹೇಳಿಕೊಂಡಿದ್ದಾರೆ.
‘ಆಕಾಶವೇ ಆರಾಧಿಸುವ ...’ ಎಂದು ಸಾಗುವ ಈ ಹಾಡನ್ನು, ಕನ್ನಡ ಚಿತ್ರರಂಗದ ಇಂಟ್ರೋ ಸಾಂಗ್ ಸ್ಪೆಷಲಿಸ್ಟ್ ಎಂದೇ ಖ್ಯಾತರಾಗಿರುವ ವಿ. ನಾಗೇಂದ್ರ ಪ್ರಸಾದ್ ಬರೆದಿದ್ದಾರೆ.
‘ಕೋಟಿಗೊಬ್ಬ 3’ ಚಿತ್ರದಲ್ಲಿ ಸುದೀಪ್ ಜತೆಗೆ ಮೋನಿಕಾ ಸೆಬಾಸ್ಟಿಯನ್, ಅಫ್ತಾಬ್ ಶಿವದಾಸಾನಿ, ರವಿಶಂಕರ್ ಮುಂತಾದವರು ಈ ಚಿತ್ರದಲ್ಲಿ ಆಕ್ಟ್ ಮಾಡಿದ್ದಾರೆ. ಚಿತ್ರವನ್ನು ‘ಸೂರಪ್ಪ’ ಬಾಬು ನಿರ್ವಿುಸಿದ್ದು, ಶಿವಕಾರ್ತಿಕ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮ್ಯಾಜಿಕಲ್ ಕಂಪೋಸರ್ ಎಂದೇ ಖ್ಯಾತರಾಗಿರುವ ಅರ್ಜುನ್ ಜನ್ಯ ಚಿತ್ರದ ಹಾಡುಗಳನ್ನು ಕಂಪೋಸ್ ಮಾಡಿದ್ದಾರೆ.