

ಕೋಟ: ಬಹಳ ವರ್ಷಗಳಿಂದಲೂ ಕೋಟದಲ್ಲಿ ಗಣೇಶೋತ್ಸವ ನಡೆಯುತ್ತಿದ್ದು, ಈ ಬಾರಿ ನಡೆಯುವ ಗಣೇಶೋತ್ಸವದ ಸುವರ್ಣ ಮಹೋತ್ಸವವನ್ನು ಅರ್ಥಪೂರ್ಣಗೊಳಿಸಲು ಶ್ರಮಿಸಬೇಕು ಎಂದು ಕೋಟದ ಅಮೃತೇಶ್ವರಿ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಆನಂದ್ ಸಿ.ಕುಂದರ್ ಹೇಳಿದರು. ಕೋಟದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಆಶ್ರಯದೊಂದಿಗೆ ಅಮೃತೇಶ್ವರೀ ಸಭಾಂಗಣದಲ್ಲಿ ಆ.27ರಿಂದ ಸೆ.4 ತನಕ ನಡೆಯಲಿರುವ 50ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದರು. ಅಮೃತೇಶ್ವರಿ ದೇಗುಲದ ಟ್ರಸ್ಟಿ ಸುಭಾಷ್ ಶೆಟ್ಟಿ, ಗಣೇಶೋತ್ಸವ ಸಮಿತಿ ಅಧ್ಯಕ್ಷ ರಮಾನಾಥ ಜೋಗಿ, ಕಾರ್ಯದರ್ಶಿ ಚಂದ್ರ ಆಚಾರ್, ಕೋಶಾಧಿಕಾರಿ ಶೀಲರಾಜ್ ಕಾಂಚನ್, ಉಪಾಧ್ಯಕ್ಷ ದೇವೇಂದ್ರ ಗಾಣಿಗ, ಜತೆ ಕಾರ್ಯದರ್ಶಿ ದೇವದಾಸ್ ಕಾಂಚನ್, ಉಮೇಶ್ ಪೂಜಾರಿ, ಸಲಹಾ ಸಮಿತಿಯ ಚಂದ್ರ ಪೂಜಾರಿ, ಅಮೃತ್ ಜೋಗಿ , ಪ್ರಮುಖರು ಉಪಸ್ಥಿತರಿದ್ದರು.