ಕೊಪ್ಪಳ : ತಾಲೂಕಿನ ಮುನಿರಾಬಾದ್ ತುಂಗಭದ್ರಾ ಜಲಾಶಯಕ್ಕೆ ಸೋಮವಾರ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಭೇಟಿ ನೀಡಿ ತುಂಡಾದ ಗೇಟ್ ವೀಕ್ಷಿಸಿದರು.
ಬೆಳಗ್ಗೆಯೇ ತೆರಳಿದ ಶ್ರೀಗಳು 19ನೇ ಗೇಟ್ ಬಳಿ ತೆರಳಿ ಏನಾಗಿದೆ ಎಂದು ವೀಕ್ಷಿಸಿದರು. ಅಪಾರ ನೀರು ಹರಿದು ಹೋಗುವುದನ್ನು ಕಂಡು ಮರುಗಿದರು. ಕೆಲಸಗಾರರನ್ನು ಕಂಡು ಕುಶಲೋಪರಿ ವಿಚಾರಿಸಿದರು.
ಏನಾಗಿದೆ ಎಂದು ಕೇಳಿ ಮಾಹಿತಿ ಪಡೆದರು. ಪೋಲಾಗುವ ನೀರು, ಗೇಟ್ ಅಳವಡಿಕೆಗೆ ಬೇಕಾಗುವ ಸಮಯ, ಬೆಳೆಗಳ ಪರಿಸ್ಥಿತಿ, ಮುಂದೆ ಜಲಾಶಯಕ್ಕೆ ಬರಬಹುದಾದ ನೀರಿನ ಮಾಹಿತಿ ಕೇಳಿ ತಿಳಿದರು. ಸದ್ಯ ಜಲಾಶಯಕ್ಕೆ ಯಾವುದೇ ಅಪಾಯವಿಲ್ಲ ಎಂಬುದು ಸಮಾಧಾನದ ವಿಷಯ ಎಂದರು.