ಜೂನ್ 10 ರಿಂದ ಕೊಂಕಣ ರೈಲು ಮಾರ್ಗಕ್ಕೆ ಮಾನ್ಸೂನ್ ವೇಳಾಪಟ್ಟಿ

IMG-20240602-WA0000(1)
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು
ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ರೈಲುಗಳಿಗೆ ಜೂನ್ 10 ರಿಂದ ಅಕ್ಟೋಬರ್ 31 ತನಕ ಮಾನ್ಸೂನ್ ವೇಳಾಪಟ್ಟಿ ಅನ್ವಯವಾಗಲಿದೆ. ಈ ಅವಧಿಯಲ್ಲಿ ಕೊಂಕಣ ಮಾರ್ಗದಲ್ಲಿ ಪ್ರಸ್ತುತ ಸಂಚರಿಸುವ ರೈಲುಗಳ ಸಂಚಾರ ಸಮಯ ಬದಲಾಗಲಿದೆ.
ಮಾನ್ಸೂನ್ ವೇಳಾಪಟ್ಟಿಯನ್ನು ಪರಿಚಯಿಸಿದ ಬಳಿಕ ಮಂಗಳೂರು ರೈಲ್ವೇ ಪ್ರದೇಶದ ಹಲವಾರು ರೈಲುಗಳ ಕಾರ್ಯಾಚರಣೆಯ ಸಮಯವು ಬದಲಾಗಲಿದೆ. ಭಾರೀ ಮಳೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆಯನ್ನು ತಪ್ಪಿಸಲು ಕೆಆರ್‌ಸಿಎಲ್ ಜಾಲದಲ್ಲಿ ಕಡಿಮೆ ವೇಗದಲ್ಲಿ ರೈಲುಗಳನ್ನು ನಿರ್ವಹಿಸಲಾಗುತ್ತದೆ.
ಪರಿಷ್ಕೃತ ವೇಳಾಪಟ್ಟಿಯಲ್ಲಿ ಜನಪ್ರಿಯ ರೈಲು ಮಂಗಳೂರು ಸೆಂಟ್ರಲ್-ಮುಂಬೈ ಎಲ್‌ಟಿಟಿ ಮತ್ಸ್ಯಗಂಧ ಎಕ್ಸ್‌ಪ್ರೆಸ್ (12620) ಮಂಗಳೂರು ಸೆಂಟ್ರಲ್‌ನಿಂದ ಮಧ್ಯಾಹ್ನ 2.20 ರ ಬದಲು ಮಧ್ಯಾಹ್ನ 12.45 ಕ್ಕೆ ಹೊರಡಲಿದೆ. ಅದರ ಜೋಡಿ ರೈಲು (12619) 7.40 ರ ಬದಲಿಗೆ 10.10 ಕ್ಕೆ ಸೆಂಟ್ರಲ್ ತಲುಪಲಿದೆ ಎಂದು ದಕ್ಷಿಣ ರೈಲ್ವೆ ವಿಭಾಗ ತಿಳಿಸಿದೆ.
ಇನ್ನೊಂದು ಜನಪ್ರಿಯ ರೈಲು ಮುಂಬೈ ಸಿಎಸ್‌ಎಂಟಿ- ಮಂಗಳೂರು ಜಂಕ್ಷನ್ ಸೂಪರ್ ಫಾಸ್ಟ್ (12133) ಮಧ್ಯಾಹ್ನ 1.05 ಬದಲು 3.40 ಗಂಟೆಗೆ ತಲುಪಲಿದೆ. ಮುಂಬೈ ಸಿಎಸ್‌ಎಂಟಿ ಮಧ್ಯಾಹ್ನ 2 ಗಂಟೆ ಬದಲು ಸಾಯಂಕಾಲ 4.35 ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡಲಿದೆ.
ಮಂಗಳೂರು ಸೆಂಟ್ರಲ್- ಮಡಗಾಂವ್ ಡೈಲಿ ಎಕ್ಸ್‌ಪ್ರೆಸ್ ಸ್ಪೆಷಲ್ (06602) ಮಂಗಳೂರು ಸೆಂಟ್ರಲ್‌ನಿಂದ ಸಾಮಾನ್ಯ ವೇಳಾಪಟ್ಟಿಯಂತೆ ಬೆಳಗ್ಗೆ 5.30 ಕ್ಕೆ ಹೊರಡಲಿದ್ದು, ಮಧ್ಯಾಹ್ನ 1.25 ಕ್ಕೆ ಬದಲು 2.25 ಕ್ಕೆ ಮಡಗಾಂವ್ ತಲುಪಲಿದೆ. ಈ ರೈಲು (06601) ಮಡಗಾಂವ್‌ನಿಂದ ಮಧ್ಯಾಹ್ನ 2.10 ಬದಲು 3 ಗಂಟೆಗೆ ಹೊರಟು ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ರಾತ್ರಿ 9.10 ಬದಲು 11.55 ಕ್ಕೆ ತಲುಪಲಿದೆ.
ಎರ್ನಾಕುಲಂ ಜಂಕ್ಷನ್-ಹಜರತ್ ನಿಜಾಮುದ್ದೀನ್ ಮಂಗಳಾ ಲಕ್ಷದ್ವೀಪ್ ಎಕ್ಸ್‌ಪ್ರೆಸ್ (12617) ಮಂಗಳೂರು ಜಂಕ್ಷನ್‌ಗೆ ರಾತ್ರಿ 9.25 ರ ಬದಲಿಗೆ 6.55 ಕ್ಕೆ ತಲುಪುತ್ತದೆ. ರೈಲು ಸಂಖ್ಯೆ 16346 ತಿರುವನಂತಪುರಂ ಸೆಂಟ್ರಲ್-ಮುಂಬೈ ಎಲ್‌ಟಿಟಿ ನೇತ್ರಾವತಿ ಎಕ್ಸ್‌ಪ್ರೆಸ್ ಮಂಗಳೂರು ಜಂಕ್ಷನ್‌ಗೆ ರಾತ್ರಿ 10.45 ಬದಲು 9.30 ಕ್ಕೆ ತಲುಪುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net