

ಕೋಟ: ಸಮುದ್ರ ತಟದಲ್ಲಿ ಸಾಕಷ್ಟು ತ್ಯಾಜ್ಯಗಳು ದಡಕ್ಕೆ ಸೇರಿಕೊಂಡಿವೆ. ಪರಿಸರದ ಬಗ್ಗೆ ಕಾಳಜಿ ವಹಿಸಿ ಸಮುದ್ರ ತಟ ಮಲಿನಗೊಳಿಸದಿರಿ ಎಂದು ತೆಕ್ಕಟ್ಟೆ ಗ್ರಾಪಂ ಎಸ್.ಎಲ್.ಆರ್.ಎಂ. ಘಟಕದ ಸಂಯೋಜಕಿ ರೇವತಿ ತೆಕ್ಕಟ್ಟೆ ಹೇಳಿದರು.
ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್, ಕೋಟ ಜೆಸಿಐ ಸೀನಿಯರ್ ಲಿಜನ್, ತೆಕ್ಕಟ್ಟೆ ಗ್ರಾಪಂ, ಎಸ್.ಎಲ್.ಆರ್.ಎಂ. ಘಟಕ, ಗೀತಾನಂದ ಫೌಂಡೇಶನ್ ಸಹಯೋಗದೊಂದಿಗೆ 254ನೇ ಭಾನುವಾರ ಪರಿಸರ ಸ್ನೇಹಿ ಅಭಿಯಾನದ ಪ್ರಯುಕ್ತ ತೆಕ್ಕಟ್ಟೆ ಗ್ರಾಪಂ ಕೊಮೆ ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಮಾತನಾಡಿದರು.
ಕೋಟ ಪಂಚವರ್ಣ ಯುವಕ ಮಂಡಲ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್, ಪಂಚವರ್ಣ ಮಹಿಳಾ ಮಂಡಲ ಅಧ್ಯಕ್ಷೆ ಶೋಭಾ ಗಣೇಶ್ ಪಡುಕರೆ, ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್, ಸಂಚಾಲಕಿ ಸುಜಾತಾ ಬಾಯರಿ, ಕಾರ್ಯದರ್ಶಿ ವಸಂತಿ ಹಂದಟ್ಟು, ಪ್ರಮುಖರಾದ ಕೇಶವ ಆಚಾರ್, ದಿನೇಶ್ ಆಚಾರ್, ಗಿರೀಶ್ ಆಚಾರ್, ಭಾಸ್ಕರ್ ದೇವಾಡಿಗ, ಕೃಷ್ಣ ಕಾಂಚನ್, ಸಿದ್ಧಾರ್ಥ, ಕಶ್ವಿ, ಸಾನಿಕಾ, ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು. ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.