ಕೊಳ್ಳೇಗಾಲ : ಪಟ್ಟಣದ ಪತಂಜಲಿ ಯೋಗ ಮಂದಿರದಲ್ಲಿ ಜು.23 ರಂದು ಸಂಜೆ 4.30 ರಿಂದ 7.30 ರವರೆಗೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವಾರ್ಷಿಕ ಮಹೋತ್ಸವ ಸಮಾರಂಭ ಆಯೋಜಿಸಲಾಗಿದೆ.
ಅಧ್ಯಕ್ಷತೆಯನ್ನು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಎಚ್.ಎಸ್.ನಟರಾಜನ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚಾಮರಾಜನಗರ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಶಿಕ್ಷಕ ಪ್ರಕಾಶ್, ಹನೂರಿನ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷೆ ದಿನಮಣಿ ನಾಯ್ಡು ಹಾಗೂ ಶ್ರೀ ರಾಮಚಂದ್ರ ಮಿಷನ್‌ನ ಡಾ.ಮಧುಸೂದನ್ ಭಾಗವಹಿಸಲಿದ್ದಾರೆ. ಅಂದು ಯೋಗ ಪ್ರದರ್ಶನ ಏರ್ಪಡಿಸಲಾಗಿದೆ. ಯೋಗ ಬಂಧುಗಳು ಭಾಗವಹಿಸಬಹುದಾಗಿದೆ. ಸಂಜೆ 7.30ರ ಬಳಿಕ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಮಾಡಲಾಗುವುದು.
TAGGED:Kollegala news