ಕೋಲಾರ ಏನೂ ಪಾಕಿಸ್ತಾನದಲ್ಲಿ ಇಲ್ಲ..; ಎಚ್ಚರಿಕೆ ನೀಡಿದ ಪ್ರಮೋದ್​ ಮುತಾಲಿಕ್​

1264056
Published on

ಕೋಲಾರ: ಶೋಭಾಯಾತ್ರೆಗಾಗಿ ಕೋಲಾರಕ್ಕೆ ಆಗಮಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಪೊಲೀಸರು ಅಲ್ಲಿಂದ ವಾಪಸ್ ಕಳಿಸಿದ್ದಕ್ಕೆ ತೀವ್ರ ಬೇಸರಗೊಂಡಿರುವ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಬೇಸರದಿಂದಲೇ ಎಚ್ಚರಿಕೆಯೊಂದನ್ನು ನೀಡಿದ್ದಾರೆ.

ನಾನು ಭಟ್ಕಳದಂತಹ ಪ್ರದೇಶದಲ್ಲೇ ಸಭೆ ಮಾಡಿದ್ದೇನೆ. ಇದು ಬಹುದೊಡ್ಡ ಸೂಕ್ಷ್ಮ ಪ್ರದೇಶ ಸಹ ಅಲ್ಲ. ಕೋಲಾರದಲ್ಲಿ‌ ನನ್ನನ್ನು ತಡೆಯುವುದರ ಹಿಂದೆ ಯಾವುದೋ ಶಕ್ತಿ ಕೆಲಸ ಮಾಡುತ್ತಿದೆ. ಪೋಲೀಸ್ ಇಲಾಖೆ ಕೂಡ ಏಕಪಕ್ಷೀಯವಾಗಿ ನಡೆದುಕೊಂಡಿದೆ ಎಂದು ಪ್ರಮೋದ್ ಮುತಾಲಿಕ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಆಗಮನದಿಂದಾಗಿ ಕೋಲಾರದ ಶೋಭಾಯಾತ್ರೆ ರದ್ದುಗೊಂಡ ನಂತರ ಪ್ರಮೋದ್ ಮುತಾಲಿಕ್ ಸುದ್ದಿಗಾರರಿಗೆ ಈ ರೀತಿಯಾಗಿ ಪ್ರತಿಕ್ರಿಯಿಸಿದರು.

ನೀವು ದೇಶಭಕ್ತಿಯನ್ನು ತಡೆಯುತ್ತಿದ್ದೀರಿ, ನಮ್ಮ ಸ್ವಾತಂತ್ರ್ಯವನ್ನು ತಡೆಯುತ್ತಿದ್ದೀರಿ, ಸಂವಿಧಾನದವನ್ನು ಸಹ ತಡೆಯುತ್ತಿದ್ದೀರಿ, ಈ ರೀತಿಯ ದಾದಾಗಿರಿಯ ಮನಸ್ಥಿತಿ ಸರಿಯಲ್ಲ. ಇದು ಮುಂದಿನ ದಿನಗಳಲ್ಲಿ ನಿಮ್ಮನ್ನು ನುಂಗಿ ಹಾಕುತ್ತದೆ ಎಂದು ಎಚ್ಚರಿಕೆ ನೀಡಿರುವ ಮುತಾಲಿಕ್​, ಮುಂದಿನ ದಿನಗಳಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡುವುದಾಗಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net