More

    ಕೊಹ್ಲಿ ಚೌಕಾ ಮಾರ್ನಾ, ಅನುಷ್ಕಾ ಕೀಟಲೆ!

    ನವದೆಹಲಿ: ಸದಾ ಕ್ರಿಕೆಟ್ ಚಟುವಟಿಕೆಯಲ್ಲಿ ಬಿಜಿಯಾಗಿರುತ್ತಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗ ದೇಶದ ಹೆಚ್ಚಿನ ಜನರಂತೆ ಕೆಲಸವಿಲ್ಲದೆ ಮನೆಯಲ್ಲೇ ಲಾಕ್​ಡೌನ್ ಆಗಿದ್ದಾರೆ. ಇದೇ ವೇಳೆ ಅವರ ಜತೆಗಿರುವ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮ, ಮೈದಾನಕ್ಕೆ ಇಳಿಯಲಾಗದೆ ಮನೆಯಲ್ಲೇ ಉಳಿದುಕೊಂಡಿರುವ ಪತಿಯನ್ನು ರೇಗಿಸುತ್ತ ಕಾಲ ಕಳೆಯುತ್ತಿದ್ದಾರೆ.

    ಕೊಹ್ಲಿ ಈಗ ಅಭಿಮಾನಿಗಳ ಪ್ರೀತಿಯನ್ನೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಈ ಸಂಬಂಧ ಇನ್​ಸ್ಟಾಗ್ರಾಮ್ಲ್ಲಿ ತಮಾಷೆಯ ವಿಡಿಯೊವೊಂದನ್ನು ಮಾಡಿ ಪ್ರಕಟಿಸಿರುವ ಅನುಷ್ಕಾ ಶರ್ಮ, ಎಲ್ಲರ ಮನಗೆದ್ದಿದ್ದಾರೆ. ಪಕ್ಕಾ ಕ್ರಿಕೆಟ್ ಪ್ರೇಮಿಗಳ ಶೈಲಿಯಲ್ಲಿ ’ಕೊಹ್ಲಿ, ಏ ಕೊಹ್ಲಿ, ಕೊಹ್ಲಿ, ಚೌಕಾ ಮಾರ್ನಾ, ಕ್ಯಾ ಕರ್ ರಹಾ ಹೈ’ (ಏ ಕೊಹ್ಲಿ ಏನು ಮಾಡುತ್ತಿರುವೆ, ಬೌಂಡರಿ ಬಾರಿಸು) ಎಂದು ಅನುಷ್ಕಾ ಹೇಳಿದ್ದು, ಪಕ್ಕದಲ್ಲೇ ಕುಳಿತಿರುವ ಕೊಹ್ಲಿ ಇದಕ್ಕೆ ನೀಡಿರುವ ಮುಖಭಾವವೂ ಅಭಿಮಾನಿಗಳ ಮೊಗದಲ್ಲಿ ನಗು ಮೂಡಿಸಿದೆ.

    ಅನುಷ್ಕಾ ರೇಗಿಸಿರುವುದಕ್ಕೆ ಪ್ರತಿಯಾಗಿ ಪೆಚ್ಚುಮೋರೆ ಹಾಕಿದ್ದಾರೆ. ‘ಮೈದಾನಕ್ಕೆ ಇಳಿಯುವುದನ್ನು ಅವರು ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅಭಿಮಾನಿಗಳಿಂದ ಸಿಗುವ ಪ್ರೀತಿಯನ್ನೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ.’ ಎಂದೂ ಅನುಷ್ಕಾ ಬರೆದುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts