

ಕೊಡಗು: ಮಡಿಕೇರಿಯ ಮಡಿಕಲ್ ಕಾಲೇಜು ಆಸ್ಪತ್ರೆಯ ಡಿ ಗ್ರೂಪ್ ನೌಕರನ ಕರಾಳ ಮುಖವಾಡವೊಂದು ಬಯಲಾಗಿದೆ. ನೌಕರನು ವಿಕೃತಕಾಮಿಯಾಗಿದ್ದು, ಮೃತರಾಗುವ ಯುವತಿ ಮತ್ತು ಯುವಕರ ಮೃತದೇಹದ ಬೆತ್ತಲೆ ಫೋಟೋ ತೆಗೆದು ಸಂಭ್ರಮಿಸುವುದು ಈತನ ಚಾಳಿಯಾಗಿತ್ತು.
ಆರೋಪಿ ನೌಕರನ ಹೆಸರು ಸೈಯದ್. ಈತ ಶವಾಗಾರದಲ್ಲಿ ಕೆಲಸ ಮಾಡುತ್ತಿದ್ದ. ಮೃತದೇಹಗಳನ್ನು ವಿವಸ್ತ್ರಗೊಳಿಸಿ ಫೋಟೊ ತೆಗೆದು ಇಟ್ಟುಕೊಳ್ಳುತ್ತಿದ್ದ. ಇದೀಗ ಆತನ ಮೊಬೈನಲ್ಲಿದ್ದ ಎಲ್ಲ ವಿಡಿಯೋ ಮತ್ತು ಆಡಿಯೋ ಲಭ್ಯವಾಗಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಆರೋಪಿ ಕರ್ತವ್ಯಕ್ಕೆ ರಾಜೀನಾಮೆ ನೀಡಿ ಪರಾರಿಯಾಗಿದ್ದಾನೆ.
ಆರೋಪಿ ಸೈಯದ್ ಕೋವಿಡ್ ಸಂದರ್ಭದಲ್ಲಿ ಕರ್ತವ್ಯಕ್ಕೆ ನೇಮಕವಾಗಿದ್ದ. ಇದೀಗ ಆತನ ವಿರುದ್ಧ ಹಿಂದೂ ಜಾಗರಣ ವೇದಿಕೆ, ಮೆಡಿಕಲ್ ಕಾಲೇಜಿನ ಡೀನ್ಗೆ ದೂರು ನೀಡಿದ್ದಾರೆ. ಬಳಿಕ ಮೆಡಿಕಲ್ ಕಾಲೇಜಿನ ಡೀನ್, ಮಡಿಕೇರಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಮಡಿಕೇರಿ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್)