ಬೆಂಗಳೂರು ಜೈನ್ ವಿವಿ ಚಾಂಪಿಯನ್ - ರಾಷ್ಟ್ರ ಮಟ್ಟದ ಹಾಕಿ ಪಂದ್ಯಾವಳಿ

01 gkp 01.
Published on

 ಗೋಣಿಕೊಪ್ಪಲು ಕಾವೇರಿ ಕಾಲೇಜು ರನ್ನರ್ಸ್-  ಗದಗದ ಮೈಲಾರಪ್ಪ ಮೆಣಸಿಗಿ ಕಾಲೇಜಿಗೆ 3ನೇ ಸ್ಥಾನ

ಗೋಣಿಕೊಪ್ಪಲು : ಗೋಣಿಕೊಪ್ಪಲು ಕಾವೇರಿ ಕಾಲೇಜು ಇದೇ ಮೊದಲ ಬಾರಿಗೆ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಸೆವೆನ್ ಎ ಸೈಡ್ ಹಾಕಿ ಪಂದ್ಯಾವಳಿಯ ಫೈನಲ್ಸ್‌ನಲ್ಲಿ ಅತಿಥೇಯ ತಂಡದ ವಿರುದ್ಧ ಬೆಂಗಳೂರು ಜೈನ್ ವಿವಿ ತಂಡ 2-1 ಗೋಲುಗಳ ರೋಚಕ ಜಯ ಸಾಧಿಸಿ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿತು.

ಗೆಲುವಿಗಾಗಿ ಉತ್ತಮ ಹೋರಾಟ ನೀಡಿದ ಗೋಣಿಕೊಪ್ಪಲು ಕಾವೇರಿ ಕಾಲೇಜು ತಂಡ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.ವಿಜೇತ ಜೈನ್ ತಂಡದ ವಚನ್ ಅಯ್ಯಪ್ಪ ಹಾಗೂ ಆರ್ಯ ಉತ್ತಪ್ಪ ತಲಾ 1ಗೋಲು ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಗದಗದ ಮೈಲಾರಪ್ಪ ಮೆಣಸಿಗಿ ಕಾಲೇಜು ತಂಡ, ಗೋಣಿಕೊಪ್ಪಲು ಕಾವೇರಿಯನ್ಸ್ ಅಲುಮಿನೈ ತಂಡವನ್ನು 3-1 ಗೋಲುಗಳ ಅಂತರದಿಂದ ಸೋಲಿಸಿ ತೃತೀಯ ಸ್ಥಾನ ಪಡೆದುಕೊಂಡಿತು. ಕಾವೇರಿಯನ್ಸ್ ಅಲುಮಿನೈ ತಂಡ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಭಾಗದ ಒಟ್ಟು 18 ತಂಡಗಳು ಪಾಲ್ಗೊಂಡಿದ್ದವು.

ವೈಯಕ್ತಿಕ ಪ್ರಶಸ್ತಿ : ಪಂದ್ಯದ ಬೆಸ್ಟ್ ಗೋಲ್ ಕೀಪರ್ ಆಗಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಚಂಗಪ್ಪ, ಬೆಸ್ಟ್ ಡಿಫೆಂಡರ್ ಆಗಿ ಗೋಣಿಕೊಪ್ಪ ಕಾವೇರಿ ಕಾಲೇಜಿನ ಕೌಶಿಕ್ ಕಾರ್ಯಪ್ಪ, ಬೆಸ್ಟ್ ಅಟ್ಯಾಕರ್ ಗದಗ ಮೈಲಾರಪ್ಪ ಮೆಣಸಿಗಿಕಾಲೇಜಿನ ಅಭಿಷೇಕ್, ಹೈಯಸ್ಟ್ ಸ್ಕೋರರ್ ಕಾವೇರಿ ಕಾಲೇಜಿನ ಅಖಿಲೇಶ್, ಬೆಸ್ಟ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಆಗಿ ಬೆಂಗಳೂರು ಜೈನ್ ಕಾಲೇಜಿನ ಬಿಪಿನ್ ಪ್ರಶಸ್ತಿ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net