ನಂದಿನಿ ಬ್ರ್ಯಾಂಡ್ ಹಾಲಿನ ಬೆಲೆ ಏರಿಕೆ

nandini milk
Published on

ವಿಜಯವಾಣಿ ಸುದ್ದಿ ಜಾಲ, ಬೆಂಗಳೂರು:
ನಂದಿನಿ ಬ್ರಾಂಡ್ ನ ಹಾಲಿನ ಬೆಲೆ ಹೆಚ್ಚಳವಾಗಿದೆ. ನಾಳೆಯಿಂದಲೇ ಪರಿಷ್ಕೃತ ಹಾಲಿನ ದರ ಜಾರಿಗೆ ಬರಲಿದೆ.

ಕೆಎಂಎಫ್ ನ ನಂದಿನಿ ಹಾಲು ಹಾಗೂ ಮೊಸರಿನ ದರವನ್ನು ಹೆಚ್ಚಳ ಮಾಡಲು ಕಳೆದ 6 ತಿಂಗಳಿಂದ ಸರ್ಕಸ್ ನಡೆದಿತ್ತು.

ಪ್ರತಿ ಲೀಟರ್ ಹಾಲು ಹಾಗೂ ಮೊಸರಿನ ದರದಲ್ಲಿ ತಲಾ 3 ರೂಪಾಯಿ ಏರಿಕೆಯಾಗಿದೆ. ಟೋನ್ಡ್ ಹಾಲಿನ ದರ ರೂ 37 ರಿಂದ 40 ರೂಪಾಯಿಗೆ ಏರಿಕೆಯಾಗಿದೆ. ಸ್ಪೆಷಲ್ ಹಾಲಿನ ದರ 43ರಿಂದ 46 ರೂಪಾಯಿಗೆ ಏರಿಕೆಯಾಗಿದೆ.

ಸಮೃದ್ಧಿ ಹಾಲಿನ ದರ ಲೀ.48ರಿಂದ 51 ರೂಪಾಯಿಗೆ ಹಾಗೂ ಮೊಸರಿನ ದರ ಕೆಜಿ 45ರಿಂದ 48 ರೂಪಾಯಿಗೆ ಹೆಚ್ಚಿಸಿದೆ. ಈ ಹಣವನ್ನು ರೈತರಿಗೆ ಪ್ರೋತ್ಸಾಹ ಧನವನ್ನಾಗಿ ನೀಡಲು ನಿರ್ಧರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net