ಜೀವನ ಮೌಲ್ಯ ತಿಳಿಸುವುದೇ ಶಿಕ್ಷಣ,  ಎಂ. ಇಡಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಡಾ. ಮುಳ್ಳಳ್ಳಿ ಹೇಳಿಕೆ

IMG-20250812-WA0023_1-1.jpg
Published on

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಕೆಎಲ್ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ ಹಾಗೂ ಎಂ. ಇಡಿ ವಿಭಾಗದ ವತಿಯಿಂದ ಎಂ. ಇಡಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಮಂಗಳವಾರ ಏರ್ಪಡಿಸಲಾಗಿತ್ತು.

ಅತಿಥಿಗಳಾಗಿದ್ದ ಪ್ರಾಚಾರ್ಯ ಡಾ. ಲಿಂಗರಾಜ ಮುಳ್ಳಳ್ಳಿ ಮಾತನಾಡಿ, ಜೀವನ ಮೌಲ್ಯಗಳನ್ನು ತಿಳಿಸಿಕೊಡುವುದೇ ಶಿಕ್ಷಣದ ಮೂಲ ಉದ್ದೇಶ. ಮೌಲ್ಯಗಳು ಶಿಕ್ಷಣದ ಬುನಾದಿಯಾಗಿವೆ. ಸ್ನಾತಕೋತ್ತರ ಪದವಿ ಪಡೆದ ಎಲ್ಲ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ವಿಭಾಗದ ಮುಖ್ಯಸ್ಥ ಡಾ. ಎಂ.ಜಿ. ಸಜ್ಜನರ ಮಾತನಾಡಿ, ಶಿಕ್ಷಕರು ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನಿಸಬೇಕು, ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದು ಹೇಳಿದರು.

ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಎಂ. ಇಡಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಚನ್ನಬಸನಗೌಡ ಪಾಟೀಲ, ವೀಣಾ ಪ್ರಸಾದ, ಶಾರದಾ ಬ. ಇದ್ಲಿ ಅವರು ಅನಿಸಿಕೆಗಳನ್ನು ಹಂಚಿಕೊಂಡರು.

ಎಂ. ಇಡಿ ಪ್ರೋಗ್ರಾಂ ಸಂಯೋಜಕರಾದ ಡಾ. ಲಕ್ಷ್ಮೀಬಾಯಿ ಜಾದವ ಸ್ವಾಗತಿಸಿದರು. ವಿದ್ಯಾರ್ಥಿನಿ ಪ್ರತಿಭಾ ಭಕ್ತಿ ಗೀತೆ ಹಾಡಿದರು. ಸಹ ಸಂಯೋಜಕ ಡಾ. ಅನಿಲ ಗುಮಗೋಳ ವಂದಿಸಿದರು. ಮೇಘಾ ಮನ್ನೂರ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net