More

    ಅಥಿಯಾ ಶೆಟ್ಟಿ ಈಜುಡುಪು ಚಿತ್ರಕ್ಕೆ ಕೆಎಲ್​ ರಾಹುಲ್​ ಕಮೆಂಟ್​ ಏನು ಗೊತ್ತೇ?

    ಬೆಂಗಳೂರು: ಕ್ರಿಕೆಟಿಗ ಕೆಎಲ್​ ರಾಹುಲ್​ ಮತ್ತು ಬಾಲಿವುಡ್​ ನಟಿ ಅಥಿಯಾ ಶೆಟ್ಟಿ ನಡುವಿನ ಡೇಟಿಂಗ್​ ಗುಸುಗುಸು ಸುದ್ದಿ ಹೊಸದಲ್ಲ. ಮಂಗಳೂರು ಮೂಲದ ನಟ ಸುನೀಲ್​ ಶೆಟ್ಟಿ ಅವರ ಪುತ್ರಿಯೂ ಆಗಿರುವ ಅಥಿಯಾ ಶೆಟ್ಟಿ ಇನ್​ಸ್ಟಾಗ್ರಾಂನಲ್ಲಿ ಹಾಕಿರುವ ಪೋಸ್ಟ್​ಗೆ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದ ನಾಯಕ ಕೆಎಲ್​ ರಾಹುಲ್​ ಅವರ ಕಮೆಂಟ್​ ಈ ಬಗ್ಗೆ ಇನ್ನಷ್ಟು ಪುಷ್ಠಿ ನೀಡಿದೆ. ಜತೆಗೆ ಅಭಿಮಾನಿಗಳು ಕೂಡ ಈ ಕಮೆಂಟ್​ಗೆ ದಂಗಾಗಿದ್ದಾರೆ.

    ಈಜುಡುಪು ಧರಿಸಿ ಕನ್ನಡಿ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ಚಿತ್ರವನ್ನು ಅಥಿಯಾ ಶೆಟ್ಟಿ ಬುಧವಾರ ಇನ್​ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ. ಇದಕ್ಕೆ ಯಾವುದೇ ಅಡಿಬರಹವನ್ನೂ ಅವರು ಹಾಕಿಲ್ಲ. ಅದರ ಬೆನ್ನಲ್ಲೇ ಕೆಎಲ್​ ರಾಹುಲ್​ ಚಿತ್ರಕ್ಕೆ ಕಮೆಂಟ್​ ಹಾಕಿದ್ದು, ಹೃದಯದ ಇಮೋಜಿ ಜತೆಗೆ ‘ಜೆಫಾ’ ಎಂದು ಬರೆದುಕೊಂಡಿದ್ದಾರೆ. ಇದೊಂದು ಸ್ಪ್ಯಾನಿಷ್​ ಪದವಾಗಿದ್ದು, ಇದರ ಅರ್ಥ ‘ಬಾಸ್​’ ಎಂದಾಗಿದೆ. ರಾಹುಲ್​ ಅವರ ಈ ಕಮೆಂಟ್​ನ ಅರ್ಥವೇನೆಂದು ಈಗ ಅಭಿಮಾನಿಗಳ ನಡುವೆ ದೊಡ್ಡ ಚರ್ಚೆಯೇ ಶುರುವಾಗಿದೆ.

    ಅಥಿಯಾ ಶೆಟ್ಟಿ ಈಜುಡುಪು ಚಿತ್ರಕ್ಕೆ ಕೆಎಲ್​ ರಾಹುಲ್​ ಕಮೆಂಟ್​ ಏನು ಗೊತ್ತೇ?

    ಸಾಮಾಜಿಕ ಜಾಲತಾಣಗಳಲ್ಲೇ ಇವರಿಬ್ಬರು ತಮ್ಮ ಡೇಟಿಂಗ್​ ಬಗ್ಗೆ ಸುಳಿವು ಬಿಟ್ಟುಕೊಡುತ್ತಿರುವುದು ಇದೇ ಮೊದಲಲ್ಲ. ಈ ಮುನ್ನ ಕೆಎಲ್​ ರಾಹುಲ್​ ಅವರ 28ನೇ ಜನ್ಮದಿನದಂದು ಅಥಿಯಾ ಶೆಟ್ಟಿ ಅವರು, ‘ಮೈ ಪರ್ಸನ್​’ ಎಂಬ ಬರಹದೊಂದಿಗೆ ಇನ್​ಸ್ಟಾಗ್ರಾಂನಲ್ಲಿ ಕೆಎಲ್ ರಾಹುಲ್​ಗೆ ಶುಭಹಾರೈಸಿದ್ದರು. ಅದಕ್ಕೆ ಮುನ್ನ ಕೆಎಲ್​ ರಾಹುಲ್​ ಅವರು ಅಥಿಯಾ ಶೆಟ್ಟಿ ಜತೆಗೆ ಫೋನ್​ ಬೂತ್​ನಲ್ಲಿರುವ ಚಿತ್ರವನ್ನು ಪ್ರಕಟಿಸಿ, ಸುನೀಲ್​ ಶೆಟ್ಟಿ ಅವರ ‘ಹೇರಾ ಫೇರಿ’ ಸಿನಿಮಾದ ಜನಪ್ರಿಯ ಸಂಭಾಷಣೆಯ ಉಲ್ಲೇಖವಾಗಿ, ‘ಹೆಲೋ, ದೇವಿ ಪ್ರಸಾದ್​?’ ಎಂದು ಬರೆದುಕೊಂಡಿದ್ದರು. ಈ ಚಿತ್ರಕ್ಕೆ ಸುನೀಲ್​ ಶೆಟ್ಟಿ ಕೂಡ ನಗುವಿನ ಇಮೋಜಿಯೊಂದಿಗೆ ಪ್ರತಿಕ್ರಿಯಿಸಿದ್ದರು.

    ಇದನ್ನೂ ಓದಿ: ಇನ್ನು ಬಿಕಿನಿ ಚಿತ್ರ ಪೋಸ್ಟ್​ ಮಾಡುವುದಿಲ್ಲ ಎಂದು ಟೆನಿಸ್​ ತಾರೆ ಬೌಚಾರ್ಡ್​ ಹೇಳಿದ್ಯಾಕೆ?

    ಮಂಗಳೂರು ಮೂಲದ ಕ್ರಿಕೆಟಿಗ ಕೆಎಲ್​ ರಾಹುಲ್​ ಮುಂಬರುವ ಐಪಿಎಲ್​ ಟೂರ್ನಿಯಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡವನ್ನು ಮುನ್ನಡೆಸಲಿದ್ದು, ಈಗಾಗಲೆ ಬೆಂಗಳೂರಿನಲ್ಲಿ ಕೋಚ್​ ಅನಿಲ್​ ಕುಂಬ್ಳೆ ಮಾರ್ಗದರ್ಶನದಲ್ಲಿ ಅಭ್ಯಾಸವನ್ನೂ ಆರಂಭಿಸಿದ್ದಾರೆ. ಎಂಎಸ್​ ಧೋನಿ ನಿವೃತ್ತಿ ನಂತರದಲ್ಲಿ ಕೆಎಲ್​ ರಾಹುಲ್​ ಸೀಮಿತ ಓವರ್​ ಕ್ರಿಕೆಟ್​ ಪ್ರಕಾರದಲ್ಲಿ ಇನ್ನು ಭಾರತ ತಂಡದ ವಿಕೆಟ್​ ಕೀಪರ್​-ಬ್ಯಾಟ್ಸ್​ಮನ್​ ಆಗಿ ಹೆಚ್ಚಿನ ಸಮಯ ಮುಂದುವರಿಯುವ ನಿರೀಕ್ಷೆಯೂ ಹರಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts