ಮೆಲ್ಬೋರ್ನ್: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಅಂತಿಮ 2 ಟೆಸ್ಟ್ ಪಂದ್ಯಗಳಿಗೆ ಭಾರತ ತಂಡದಲ್ಲಿ ಸ್ಥಾನ ವಂಚಿತರಾಗಿದ್ದ ಕನ್ನಡಿಗ ಹಾಗೂ ಬ್ಯಾಟರ್ ಕೆಎಲ್ ರಾಹುಲ್ ಮರಳಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಭಾರತ ಎ ಹಾಗೂ ಆಸ್ಟ್ರೇಲಿಯಾ ಎ ನಡುವಿನ ಎರಡನೇ ಚತುರ್ದಿನ ಪಂದ್ಯ ಗುರುವಾರ ಆರಂಭವಾಗಲಿದ್ದು, ರಾಹುಲ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಧ್ರುವ ಜುರೆಲ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. 2 ಪಂದ್ಯಗಳ ಸರಣಿಯಲ್ಲಿ 0-1ರಿಂದ ಹಿನ್ನಡೆಯಲ್ಲಿರುವ ಋತುರಾಜ್ ಗಾಯಕ್ವಾಡ್ ಪಡೆಗೆ ಗೆಲುವಿನ ಅನಿವಾರ‌್ಯ ಎದುರಾಗಿದೆ.
ಆಸ್ಟ್ರೇಲಿಯಾ ಎ ಎದುರಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಬ್ಯಾಟಿಂಗ್ ಕ್ರಮಾಂಕ ಹಾಗೂ ಸದ್ಯದ ಾರ್ಮ್ ಅನ್ನು ರಾಷ್ಟ್ರೀಯ ಆಯ್ಕೆಗಾರರೂ ಗಮನಿಸಲಿದ್ದು, ರಾಹುಲ್‌ಗೆ ಪಾಲಿಗೆ ಮಹತ್ವದಾಗಿದೆ. ಅಭಿಮನ್ಯು ಈಶ್ವರನ್ ಜತೆಯಾಗಿ ರಾಹುಲ್ ಇನಿಂಗ್ಸ್ ಆರಂಭಿಸುವ ಸಾಧ್ಯತೆಗಳಿವೆ. ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ವೈಯಕ್ತಿಕ ಕಾರಣಗಳಿಂದ ರೋಹಿತ್ ಶರ್ಮ ಗೈರಾದರೆ, ಅವರ ಅನುಪಸ್ಥಿತಿಯಲ್ಲಿ ಯಶಸ್ವಿ ಜೈಸ್ವಾಲ್ ಜತೆಯಾಗಿ ಇನಿಂಗ್ಸ್ ಆರಂಭಿಸಲು ರಾಹುಲ್ ಮತ್ತು ಈಶ್ವರನ್ ನಡುವಿನ ಪೈಪೋಟಿಗೂ ಇದು ವೇದಿಕೆಯಾಗಿದೆ.
ರಾಹುಲ್ ತಂಡ ಸೇರ್ಪಡೆಯಿಂದ ಋತುರಾಜ್ ಗಾಯಕ್ವಾಡ್ ಮಧ್ಯಮ ಕ್ರಮಾಂಕಕ್ಕೆ ಹಿಂಬಡ್ತಿ ಪಡೆಯಲಿದ್ದು, ಧ್ರುವ ಜುರೆಲ್‌ಗೆ ಇಶಾನ್ ಕಿಶನ್ ಸ್ಥಾನ ಬಿಟ್ಟುಕೊಡುವ ನಿರೀಕ್ಷೆ ಇದೆ. 2023-24ರ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಟೆಸ್ಟ್ ತಂಡದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿರುವ ರಾಹುಲ್, 2021ರ ಇಂಗ್ಲೆಂಡ್ ಪ್ರವಾಸದಲ್ಲಿ ಕೊನೆಯದಾಗಿ ಇನಿಂಗ್ಸ್ ಆರಂಭಿಸಿದ್ದರು. ದ.ಆಫ್ರಿಕಾ,ಇಂಗ್ಲೆಂಡ್, ಆಸ್ಟ್ರೇಲಿಯಾ ದೇಶಗಳಲ್ಲಿ ಶತಕ ಸಿಡಿಸಿರುವ ಏಷ್ಯಾದ ಇಬ್ಬರು ಆರಂಭಿಕರಲ್ಲಿ ಒಬ್ಬರಾಗಿರುವ ರಾಹುಲ್ ವಿದೇಶದ ಟೆಸ್ಟ್‌ನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ.
ಕಿವೀಸ್ ಎದುರಿನ ಮೊದಲ ಟೆಸ್ಟ್‌ನಲ್ಲಿ 150 ರನ್‌ಗಳಿಸಿದ ಬಳಿಕ ವೈಲ್ಯ ಕಂಡಿರುವ ರ್ಸ್ರಾಜ್ ಬದಲಿಗೆ ಧ್ರುವ ಜುರೆಲ್ ಅವರನ್ನು ಪ್ರಯೋಗಿಸಲು ಟೀಮ್ ಇಂಡಿಯಾ ಮ್ಯಾನೇಜ್ ಮೆಂಟ್ ನಿರ್ಧರಿಸಿದೆ ಎನ್ನಲಾಗಿದೆ. ಪಂತ್ ಪುನರಾಗಮನದ ಬಳಿಕ ಟೆಸ್ಟ್‌ನಲ್ಲಿ ಕಣಕ್ಕಿಳಿಯದ ಜುರೆಲ್ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಸಜ್ಜುಗೊಳಿಸಲು ಭಾರತ ಎ ತಂಡಕ್ಕೆ ಸೇರ್ಪಡೆ ಮಾಡಲಾಗಿದೆ.
ಆರಂಭ: ಬೆಳಗ್ಗೆ 5.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್1