More

    ಇಂಗ್ಲೆಂಡ್ ಪ್ರವಾಸಕ್ಕೆ ಕನ್ನಡಿಗ ಕೆಎಲ್ ರಾಹುಲ್ ಫಿಟ್?

    ನವದೆಹಲಿ: ಕನ್ನಡಿಗ ಕೆಎಲ್ ರಾಹುಲ್ ಇಂಗ್ಲೆಂಡ್ ಪ್ರವಾಸಕ್ಕೆ ಫಿಟ್ ಆಗಿದ್ದಾರೆ ಎನ್ನಲಾಗಿದ್ದು, ಜೂನ್ 2ರಂದು ಟೀಮ್ ಇಂಡಿಯಾದ ಜತೆಗೆ ಲಂಡನ್ ವಿಮಾನ ಏರುವ ನಿರೀಕ್ಷೆ ಇದೆ. ಕಳೆದ ತಿಂಗಳು ಐಪಿಎಲ್ ಟೂರ್ನಿ ನಡುವೆ ಅಪೆಂಡಿಸೈಟಿಸ್‌ನಿಂದ ಬಳಲಿ, ಶಸಚಿಕಿತ್ಸೆಗೆ ಒಳಗಾಗಿರುವ ಬ್ಯಾಟ್ಸ್‌ಮನ್ ರಾಹುಲ್, ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರೂ, ಫಿಟ್ ಆದರಷ್ಟೇ ತಂಡದ ಜತೆಗೆ ತೆರಳಲಿದ್ದಾರೆ ಎಂದು ಬಿಸಿಸಿಐ ತಿಳಿಸಿತ್ತು.

    ‘ರಾಹುಲ್ ಈಗ ಉತ್ತಮ ರೀತಿಯಲ್ಲಿ ಚೇತರಿಕೆ ಕಾಣುತ್ತಿದ್ದಾರೆ. ತಂಡದ ಜತೆಗೆ ಇಂಗ್ಲೆಂಡ್‌ಗೆ ಪ್ರಯಾಣಿಸಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯಕ್ಕೆ ಇನ್ನೂ ಸುಮಾರು ಒಂದು ತಿಂಗಳ ಸಮಯವಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಮತ್ತೆ ಒಂದೂವರೆ ತಿಂಗಳ ಅಂತರವಿದೆ. ಹೀಗಾಗಿ ಕಳೆದ ವರ್ಷ ಗಾಯಾಳು ವೃದ್ಧಿಮಾನ್ ಸಾಹರನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಕರೆದೊಯ್ದಂತೆ ರಾಹುಲ್ ಕೂಡ ತಂಡದ ಜತೆಗಿದ್ದು ಪುನಶ್ಚೇತನಕ್ಕೆ ಒಳಗಾಗಬಹುದು’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    ಕೆಎಲ್ ರಾಹುಲ್ 2019ರ ಆಗಸ್ಟ್-ಸೆಪ್ಟೆಂಬರ್ ಬಳಿಕ ಯಾವುದೇ ಟೆಸ್ಟ್ ಪಂದ್ಯ ಆಡಿಲ್ಲ. ಕಳೆದ ಆಸೀಸ್ ಪ್ರವಾಸದ ವೇಳೆ ತಂಡದ ಜತೆಗಿದ್ದರೂ ಅವರಿಗೆ ಆಡುವ ಅವಕಾಶ ಲಭಿಸಿರಲಿಲ್ಲ. 29 ವರ್ಷದ ರಾಹುಲ್ ಇದುವರೆಗೆ 36 ಟೆಸ್ಟ್ ಆಡಿದ್ದು, 5 ಶತಕ, 11 ಅರ್ಧಶತಕ ಬಾರಿಸಿದ್ದಾರೆ.

    ಇದನ್ನೂ ಓದಿ: ಭಾರಿ ಚರ್ಚೆಗೆ ಕಾರಣವಾಗಿದೆ ವಿರಾಟ್ ಕೊಹ್ಲಿ ಹೊಸ ಲುಕ್!

    ಕರೊನಾ ಸೋಂಕಿನಿಂದ ಚೇತರಿಸಿಕೊಂಡಿರುವ ವೃದ್ಧಿಮಾನ್ ಸಾಹ ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಬಗ್ಗೆಯೂ ಬಿಸಿಸಿಐ ಇದುವರೆಗೆ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ಸದ್ಯ ಸಾಹಗೆ ಬದಲಿ ವಿಕೆಟ್ ಕೀಪರ್ ಆಗಿ ಕೆಎಸ್ ಭರತ್ ಮುಂಬೈನಲ್ಲಿ ಟೀಮ್ ಇಂಡಿಯಾದ ಕ್ವಾರಂಟೈನ್‌ನಲ್ಲಿದ್ದಾರೆ.

    ಟೀಮ್ ಇಂಡಿಯಾ ಸೇರಿದ ಕೊಹ್ಲಿ, ರೋಹಿತ್
    ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಮತ್ತು ಕೋಚ್ ರವಿಶಾಸಿ ಸಹಿತ ಮುಂಬೈ ನಿವಾಸಿಗಳು ಟೀಮ್ ಇಂಡಿಯಾದ ಕ್ವಾರಂಟೈನ್‌ಗೆ ಸೋಮವಾರ ಪ್ರವೇಶ ಪಡೆದರು. ಭಾರತ ತಂಡದ ಇತರ ಸದಸ್ಯರು ಮೇ 19ರಿಂದಲೇ ಮುಂಬೈನಲ್ಲಿ ಕ್ವಾರಂಟೈನ್‌ನಲ್ಲಿದ್ದರೆ, ಮುಂಬೈ ನಿವಾಸಿಗಳಿಗೆ ಬಿಸಿಸಿಐ ತಡವಾಗಿ ತಂಡ ಕೂಡಿಕೊಳ್ಳಲು ವಿನಾಯಿತಿ ನೀಡಿತ್ತು. ಆದರೆ ಇವರೆಲ್ಲರೂ ಮನೆಯಲ್ಲೇ ಕಟ್ಟುನಿಟ್ಟಿನ ಕ್ವಾರಂಟೈನ್‌ನಲ್ಲಿರಬೇಕಾಗಿತ್ತು. ಅಜಿಂಕ್ಯ ರಹಾನೆ ಮತ್ತು ಶಾರ್ದೂಲ್ ಠಾಕೂರ್ ತಡವಾಗಿ ಕ್ವಾರಂಟೈನ್ ಪ್ರವೇಶಿಸಿದ ಮತ್ತಿಬ್ಬರು ಮುಂಬೈ ನಿವಾಸಿ ಆಟಗಾರರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts