More

    ಕನ್ನಡ ಭಾಷೆಯಂತೆ ಜಾನಪದವನ್ನು ಬೆಳೆಸೋಣ: ಜಾನಪದ ಗಾಯಕಿ ಸವಿತಕ್ಕ ಹೇಳಿಕೆ

    ಮಂಡ್ಯ: ಜಾನಪದ ಗೀತೆಗಳನ್ನು ಏಕಾಗ್ರತೆಯಿಂದ ಕಲಿಯಬೇಕು. ಇಷ್ಟಪಟ್ಟು ಗೀತೆಗಳ ಹಾಡುಗಾರಿಕೆಯನ್ನು ಕಲಿತು ಸಾಧನೆಯ ಹಾದಿ ತೋರಬೇಕು. ನಾವು ಜಾನಪದ ಗೀತೆ ಹಾಡಲು ಅಮೆರಿಕಾ, ದುಬೈ ಸೇರಿದಂತೆ ವಿವಿಧ ದೇಶಗಳಿಗೆ ಹೋಗಿದ್ದೇನೆ ಎಂದು ಜಾನಪದ ಗಾಯಕಿ ಸವಿತಕ್ಕ ಹೇಳಿದರು.
    ನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಜನತಾ ಶಿಕ್ಷಣ ಟ್ರಸ್ಟ್‌ನ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜು ವತಿಯಿಂದ ಸೋಮವಾರ ನಿತ್ಯಸಚಿವ ಕೆ.ವಿ.ಶಂಕರಗೌಡ ಅವರ 28ನೇ ವರ್ಷದ ಸ್ಮರಣಾರ್ಥ ಆಯೋಜಿಸಿದ್ದ ರಾಜ್ಯಮಟ್ಟದ ಜನಪದ ಗೀತೆ ಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಜನಪದ ಕ್ಷೇತ್ರ ಉಳಿಸಲು ಬೆಳೆಸುವುದರ ಜತೆಗೆ ಬಳಸಬೇಕಿದೆ ಎಂದರ.
    ನಾವು ಹೇಗೆ ಕನ್ನಡ ಭಾಷೆಯನ್ನು ಉಳಿಸಿ ಬಳಸಿ ಬೆಳೆಸುತ್ತಿದ್ದೆವೆಯೋ, ಅದೇ ರೀತಿ ಜಾನಪದವನ್ನು ಬಳಸಿ, ಉಳಿಸಿ, ಬೆಳೆಸಬೇಕಿದೆ. ಯುವಜನತೆ ಇಂತಹ ಸುಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ನಾವು ಜಾನಪದ ಗೀತೆ ಕಲಿತಿರುವುದರಿಂದ ವೇದಿಕೆಗೆ ಆಹ್ವಾನಿಸುತ್ತಾರೆ. ಇದು ನಮಗೆ ಹೆಚ್ಚಿನ ಖುಷಿ ಕೊಡುತ್ತದೆ. ಅಂತೆಯೇ ಮುಂದಿನ ಪೀಳೆಗೆ ಜಾನಪದ ಬೆಳೆಸಬೇಕಿದೆ. ನಾವೆಲ್ಲ ಮರೆಯಾಗುತ್ತೇವೆ. ಆದರೆ ಜಾನಪದ ಉಳಿದಿರುತ್ತದೆ ಎಂದರು.
    ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಮಾತನಾಡಿ, ದೇಸಿಯ ಕಲೆ ಉಳಿಯಬೇಕಿದೆ. ವೇದಿಕೆಯಲ್ಲಿ ಇರುವ ಗ್ರಾಮೀಣ ಪ್ರತಿಭೆಗಳು ಜಾನಪದ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ಇಂದು ರಾಷ್ಟ್ರ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹಾಡುತ್ತಿದ್ದಾರೆ. ನಮ್ಮ ತಾತಾ ಕೆ.ವಿ.ಶಂಕರಗೌಡ ಅವರು ಕಲಾವಿದರಾಗಿದ್ದರು. ನಮ್ಮ ಜೀವನವೇ ನಾಟಕರಂಗವಾಗಿದೆ. ಆದರೆ ನಾಟಕದಲ್ಲಿ ಯಾವ ಪಾತ್ರ ನಿರ್ವಹಿಸಬೇಕೆಂದು ತಿಳಿಯುತ್ತಿಲ್ಲ ಎಂದರು.
    ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ್, ರಾಷ್ಟ್ರೀಯ ಜಾನಪದ ಗಾಯಕ ರಮೇಶ್, ಆಕಾಶವಾಣಿ ಕಲಾವಿದ ಜಿ.ಜಿ.ನವೀನ್ ಕುಮಾರ್, ಉಪನ್ಯಾಸಕ ಎಸ್.ಪಿ.ಕ್ಯಾತೇಗೌಡ, ಕಾಲೇಜಿನ ಸಾಂಸ್ಕೃತಿಕ ಸಮಿತಿ ಸಂಚಾಲಕಿ ಡಾ.ಜಿ.ಸವಿತಾ, ವಿದ್ಯಾರ್ಥಿ ಕ್ಷೇಮ ಸಮಿತಿ ಸಂಚಾಲಕ ಪ್ರೊ.ವೀರೇಶ್, ಪ್ರೊ.ನಂದೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts