More

    ಹೊಸಹಳ್ಳಿ-ರಾಮನಹಳ್ಳಿಯಲ್ಲಿ ಹಬ್ಬದ ಸಂಭ್ರಮ: ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದ ಭಕ್ತರು

    ಮಂಡ್ಯ: ನಗರದ ಹೊಸಹಳ್ಳಿ-ರಾಮನಹಳ್ಳಿ ವೃತ್ತದಲ್ಲಿ ಬುಧವಾರ ಗ್ರಾಮದೇವತೆ ಬಿಸಿಲು ಮಾರಮ್ಮ ದೇವಿಗೆ ತಂಪು ತೋರಿಸುವ ಪೂಜಾ ಕೈಂಕರ್ಯಗಳೊಂದಿಗೆ ಹಬ್ಬ ಸಂಭ್ರಮದಿಂದ ನಡೆಯಿತು.
    ಬಿಸಿಲು ಮಾರಮ್ಮನ ದೇವಾಲಯದವರೆಗೂ ಸ್ಥಳೀಯ ನಿವಾಸಿಗಳು ಸಾಲುಗಟ್ಟಿ ನಿಂತು ಪೂಜೆ ಸಲ್ಲಿಸಿದರು. ತಂಬಿಟ್ಟಿನ ಆರತಿಯೊಂದಿಗೆ ತಮಟೆ ನಗಾರಿ ಸದ್ದಿನಲ್ಲಿ ಸಮೂಹಿಕವಾಗಿ ಮೆರವಣಿಗೆ ಸಾಗಿದರು. ದೇವಾಲಯದಲ್ಲಿ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥನೆ ಸಲ್ಲಿಸಿ, ಪೂಜಾ ವಿಧಿವಿಧಾನಗಳನ್ನು ಮುಗಿಸಿದರು. ಯಜಮಾನರು ಪೂಜೆ, ಕೈಂಕರ್ಯಗಳನ್ನು ನೆರವೇರಿಸಿದರು. ಬಳಿಕ ದೇವಾಯದ ಸುತ್ತ ಪ್ರದಕ್ಷಿಣೆ ಹಾಕಿದರು. ದೇವಾಲಯ ಮತ್ತು ದೇವಿಯ ಮೂರ್ತಿಗೆ ವಿಶೇಷ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು.
    ಇದೇ ಸಂದರ್ಭದಲ್ಲಿ ಯಜಮಾನರಾದ ಪಾಪೇಗೌಡ, ಎಚ್.ಎಂ.ಸುರೇಶ್, ನಿಂಗಣ್ಣ, ಜೋಗಪ್ಪ, ರಾಮಣ್ಣ, ಶಿವಲಿಂಗು, ಚಿಕ್ಕಮಾದು, ನಾಗರಾಜು, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶಿವಲಿಂಗೇಗೌಡ, ಯುವ ಮುಖಂಡರಾದ ಹೊಸಹಳ್ಳಿ ಶಿವು, ಶೇಖರ್, ಶ್ರೀಕಾಂತ್, ರವಿಕುಮಾರ್, ಮಾಧು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts