More

    ಕರ್ನಾಲ್ ಉಪಚುನಾವಣೆ ನಾಮಪತ್ರ ಸಲ್ಲಿಸಿದ ಹರಿಯಾಣ ನಯಾಬ್ ಸಿಂಗ್ ಸೈನಿ!

    ಚಂಡೀಗಢ: ಕರ್ನಾಲ್ ವಿಧಾನಸಭೆ ಉಪಚುನಾವಣೆಗೆ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಸೋಮವಾರ ಉಮೇದುವಾರಿಕೆ ಸಲ್ಲಿಸಿದರು.  ನಾಮಪತ್ರ ಸಲ್ಲಿಸುವ ಮುನ್ನ ಸೈನಿ ಹಾಗೂ ಮಾಜಿ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ಸೋಮವಾರ ಕರ್ನಾಲ್​ನಲ್ಲಿ ಬೃಹತ್​ ರೋಡ್ ಶೋ ನಡೆಸಿದರು.

    ಇದನ್ನೂ ಓದಿ: ಇಡಿ ಬಂಧನ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಜಾರ್ಖಂಡ್​ ಮಾಜಿ ಸಿಎಂ ಹೇಮಂತ್ ಸೊರೆನ್​

    ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸೈನಿ, ನಾವು ಜನಾದೇಶದೊಂದಿಗೆ ಗೆಲ್ಲುತ್ತೇವೆ. ಕರ್ನಾಲ್​ನಲ್ಲಿ ಮಾತ್ರವಲ್ಲದೆ ಎಲ್ಲೆಡೆ ಬಿಜೆಪಿಗೆ ಭಾರಿ ಜನಬೆಂಬಲ ವ್ಯಕ್ತವಾಗುತ್ತಿದೆ. ನಾವು ದೊಡ್ಡ ಜನಾದೇಶದೊಂದಿಗೆ ಗೆಲ್ಲುತ್ತೇವೆ. ಮೋದಿ ಅವರ ನೇತೃತ್ವದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ದೇಶ ಪ್ರಗತಿಯ ಪಥದಲ್ಲಿ ಮುನ್ನಡೆದಿದೆ ಎಂದು ಹೇಳಿದರು.

    ಹರಿಯಾಣದ 10 ಲೋಕಸಭೆ ಸ್ಥಾನಗಳಿಗೆ ಮತ್ತು ಖಟ್ಟರ್ ಅವರ ರಾಜೀನಾಮೆಯಿಂದ ತರೆವಾದ ಕರ್ನಾಲ್ ವಿಧಾನಸಭೆ ಸ್ಥಾನಕ್ಕೆ ಮೇ 25 ರಂದು ಚುನಾವಣೆ ನಡೆಯಲಿದೆ.

    ಕರ್ನಾಲ್ ಲೋಕಸಭಾ ಕ್ಷೇತ್ರವು ಒಂಬತ್ತು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಈ ಕ್ಷೇತ್ರದಲ್ಲಿ 6 ಜನ ಬಿಜೆಪಿ ಶಾಸಕರು, ಒಬ್ಬರು ಸ್ವತಂತ್ರ ಶಾಸಕರು ಇದ್ದಾರೆ. ಉಳಿದ ಮೂರು ವಿಧಾನಸಭಾ ಕ್ಷೇತ್ರಗಳಾದ ಅಸ್ಸಾಂದ್, ಇಸ್ರಾನಾ ಮತ್ತು ಸಮಲ್ಖಾಗಳನ್ನು ಕಾಂಗ್ರೆಸ್ ಶಾಸಕರಿದ್ದಾರೆ.

    ವಾರಣಾಸಿಯಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆಗೆ ಮುಹೂರ್ತ ಫಿಕ್ಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts