More

    ವಿಶ್ವಾಸ ಮತ ಸಾಬೀತುಪಡಿಸಿದ ಹರಿಯಾಣ ಸಿಎಂ ನಯಾಬ್ ಸಿಂಗ್ ಸೈನಿ

    ಚಂಡೀಗಢ(ಹರಿಯಾಣ): ನೂತನ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ವಿಶ್ವಾಸ ಮತವನ್ನು ಸಾಬೀತುಪಡಿಸಿದರು.

    ಇದನ್ನೂ ಓದಿ: ನಕಲಿ ಕ್ಯಾನ್ಸರ್ ಡ್ರಗ್ ದಂಧೆ ಭೇದಿಸಿದ ದೆಹಲಿ ಪೊಲೀಸರು: ಏಳು ಮಂದಿ ಅರೆಸ್ಟ್

    ಹರಿಯಾಣದ ಕುರುಕ್ಷೇತ್ರದ ಲೋಕಸಭಾ ಸಂಸದರಾದ ನಯಾಬ್ ಸಿಂಗ್ ಸೈನಿ, ಮಂಗಳವಾರ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರಿಂದ ಪ್ರಮಾಣವಚನ ಸ್ವೀಕರಿಸಿ ಹೊಸ ಸಿಎಂ ಆಗಿ ನೇಮಕಗೊಂಡಿದ್ದರು.

    ಅಧಿಕಾರ ಸ್ವೀಕರಿಸಿದ ಒಂದು ದಿನದ ನಂತರ, ಸೈನಿ ಬುಧವಾರ ವಿಧಾನಸಭೆಯಲ್ಲಿ ವಿಶ್ವಾಸ ಮತವನ್ನು ಗೆದ್ದಿದ್ದಾರೆ. ಜನನಾಯಕ ಜನತಾ ಪಕ್ಷ (ಜೆಜೆಪಿ) ವಿಶ್ವಾಸ ಮತಯಾಚನೆಯ ವೇಳೆ ಸದನಕ್ಕೆ ಗೈರುಹಾಜರಾಗುವಂತೆ ತನ್ನ 10 ಶಾಸಕರಿಗೆ ವಿಪ್ ಜಾರಿ ಮಾಡಿತ್ತು. ವಿಶ್ವಾಸ ಮತ ಆರಂಭವಾಗುತ್ತಿದ್ದಂತೆ, ಜೆಜೆಪಿಯ ಐವರು ಶಾಸಕರು ಸದನದಿಂದ ನಿರ್ಗಮಿಸಿದರು.

    90 ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ, ಬಿಜೆಪಿ 41 ಶಾಸಕರನ್ನು ಹೊಂದಿದೆ ಮತ್ತು ಏಳು ಸ್ವತಂತ್ರರಲ್ಲಿ ಆರು ಮತ್ತು ಹರಿಯಾಣದ ಲೋಖಿತ್ ಪಕ್ಷದ ಶಾಸಕ ಗೋಪಾಲ್ ಕಾಂಡ ಅವರ ಬೆಂಬಲವನ್ನು ಬಿಜೆಪಿ ಹೊಂದಿದೆ.

    ಸದನದಲ್ಲಿ ಜೆಜೆಪಿ 10 ಶಾಸಕರನ್ನು ಹೊಂದಿದೆ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ 30 ಶಾಸಕರನ್ನು ಹೊಂದಿದ್ದರೆ, ರತೀಯ ರಾಷ್ಟ್ರೀಯ ಲೋಕದಳ ಒಬ್ಬರನ್ನು ಹೊಂದಿದೆ.

    ವಿಶ್ವಾಸಮತ ಯಾಚನೆಯ ನಂತರ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಜಿ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರನ್ನು ಹೊಗಳಿದರು. ಖಟ್ಟರ್ ಅವರು ಹರಿಯಾಣದಲ್ಲಿ ಆಡಳಿತವನ್ನು ಸುಧಾರಿಸಲು ಮಿಷನ್ ಮೋಡ್‌ನಲ್ಲಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
    “ನಮ್ಮನ್ನು ಬೆಂಬಲಿಸುವಂತೆ ವಿಧಾನಸಭೆಯ ಎಲ್ಲ ಸದಸ್ಯರಿಗೆ ನಾನು ಮನವಿ ಮಾಡಲು ಬಯಸುತ್ತೇನೆ. ಹರಿಯಾಣದ ಜನರು ಸಹ ನಮ್ಮ ಮೇಲೆ ವಿಶ್ವಾಸ ಹೊಂದಿದ್ದಾರೆ ಎಂದು ನಾನು ಹೇಳಲು ಬಯಸುತ್ತೇನೆ ಎಂದು ಅವರು ಹೇಳಿದರು.

    “ನಾನು ಸಾಧಾರಣ ಕುಟುಂಬದ ಹಿನ್ನೆಲೆಯಿಂದ ಬಂದವನು, ನನ್ನ ಕುಟುಂಬದಲ್ಲಿ ಯಾರೂ ರಾಜಕೀಯದಲ್ಲಿಲ್ಲ. ಕೇವಲ ಬಿಜೆಪಿ ಕಾರ್ಯಕರ್ತನಾಗಿದ್ದು , ಇಂತಹ ದೊಡ್ಡ ಅವಕಾಶವನ್ನು ನೀಡಲಾಗಿದೆ. ಇದು ಬಿಜೆಪಿಯಂತಹ ಪಕ್ಷದಲ್ಲಿ ಮಾತ್ರ ಸಾಧ್ಯ ಎಂದು ನಾನು ಹೇಳಲೇಬೇಕು” ಎಂದು ಸೈನಿ ಈ ಹಿಂದೆ ವಿಧಾನಸಭೆಯಲ್ಲಿ ಹೇಳಿದ್ದರು.

    ಮಂಗಳವಾರ ತಮ್ಮ ಸಂಪುಟದ ಸಚಿವರೊಂದಿಗೆ ಮನೋಹರ್ ಲಾಲ್ ಖಟ್ಟರ್ ಅವರು ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ನಂತರ, ರಾಜ್ಯ ಬಿಜೆಪಿ ಮುಖ್ಯಸ್ಥ ನಯಾಬ್ ಸಿಂಗ್ ಸೈನಿ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ದ್ದರು.

    ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಂಡ ಜಪಾನ್​ನ ಮೊದಲ ಖಾಸಗಿ ರಾಕೆಟ್..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts