More

    ಇಡಿ ಬಂಧನ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಜಾರ್ಖಂಡ್​ ಮಾಜಿ ಸಿಎಂ ಹೇಮಂತ್ ಸೊರೆನ್​

    ನವದೆಹಲಿ: ಭೂ ಹಗರಣ ಹಾಗೂ ಅದಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ಬಂಧನ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ತಿಸ್ಕರಿಸಿದ ಜಾರ್ಖಂಡ್​ ಹೈಕೋರ್ಟ್​ ಆದೇಶ ಪ್ರಶ್ನಿಸಿ ಜಾರ್ಖಂಡ್​ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್​ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

    ಇದನ್ನೂ ಓದಿ: ವಾರಣಾಸಿಯಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆಗೆ ಮುಹೂರ್ತ ಫಿಕ್ಸ್!

    ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ಮನವಿ ಮಾಡಿದ ಸೋರೆನ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅರ್ಜಿಯನ್ನು ಶೀಘ್ರವಾಗಿ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು. ಮೇ 13 ರಂದು ಜಾರ್ಖಂಡ್‌ನಲ್ಲಿ ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿದೆ. “ಸೊರೆನ್​ ಅವರು ತಮ್ಮ ಪಕ್ಷ ಜೆಎಂಎಂ ಪರ ಪ್ರಚಾರ ಮಾಡಲು ಅನುಮತಿ ನೀಡಬೇಕು ಎಂದು ಸಿಬಲ್ ಕೋರಿದರು.

    ಸೂರೆನ್ ಅವರನ್ನು ಜನವರಿ 31 ರಂದು ಬಂಧಿಸಲಾಗಿದೆ. ಫೆ.4ರಂದು ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್​ ಫೆ.28ರಂದು ತೀರ್ಪನ್ನು ಕಾಯ್ದಿರಿಸಿತಾದರೂ ಪ್ರಕಟಿಸಿರಲಿಲ್ಲ. ಜಾರ್ಖಂಡ್‌ನಲ್ಲಿ ಮೇ 13 ರಂದು ಮೊದಲ ಹಂತದ ಮತದಾನ ನಡೆಯಲಿದೆ. ಹೀಗಾಗಿ ಸಂವಿಧಾನದ 32ನೇ ವಿಧಿಯಡಿ ನಾವು ಸುಪ್ರೀಂ ಕೋರ್ಟ್​ ಮನವಿ ಸಲ್ಲಿಸಿದ್ದೆವು. ಇಲ್ಲಿಂದ ನೋಟಿಸ್​ ನೀಡಿದ ಬಳಿಕ ಸೊರೆನ್​ ಅವರ ಅರ್ಜಿಯನ್ನು ತಿರಸ್ಕರಿಸಿ ಹೈಕೋರ್ಟ್​ ಆದೇಶ ನೀಡಿದೆ. ಹಕ್ಕುಗಳನ್ನು ಈ ರೀತಿ ಹತ್ತಿಕ್ಕುತ್ತಿರುವುದನ್ನು ದುರದೃಷ್ಟಕರ ಎಂದು ಸಿಬಲ್ ಪೀಠದ ಮುಂದೆ ಹೇಳಿದರು.

    ಸೊರೆನ್ ಸಲ್ಲಿಸಿರುವ ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆಯನ್ನು ಮೇ 7ರಂದು ಕೈಗೆತ್ತಿಕೊಳ್ಳುವುದಾಗಿ ಪೀಠ ಹೇಳಿತ್ತು. ಅದೇ ದಿನ ಈ ಅರ್ಜಿಯನ್ನು ವಿಚಾರಣೆ ನಡೆಸಿ ಎಂದು ವಕೀಲ ಸಿಬಿಲ್ ಪೀಠಕ್ಕೆ ಹೇಳಿದರು.

    ಘಟನೆ ವಿವರ: ಭೂ ಹಗರಣ ಹಾಗೂ ಅದಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದ ಹೇಮಂತ್ ಸೊರೇನ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಬಂಧಿಸಿದ್ದರು.

    ಜ. 31ರಂದು ಸೊರೇನ್ ಅವರ ನಿವಾಸದ ಮೇಲೆ ರೈಡ್ ನಡೆಸಿದ್ದ ಇ.ಡಿ. ಅಧಿಕಾರಿಗಳು ಅವರ ಮನೆಯಲ್ಲಿ ತೀವ್ರ ಶೋಧ ನಡೆಸಿದ್ದರು. ಈ ಸಂದರ್ಭದಲ್ಲಿ ಒಂದು ಬಿಎಂಡಬ್ಲ್ಯೂ ಕಾರು ಹಾಗೂ 36 ಲಕ್ಷ ರೂ. ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಈ ರೈಡ್ ನಡೆದ ಕೂಡಲೇ ರಾಂಚಿಯಲ್ಲಿರುವ ಎಸ್ಸಿ, ಎಸ್ಟಿ ಪೊಲೀಸ್ ಠಾಣೆಗೆ ತೆರಳಿದ್ದ ಹೇಮಂತ್ ಸೊರೇನ್, ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧವೇ ದೂರು ದಾಖಲಿಸಿದ್ದರು.

    ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ: ಬಂಧನದ ಬಳಿಕ ಎಚ್​.ಡಿ.ರೇವಣ್ಣ ಮೊದಲ ಪ್ರತಿಕ್ರಿಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts