ಕನ್ನಡಿಗ ಕೆ.ಎಲ್​. ರಾಹುಲ್​ ಐಪಿಎಲ್-2020ಯ​ ಮೊದಲ ಶತಕದ ಹಿಂದಿದೆ ಕೊಹ್ಲಿಯ ಕಾಣಿಕೆ..!

Rahul
Published on

ದುಬೈ: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್​ ಟೂರ್ನಿಯ 6ನೇ ಪಂದ್ಯದಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್ ತಂಡದ ನಾಯಕ ಕೆ.ಎಲ್​. ರಾಹುಲ್​ 132 ರನ್​ಗಳ ಭರ್ಜರಿ ಶತಕ ಸಿಡಿಸಿದ್ದಾರೆ. ಪ್ರಸಕ್ತ ಐಪಿಎಲ್ ಆವೃತ್ತಿಯ​​ ಮೊದಲ ಶತಕವಾಗಿದ್ದು, ರಾಹುಲ್​ಗೆ ಎರಡನೇ ಶತಕವಾಗಿದೆ.

ಕೇವಲ 62 ಎಸೆತಗಳಲ್ಲಿ 7 ಸಿಕ್ಸರ್​, 14 ಬೌಂಡರಿ ನೆರವಿನೊಂದಿಗೆ ರಾಹುಲ್ ಸಿಡಿಸಿದ ಭರ್ಜರಿ ಶತಕದ ಶ್ರಮದ ಹಿಂದೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕ ವಿರಾಟ್​ ಕೊಹ್ಲಿಯ ಕಾಣಿಕೆಯು ಇದೆ ಎಂಬುದನ್ನು ಮರೆಯಬಾರದು.

ರಾಹುಲ್​ ಬಾರಿಸಿದ ಚೆಂಡನ್ನು​ ಎರಡು ಬಾರಿ ಕೈಚೆಲ್ಲುವ ಮೂಲಕ ಅಮೂಲ್ಯ ಜೀವದಾನ ನೀಡಿದ್ದು, ರಾಹುಲ್​ ಶತಕಕ್ಕೆ ಬುನಾದಿ ಹಾಕಿಕೊಟ್ಟಂತಾಯಿತು. ಹೀಗಾಗಿ ಶತಕ ಸಿಡಿಸಿ ರಾಹುಲ್​ ಅಜೇಯರಾಗಿಯು ಉಳಿದರು.

ಅಂದಹಾಗೆ ರಾಹುಲ್​ ಒಟ್ಟು 69 ಐಪಿಎಲ್​ ಪಂದ್ಯಗಳ ಎರಡನೇ ಶತಕ ಇದಾಗಿದೆ. 2019ರ ಆವೃತ್ತಿಯಲ್ಲಿ 63 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಐಪಿಎಲ್​ನಲ್ಲಿ ಒಂದಕ್ಕಿಂತ ಹೆಚ್ಚು ಶತಕ ಸಿಡಿಸಿದ 6ನೇ ಭಾರತೀಯ ಆಟಗಾರನೆಂಬ ಕೀರ್ತಿಗೆ ರಾಹುಲ್​ ಭಾಜನರಾಗಿದ್ದಾರೆ.

ಇನ್ನು ಪಂಜಾಬ್​ ತಂಡ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ ಆರ್​ಸಿಬಿ ಗೆಲುವಿಗೆ 207 ರನ್​ ಗುರಿ ನೀಡಿದೆ. ಗುರಿ ಬೆನ್ನತ್ತಿರುವ ಆರ್​ಸಿಬಿ ಸದ್ಯ 69 ರನ್​ಗೆ ಪ್ರಮುಖ 5 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net