ಶಸ್ತ್ರಚಿಕಿತ್ಸೆಗೆ ಒಳಗಾದ ಕೆಎಲ್ ರಾಹುಲ್, ಫಿಟ್ನೆಸ್ ಸ್ಥಿತಿ ಹೇಗಿದೆ ಗೊತ್ತಾ?

rahul and his pets for bwe
Published on

ಬೆಂಗಳೂರು: ಭಾರತ ತಂಡದ ಆರಂಭಿಕ ಬ್ಯಾಟ್ಸ್​ಮನ್​ ಕೆಎಲ್​ ರಾಹುಲ್​ ಐಪಿಎಲ್​ ಮಧ್ಯದಲ್ಲಿಯೇ ಸ್ಥಗಿತಗೊಳ್ಳುವುದಕ್ಕೂ ಮೊದಲೇ ಹೊಟ್ಟೆನೋವಿನಿಂದಾಗಿ ತಂಡ ತೊರೆದಿದ್ದರು. ಕರ್ನಾಟಕದ ಕೆಎಲ್​ ರಾಹುಲ್​ ಪಂಜಾಬ್​ ಕಿಂಗ್ಸ್​ ತಂಡ ಮುನ್ನಡೆಸಿದ್ದರು. ಹೊಟ್ಟೆನೋವಿನಿಂದ ಹೊರಬಿದ್ದ ರಾಹುಲ್​ ಬಳಿಕ ಅಪೆಂಡಿಕ್ಸ್​ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.ಬಳಿಕ ರಾಹುಲ್​ 10 ದಿನಗಳೊಳಗೆ ಪಂಜಾಬ್​ ತಂಡ ಕೂಡಿಕೊಳ್ಳುತ್ತಾರೆ ಎಂದು ಹೇಳಲಾಗಿದ್ದರೂ ಕೋವಿಡ್​ನಿಂದಾಗಿ ಐಪಿಎಲ್​ ಟೂನಿರ್ಯನ್ನೇ ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಇದೀಗ ಸಂಪೂರ್ಣ ಗುಣಮುಖರಾಗಿರುವ ರಾಹುಲ್​ ತಮ್ಮ ನೆಚ್ಚಿನ ನಾಯಿ ಮರಿಗಳೊಂದಿಗೆ ಕಾಲಕಳೆಯುತ್ತಿದ್ದಾರೆ. ತಮ್ಮ ಮುದ್ದಿ ನಾಯಿಗಳೊಂದಿಗೆ ಇರುವ ಫೋಟೋವನ್ನು ರಾಹುಲ್​ ತಮ್ಮ ಇನ್​ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿದ್ದಾರೆ.

ಟೂನಿರ್ಯ ಮಧ್ಯದಲ್ಲಿಯೇ ರಾಹುಲ್​ಗೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಣವೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಆದರೆ, ಸೂಕ್ತವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈಗೆ ಸ್ಥಳಾಂತರಿಸಲಾಗಿತ್ತು. ಮುಂಬೈನಲ್ಲಿ ರಾಹುಲ್​ ಅಪೆಂಡಿಕ್ಸ್​ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಐಪಿಎಲ್​ ಮುಂದೂಡಿಕೆಯಾದ ಹಿನ್ನೆಲೆಯಲ್ಲಿ ತವರಿಗೆ ವಾಪಸಾಗಿದ್ದರು.

ರಾಹುಲ್​ ಇನ್​ಸ್ಟಾದಲ್ಲಿ ಫೋಟೋ ಪ್ರಕಟಿಸಿದ ಬೆನ್ನಲ್ಲೇ ಲಾಂತರ ಅಭಿಮಾನಿಗಳು ಪ್ರತಿಕ್ರಿಯಿಸಿ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಸುಮಾರು 9 ಲಕ್ಷದಷ್ಟು ಮಂದಿ ರಾಹುಲ್​ ಫೋಟೋಗೆ ಲೈಕ್​ ಹಾಗೂ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net