KL Rahul: ಇಂದು (ಮಾ.24) ಐಪಿಎಲ್ನ ನಾಲ್ಕನೇ ಪಂದ್ಯದಲ್ಲಿ ತಮ್ಮ ತಂಡದ ಪರ ಆಡದ ಕೆ.ಎಲ್. ರಾಹುಲ್ ಅನುಪಸ್ಥಿತಿಗೆ ಕ್ರಿಕೆಟ್ ಅಭಿಮಾನಿಗಳು ಗೊಂದಲ ವ್ಯಕ್ತಪಡಿಸಿದ್ದರು. ಆದರೆ, ಕನ್ನಡಿಗನ ಮನೆಗೆ ಮಹಾಲಕ್ಷ್ಮಿ ಕಾಲಿಟ್ಟಿರುವ ಸುದ್ದಿಯನ್ನು ಕೇಳಿ ಸಂತಸ ವ್ಯಕ್ತಪಡಿಸಿದ್ದಾರೆ.
ಕೆ.ಎಲ್. ರಾಹುಲ್ ಮತ್ತು ಆಥಿಯಾ ಶೆಟ್ಟಿ ದಂಪತಿಗೆ ಹೆಣ್ಣು ಮಗು ಜನಿಸಿದೆ. ತಾಯಿ, ಮಗು ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಹಂಚಿಕೊಂಡ ರಾಹುಲ್, ತಮಗೆ ಹೆಣ್ಣುಮಗುವಾದ ಸುದ್ದಿಯನ್ನು ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಮಾ.22ರಂದು ಆರಂಭಗೊಂಡ ಐಪಿಎಲ್ ಆವೃತ್ತಿಯ ನಾಲ್ಕನೇ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ನಡುವೆ ನಡೆದಿದೆ. ಈ ಪಂದ್ಯದಲ್ಲಿ ತಮ್ಮ ತಂಡದ ಪರ ಮೈದಾನಕ್ಕಿಳಿಯಬೇಕಿದ್ದ ಕೆ.ಎಲ್. ರಾಹುಲ್, ಪತ್ನಿ ಹೆರಿಗೆ ಮುನ್ಸೂಚನೆ ಹಿನ್ನೆಲೆ ಇಂದಿನ ಮ್ಯಾಚ್ನಿಂದ ಹಿಂದೆ ಸರಿದರು. ಇದೀಗ ಮೊದಲ ಮಗುವಿಗೆ ತಂದೆಯಾದ ಕೆ.ಎಲ್ ರಾಹುಲ್ ಕುಟುಂಬದಲ್ಲಿ ಸಂತಸ ಮನೆಮಾಡಿದೆ.

XL ಸೈಜ್, ಪತ್ನಿಯ ಅಸಲಿ ಮುಖವಿದು! ಖಾಕಿ ಕಣ್ತಪ್ಪಿಸಿ ಪರಾರಿಯಾದ ಟೆಕ್ಕಿಯ ಬಾಳು ಕಥೆಯಲ್ಲ ಜೀವನ | Chennai Techie