ಶಾರುಖ್ ಖಾನ್​ ತಂಡಕ್ಕಿರುವುದು ಇದೊಂದೇ ಗುರಿ! ಜೋರಾಯ್ತು ಹರಾಜಿನ ಲೆಕ್ಕಾಚಾರ

kkr
Published on

ನವದೆಹಲಿ: ಪ್ರಸ್ತುತ ಐಪಿಎಲ್​ ಮೆಗಾ ಹರಾಜು ಪ್ರಕ್ರಿಯೆಯತ್ತ 10 ಬಲಿಷ್ಠ ತಂಡಗಳ ಚಿತ್ತ ಮೂಡಿದ್ದು, ಈಗಾಗಲೇ ತಮ್ಮ ತಂಡದಲ್ಲಿ ರಿಟೇನ್ ಆಗದೆ, ಆಕ್ಷನ್​ನತ್ತ ಮುಖ ಮಾಡಿರುವ ಸ್ಟಾರ್ ಆಟಗಾರರನ್ನು ಖರೀದಿಸುವ ಬಗ್ಗೆ ದೊಡ್ಡ ಲೆಕ್ಕಾಚಾರಗಳು ಶುರುವಾಗಿವೆ. ಇದೇ ನವೆಂಬರ್​ 24-25ರಂದು ನಡೆಯಲಿರುವ ಹರಾಜಿನಲ್ಲಿ ಸ್ಟಾರ್​ ಬ್ಯಾಟರ್​, ಬೌಲರ್​ಗಳ ಜತೆಗೆ ಅತ್ಯುತ್ತಮ ಆಲ್​ರೌಂಡರ್​ಗಳ ಮೇಲೆ ಟೀಮ್​ಗಳ ಕಣ್ಣು ಬಿದ್ದಿವೆ. ಈ ಪೈಕಿ ಕಳೆದ ಆವೃತ್ತಿ ಐಪಿಎಲ್​ ಚಾಂಪಿಯನ್ಸ್ ಪಟ್ಟಕೇರಿದ ನಟ ಶಾರೂಖ್ ಖಾನ್ ನೇತೃತ್ವದ ಕೋಲ್ಕತ ನೈಟ್ ರೈಡರ್ಸ್​ ತಂಡ, ಈ ಬಾರಿ ತಮಗೆ ಬೇಕಿರುವ ಮೂವರು ಅದ್ಭುತ ಆಟಗಾರರನ್ನು ಖರೀದಿಸಲು ಎದುರುನೋಡುತ್ತಿದೆ.

ಕಳೆದ ಸೀಸನ್​ನಲ್ಲಿ ಕೆಕೆಆರ್​ ತಂಡವನ್ನು ಯಶಸ್ಸಿನತ್ತ ಕೊಂಡೊಯ್ದ ಕ್ಯಾಪ್ಟನ್ ಶ್ರೇಯಸ್​ ಅಯ್ಯರ್ ಮತ್ತು ಆಸ್ಟ್ರೇಲಿಯಾದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್​ರನ್ನು ಉಳಿಸಿಕೊಳ್ಳದೆ ಕ್ರಿಕೆಟ್ ಪ್ರಿಯರಲ್ಲಿ ಭಾರೀ ಅಚ್ಚರಿ ಮೂಡಿಸಿದ ಫ್ರಾಂಚೈಸಿ, ರಿಂಕು ಸಿಂಗ್, ವರುಣ್ ಚಕ್ರವರ್ತಿ, ಸುನಿಲ್ ನರೈನ್, ಆಂಡ್ರೆ ರಸೆಲ್, ಹರ್ಷಿತ್ ರಾಣಾ ಮತ್ತು ರಮಣದೀಪ್ ಸಿಂಗ್ ಸೇರಿದಂತೆ ಪ್ರಮುಖ ಆಟಗಾರರನ್ನು ರಿಟೇನ್ ಮಾಡಿಕೊಂಡಿದೆ. ಇದು ಕೆಲವರಿಗೆ ಸರಿಯಾದ ನಿರ್ಧಾರ ಅನಿಸದೆ ಹೋದರೂ, ಟೀಮ್ ಮ್ಯಾನೇಜ್​ಮೆಂಟ್ ಮಾತ್ರ ತಮ್ಮ ನಿಲುವಿಗೆ ಬದ್ಧವಾಗಿದೆ. ಸದ್ಯ ಕೆಕೆಆರ್​ ಮಣೆ ಹಾಕಲು ಮುಂದಾಗಿರುವ ಆ ಮೂವರು ವೇಗಿಗಳು ಯಾರು? ಎಂಬುದರ ವಿವರ ಹೀಗಿದೆ.

ಕೆಕೆಆರ್​ನಿಂದ ಶ್ರೇಯಸ್​ ಅಯ್ಯರ್​, ಮಿಚೆಲ್ ಸ್ಟಾರ್ಕ್​, ಪಂಜಾಬ್ ಕಿಂಗ್ಸ್​ ತಂಡದಿಂದ ಶಿಖರ್ ಧವನ್​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಟೀಮ್​ನಿಂದ ಫಾಫ್ ಡು ಪ್ಲೆಸಿಸ್​, ಗ್ಲೆನ್ ಮ್ಯಾಕ್ಸ್​ವೆಲ್​, ಚೆನ್ನೈ ಸೂಪರ್ ಕಿಂಗ್ಸ್​ನಿಂದ ರಚಿನ್ ರವೀಂದ್ರ, ಡೆಲ್ಲಿ ಕ್ಯಾಪಿಟಲ್ಸ್​ನಿಂದ ರಿಷಬ್ ಪಂತ್​ ಮತ್ತು ಲಖನೌ ಸೂಪರ್ ಜೈಂಟ್ಸ್​ ಕ್ಯಾಪ್ಟನ್ ಆಗಿದ್ದ ಕೆ.ಎಲ್. ರಾಹುಲ್​ ಸದ್ಯ ​ ತಮ್ಮ ಫ್ರಾಂಚೈಸಿಗಳಿಂದ ರಿಟೈನ್​ ಆಗದ ಸ್ಟಾರ್ ಆಟಗಾರರು. ಇವರೊಂದಿಗೆ ಮತ್ತೊಂದಿಷ್ಟು ಆಟಗಾರರು ಸದ್ಯ ಹರಾಜಿಗೆ ಲಗ್ಗೆಯಿಟ್ಟಿದ್ದು, ಫ್ರಾಂಚೈಸಿಗಳ ಖರೀದಿಗೆ ಸಜ್ಜಾಗಿದ್ದಾರೆ. ಇವರ ಪೈಕಿ ಮೂವರು ಮಾತ್ರ ಕೆಕೆಆರ್​ ಲಿಸ್ಟ್​ನಲ್ಲಿ ಮುಂಚೂಣಿಯಲ್ಲಿದ್ದಾರೆ.

ಇವರೇ ಆ ಮೂವರು

ಜೋಫ್ರಾ ಆರ್ಚರ್​

ಮೊಹಮ್ಮದ್​ ಸಿರಾಜ್​

ಅನ್ರಿಚ್ ನಾರ್ಟ್ಜೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net