ಐಪಿಎಲ್​ನಲ್ಲಿ ಕೆಕೆಆರ್ ಸೂಪರ್​​ ಖದರ್​! ಇದು ಭಾರತೀಯರ ಪವರ್…

web kkr
Published on

ಬೆಂಗಳೂರು: ಯಾವುದೇ ಟೂರ್ನಿ ಇರಲಿ, ಅದರಲ್ಲೂ ಐಪಿಎಲ್​ನಂಥ ಸುದೀರ್ ಟೂರ್ನಿಯಲ್ಲಿ ಆರಂಭದಿಂದ ಕೊನೆಯವರೆಗೂ ಪ್ರಾಬಲ್ಯ ಸಾಧಿಸುವುದು ಸುಲಭವಲ್ಲ. ರಾಜಸ್ಥಾನ ರಾಯಲ್ಸ್​ ತಂಡ ಬಲಿಷ್ಠ ಆರಂಭ ಕಂಡರೂ ನಂತರ ಲಯ ತಪ್ಪಿತು. ಆರ್​ಸಿಬಿ ತಂಡ ಆರಂಭದಲ್ಲಿ ಮುಗ್ಗರಿಸಿದರೂ ನಂತರ ಲಯ ಕಂಡುಕೊಂಡಿತು. ಸನ್​ರೈಸರ್ಸ್​ ಆರಂಭಿಕರು ಮಿಂಚಿದಾಗ ಮಾತ್ರ ಗೆದ್ದಿತು. ಸಿಎಸ್​ಕೆ, ಲಖನೌ, ಡೆಲ್ಲಿ ತಂಡಗಳು ಅಸ್ಥಿರ ನಿರ್ವಹಣೆ ತೋರಿದವು. ಮುಂಬೈ, ಪಂಜಾಬ್​ ತಂಡಗಳು ಟೂರ್ನಿಯುದ್ದಕ್ಕೂ ಲಯ ಕಂಡುಕೊಳ್ಳಲೇ ಇಲ್ಲ. ಆದರೆ ಮೊದಲ ಪಂದ್ಯದಿಂದ ಫೈನಲ್​ವರೆಗೂ ಬಲಿಷ್ಠ ನಿರ್ವಹಣೆ ತೋರಿದ ಏಕೈಕ ತಂಡ ಕೋಲ್ಕತ ನೈಟ್​ರೈಡರ್ಸ್​. ಹೀಗಾಗಿಯೇ ಕೆಕೆಆರ್​ ಭಾನುವಾರ ಚೆನ್ನೈನಲ್ಲಿ 3ನೇ ಬಾರಿ ಮತ್ತು 10 ವರ್ಷಗಳ ಬಳಿಕ ಪ್ರಶಸ್ತಿ ಎತ್ತಿ ಹಿಡಿದಾಗ ಗೆಲುವಿಗೆ ಅರ್ಹ ತಂಡವೆಂದು ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ.

ಇದು ಇಂಡಿಯನ್​ ಪವರ್​: ಐಪಿಎಲ್​ ತಂಡಗಳ ತರಬೇತಿ ಬಳಗದಲ್ಲಿ ಯಾವಾಗಲೂ ವಿದೇಶಿಯರಿಗೆ ಹೆಚ್ಚಿನ ಮಣೆ ಹಾಕಲಾಗುತ್ತದೆ. 2022ರಲ್ಲಿ ಗುಜರಾತ್​ ಟೈಟಾನ್ಸ್​ ತಂಡ ಪ್ರಶಸ್ತಿ ಗೆಲ್ಲುವವರೆಗೆ ಭಾರತೀಯರು ಕೋಚ್​ ಆಗಿರುವ ಯಾವ ತಂಡವೂ ಪ್ರಶಸ್ತಿಯನ್ನೂ ಗೆದ್ದಿರಲಿಲ್ಲ. ಆಶಿಶ್​ ನೆಹ್ರಾ ಐಪಿಎಲ್​ ಟ್ರೋಫಿ ಗೆದ್ದ ಮೊದಲ ಭಾರತೀಯ ಕೋಚ್​ ಎನಿಸಿದ್ದರು. ಇದೀಗ ದೇಶೀಯ ಕೋಚಿಂಗ್​ ದಿಗ್ಗಜ ಚಂದ್ರಕಾಂತ್​ ಪಂಡಿತ್​ ಕೆಕೆಆರ್​ ಮುಖ್ಯ ಕೋಚ್​ ಆಗಿ ಈ ಸಾಧನೆಯನ್ನು ಪುನರಾವರ್ತಿಸಿದ್ದಾರೆ. ದೇಶೀಯ ಕ್ರಿಕೆಟ್​ನಲ್ಲಿ ಮುಂಬೈ, ವಿದರ್ಭ, ಮಧ್ಯಪ್ರದೇಶ ತಂಡಗಳ ಕೋಚ್​ ಆಗಿ ರಣಜಿ ಟ್ರೋಫಿ ಗೆದ್ದಿರುವ ಹೆಗ್ಗಳಿಕೆ ಚಂದ್ರಕಾಂತ್​ ಪಂಡಿತ್​ರದ್ದು. ಇದೀಗ ಐಪಿಎಲ್​&ರಣಜಿ ಟ್ರೋಫಿ ಎರಡನ್ನೂ ಗೆದ್ದ ಮೊದಲ ಕೋಚ್​ ಎನಿಸಿದ್ದಾರೆ. ಇನ್ನು ಮೆಂಟರ್​ ಆಗಿ ಮರಳಿದ ಬಳಿಕ ಗೌತಮ್​ ಗಂಭೀರ್​ ಕೆಕೆಆರ್​ ತಂಡದಲ್ಲಿ ಮಾಡಿರುವ ಇಂಪ್ಯಾಕ್ಟ್​ ಕೂಡ ಬಲು ದೊಡ್ಡದು. ಜತೆಗೆ ಸಹಾಯಕ ಕೋಚ್​ ಆಗಿ ಅಭಿಷೇಕ್​ ನಾಯರ್​ ಮತ್ತು ಬೌಲಿಂಗ್​ ಕೋಚ್​ ಆಗಿ ಭರತ್​ ಅರುಣ್​ ಮಾಡಿರುವ ಮೋಡಿಯೂ ಪ್ರಮುಖವಾದುದು. ಪ್ರತಿಭಾನ್ವಿತ ದೇಶೀಯ ಕ್ರಿಕೆಟಿಗರನ್ನು ತಂಡಕ್ಕೆ ಹುಡುಕಿ ತಂದು ಅವರನ್ನು ಬೆಳೆಸುವಲ್ಲಿ ಅಭಿಷೇಕ್​ ಮಹತ್ವದ ಪಾತ್ರ ವಹಿಸಿದ್ದರೆ, ಭರತ್​ ಅರುಣ್​ ಬಲಿಷ್ಠ ಬೌಲಿಂಗ್​ ವಿಭಾಗ ರೂಪಿಸಿದರು. ಇದರೊಂದಿಗೆ ಕೆಕೆಆರ್​ ಮೈದಾನದಲ್ಲಿ ಕಂಡ ಯಶಸ್ಸಿನಲ್ಲಿ ದೇಶೀಯ ಆಟಗಾರರಾದ ವೆಂಕಟೇಶ್​ ಅಯ್ಯರ್​, ವರುಣ್​ ಚಕ್ರವರ್ತಿ, ಹರ್ಷಿತ್​ ರಾಣಾ, ವೈಭವ್​ ಅರೋರ, ರಮಣ್​ದೀಪ್​ ಸಿಂಗ್​ ಕೊಡುಗೆಯೂ ನಿರ್ಣಾಯಕವೆನಿಸಿದೆ.

ಫೈನಲ್​ ಪಂದ್ಯದ ಟರ್ನಿಂಗ್​ ಪಾಯಿಂಟ್​

ಗರಿಷ್ಠ ಮೊತ್ತ, ಪವರ್​ಪ್ಲೇನಲ್ಲಿ ಗರಿಷ್ಠ ರನ್​, 10 ಓವರ್​ನೊಳಗೆ 150 ಪ್ಲಸ್​ ಮೊತ್ತದ ಚೇಸಿಂಗ್​ ಮೂಲಕ ಎದುರಾಳಿ ತಂಡದ ಬೌಲರ್​ಗಳಿಗೆ ಸನ್​ರೈಸರ್ಸ್​ ತಂಡದ ಆರಂಭಿಕ ಜೋಡಿ ಭೀತಿ ಮೂಡಿಸಿತ್ತು. ಆದರೆ ಮೊದಲ ಕ್ವಾಲಿಫೈಯರ್​ ಮತ್ತು ಫೈನಲ್​ನಲ್ಲಿ ಟ್ರಾವಿಸ್​ ಹೆಡ್​, ಅಭಿಷೇಕ್​ ಶರ್ಮ ಇಬ್ಬರನ್ನೂ ಬೇಗನೆ ಔಟ್​ ಮಾಡುವ ಮೂಲಕ ಕೆಕೆಆರ್​ ಯಶ ಸಾಧಿಸಿತು. ಕ್ವಾಲಿಫೈಯರ್​ನಲ್ಲಿ ಮೊದಲ ಓವರ್​ನಲ್ಲೇ ಸ್ಟಾರ್ಕ್​ ಎಸೆತದಲ್ಲಿ ಬೌಲ್ಡ್​ ಆಗಿದ್ದ ಹೆಡ್​, ಫೈನಲ್​ನಲ್ಲಿ ಸ್ಟಾರ್ಕ್​ ಜತೆಗಿನ ಮುಖಾಮುಖಿ ತಪ್ಪಿಸಲು ಅಭಿಷೇಕ್​ ಶರ್ಮಗೆ ಸ್ಟ್ರೆ$ಕ್​ ಬಿಟ್ಟುಕೊಟ್ಟರು. ಆದರೆ ಸನ್​ಗೆ ಈ ತಂತ್ರವೂ ಲ ನೀಡಲಿಲ್ಲ. ಅಭಿಷೇಕ್​ ಮೊದಲ ಓವರ್​ನಲ್ಲೇ ಸ್ಟಾರ್ಕ್​ಗೆ ವಿಕೆಟ್​ ನೀಡಿದರೆ, ಟ್ರಾವಿಸ್​ ಹೆಡ್​ ಮರುಓವರ್​ನಲ್ಲಿ ವೈಭವ್​ ಅರೋರಗೆ ವಿಕೆಟ್​ ನೀಡಿದರು. ಇದರಿಂದ ಮೊದಲ 2 ಓವರ್​ಗಳಲ್ಲೇ ಪಂದ್ಯ ಸಂಪೂರ್ಣವಾಗಿ ಕೆಕೆಆರ್​ ಕಡೆ ತಿರುಗಿತು.

ನಾರಾಯಣ್​ ಆರಂಭಿಕನಾಗಿ ಯಶ

ಗೌತಮ್​ ಗಂಭೀರ್​ ಮೆಂಟರ್​ ಆಗಿ ಮರಳಿದ ಬೆನ್ನಲ್ಲೇ ಸುನೀಲ್​ ನಾರಾಯಣ್​ಗೆ ಆರಂಭಿಕರಾಗಿ ಮತ್ತೆ ಬಡ್ತಿ ನೀಡಿದ್ದು ಕೂಡ ಕೆಕೆಆರ್​ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತು. 2017ರಲ್ಲಿ ಗಂಭೀರ್​ ನಾಯಕರಾಗಿದ್ದಾಗಲೇ ನಾರಾಯಣ್​ ಮೊದಲ ಬಾರಿ ಆರಂಭಿಕರಾಗಿ ಯಶ ಕಂಡಿದ್ದರು. ನಂತರ ಗಂಭೀರ್​ ತಂಡದಿಂದ ನಿರ್ಗಮಿಸಿದ ಬೆನ್ನಲ್ಲೇ ನಾರಾಯಣ್​ ಮತ್ತೆ ತಂಡದಲ್ಲಿ ಸ್ಪಿನ್ನರ್​ ಮಾತ್ರ ಆಗಿ ಉಳಿದಿದ್ದರು. ಪಿಂಚ್​ ಹಿಟ್ಟರ್​ ರೂಪದಲ್ಲಿ ನಾರಾಯಣ್​ ಆರಂಭಿಕರಾಗಿ ಗಳಿಸಿದ ಪ್ರತಿ ರನ್​ ಕೂಡ ಕೆಕೆಆರ್​ಗೆ ಬೋನಸ್​ ರೂಪದಲ್ಲಿ ನೆರವಾಯಿತು. 17 ವಿಕೆಟ್​ ಮತ್ತು 488 ರನ್​ ಗಳಿಸಿ ಸರಣಿಶ್ರೇಷ್ಠ ಪ್ರಶಸ್ತಿಗೂ ಅವರು ಪಾತ್ರರಾದರು. ಸುನೀಲ್​ ನಾರಾಯಣ್​ ಐಪಿಎಲ್​ನಲ್ಲಿ 3 ಬಾರಿ (2012, 2018, 2024) ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಮೊದಲಿಗರೆನಿಸಿದರು. ಶೇನ್​ ವ್ಯಾಟ್ಸನ್​, ಆಂಡ್ರೆ ರಸೆಲ್​ ತಲಾ 2 ಬಾರಿ ಸರಣಿಶ್ರೇಷ್ಠರಾಗಿದ್ದು ಹಿಂದಿನ ದಾಖಲೆ.

ವೈವಿಧ್ಯತೆಯ ಬೌಲಿಂಗ್​ ವಿಭಾಗ

ಬಲಿಷ್ಠ ಬ್ಯಾಟಿಂಗ್​ ವಿಭಾಗವಿದ್ದರೆ ಪಂದ್ಯ ಗೆಲ್ಲಬಹುದು, ಬಲಿಷ್ಠ ಬೌಲಿಂಗ್​ ವಿಭಾಗವಿದ್ದರೆ ಟೂರ್ನಿಯನ್ನೇ ಗೆಲ್ಲಬಹುದು ಎಂಬ ಮಾತನ್ನು ಕೆಕೆಆರ್​ ಅಕ್ಷರಶ@ ನಿಜವಾಗಿಸಿತು. ಎಡಗೈ&ಬಲಗೈ, ಸ್ಪಿನ್​&ಸ್ಪೀಡ್​ ವಿಭಾಗದಲ್ಲಿ ವೈವಿಧ್ಯತೆಯ ಬೌಲಿಂಗ್​ ವಿಭಾಗ ಕೆಕೆಆರ್​ಗೆ ಬಲಿಷ್ಠ ಶಕ್ತಿ ನೀಡಿತು. 5 ಬೌಲರ್​ಗಳು 17 ಅಥವಾ ಅದಕ್ಕಿಂತ ಅಧಿಕ ವಿಕೆಟ್​ ಕಬಳಿಸಿದ್ದೇ ಇದಕ್ಕೆ ಸಾ. ವರುಣ್​ ಚಕ್ರವರ್ತಿ (21), ಹರ್ಷಿತ್​ ರಾಣಾ (19), ಆಂಡ್ರೆ ರಸೆಲ್​ (19), ಸುನೀಲ್​ ನಾರಾಯಣ್​ (17), ಮಿಚೆಲ್​ ಸ್ಟಾರ್ಕ್​ (17) ಜತೆಗೆ 6ನೇ ಬೌಲರ್​ ವೈಭವ್​ ಅರೋರ (11) ಕೂಡ ಕೆಲ ಮಹತ್ವ ವಿಕೆಟ್​ ಕಬಳಿಸಿದರು.

ಹರಾಜಿನಿಂದಲೇ ಗೇಮ್​ ಪ್ಲ್ಯಾನ್​

ಐಪಿಎಲ್​ನಲ್ಲಿ ಅಸಲಿ ಆಟ ಹರಾಜು ಟೇಬಲ್​ನಿಂದಲೇ ಶುರುವಾಗುತ್ತದೆ ಎಂಬುದನ್ನು ಕೆಕೆಆರ್​ ನಿರೂಪಿಸಿತು. ಮಿಚೆಲ್​ ಸ್ಟಾರ್ಕ್​ಗೆ ದಾಖಲೆಯ 24.75 ಕೋಟಿ ರೂ. ನೀಡಿದ ಕೆಕೆಆರ್​ ನಡೆ ಟೀಕೆ ಮತ್ತು ಟ್ರೋಲ್​ಗೆ ಒಳಗಾಗಿತ್ತು. ಆದರೆ ಇದು ಎಷ್ಟು ದಿಟ್ಟ ಹೆಜ್ಜೆ ಎಂಬುದು ಮಿಚೆಲ್​ ಸ್ಟಾರ್ಕ್​ ಮೊದಲ ಕ್ವಾಲಿಫೈಯರ್​ ಮತ್ತು ಫೈನಲ್​ನಲ್ಲಿ ಮಾರಕ ದಾಳಿ ಸಂಟಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದಾಗ ಸಾಬೀತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net