ಕೆಕೆಆರ್ ಸೋಲಿನ ನಡುವೆ ನೋಟ್ಸ್ ಬರೆಯುತ್ತಿದ್ದ ಕೋಚ್ ಮೆಕ್ಕಲಂ, ಭಾರಿ ಟ್ರೋಲ್

meccuilam web
Published on

ಬೆಂಗಳೂರು: ಆರ್‌ಸಿಬಿ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡ ಸತತ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತ ರನ್‌ಗಾಗಿ ಪರದಾಡುತ್ತಿದ್ದರೆ, ಅಭಿಮಾನಿಗಳು ಮತ್ತು ತಂಡದ ಆಟಗಾರರೆಲ್ಲ ಬೇಸರ-ಆತಂಕದಲ್ಲಿ ಮುಳುಗಿದ್ದರು. ಆದರೆ ಡಗೌಟ್‌ನಲ್ಲಿ ಕುಳಿತಿದ್ದ ತಂಡದ ಕೋಚ್ ಬ್ರೆಂಡನ್ ಮೆಕ್ಕಲಂ ಮಾತ್ರ ಅದ್ಯಾವುದಕ್ಕೂ ತಲೆಕೆಡಿಸಿಕೊಂಡಂತಿರಲಿಲ್ಲ. ಅವರು ಡಗೌಟ್‌ನಲ್ಲಿ ಅದೇನೋ ನೋಟ್ಸ್ ಬರೆಯುವುದರಲ್ಲಿ ಮಗ್ನರಾಗಿದ್ದರು.

ಟಿವಿ ಕ್ಯಾಮರಾ ಮೆಕ್ಕಲಂರತ್ತ ತಿರುಗಿದಾಗಲೆಲ್ಲಾ ಅವರು, ಅದೇನೋ ಬರೆದುಕೊಳ್ಳುತ್ತಿರುವುದೇ ಕಾಣಿಸುತ್ತಿತ್ತು. ಇದರಿಂದ ಮೆಕ್ಕಲಂ ಅವರು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್‌ಗಳಿಗೆ ಒಳಗಾಗಿದ್ದಾರೆ. ಮೆಕ್ಕಲಂ ಏನು ಬರೆಯುತ್ತಿದ್ದರು ಎಂಬುದನ್ನು ತಮ್ಮದೇ ಕಲ್ಪನೆಯಲ್ಲಿ ವಿಶ್ಲೇಷಿಸುವ ಮೂಲಕ ನೆಟ್ಟಿಗರು ತಮಾಷೆ ಮಾಡಿದ್ದಾರೆ.

ಮೆಕ್ಕಲಂ ಚುಕ್ಕಿ ಇಟ್ಟು ರಂಗೋಲಿ ಹಾಕುತ್ತಿದ್ದರು ಎಂದೂ ಕೆಲವರು ಜೋಕ್ಸ್ ಮಾಡಿದ್ದಾರೆ. ಮುಂದಿನ ಐಪಿಎಲ್ ಹರಾಜಿನಲ್ಲಿ ಮೊಹಮದ್ ಸಿರಾಜ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದೂ ಮೆಕ್ಕಲಂ ಬರೆದಿಟ್ಟುಕೊಳ್ಳುತ್ತಿದ್ದರು ಎಂದು ಅಭಿಮಾನಿಗಳು ಕಾಲೆಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net