ಬೆಂಗಳೂರು: ಅರ್ಜೆಂಟೀನಾ ತಂಡ 2022ರ ಫಿಫಾ ವಿಶ್ವಕಪ್ ಗೆದ್ದಾಗ ನಾಯಕ ಲಿಯೋನೆಲ್ ಮೆಸ್ಸಿ ಟ್ರೋಫಿ ಹಿಡಿದು ಬಂದು ವಿಶೇಷ ರೀತಿಯಲ್ಲಿ ಪೋಸ್ ನೀಡಿದಂತೆಯೇ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಕೂಡ ಭಾನುವಾರ ಸನ್ರೈಸರ್ಸ್ ವಿರುದ್ಧದ ಫೈನಲ್ ಪಂದ್ಯದ ಗೆಲುವಿನ ಬಳಿಕ ಐಪಿಎಲ್ ಟ್ರೋಫಿಯೊಂದಿಗೆ ಸಂಭ್ರಮಾಚರಣೆ ಮಾಡಿದ್ದು ವಿಶೇಷವಾಗಿತ್ತು. ಇದು ಫುಟ್ಬಾಲ್ನಲ್ಲಿ ಜನಪ್ರಿಯವಾಗಿರುವ ಟ್ರೋಫಿ ಸಂಭ್ರಮವೂ ಆಗಿದೆ.
ಇಬ್ಬರು ನಾಯಕರ ಸಾರಥ್ಯದಲ್ಲಿ ಪ್ರಶಸ್ತಿ ಗೆದ್ದ ಮೊದಲ ತಂಡ ಕೆಕೆಆರ್
ಕೆಕೆಆರ್ ತಂಡ ಐಪಿಎಲ್ ಇತಿಹಾಸದಲ್ಲಿ ಇಬ್ಬರು ಪ್ರತ್ಯೇಕ ನಾಯಕರ (ಗೌತಮ್ ಗಂಭೀರ್, ಶ್ರೇಯಸ್ ಅಯ್ಯರ್) ಸಾರಥ್ಯದಲ್ಲಿ ಪ್ರಶಸ್ತಿ ಗೆದ್ದ ಮೊದಲ ತಂಡವೆನಿಸಿತು. ಮುಂಬೈ ಇಂಡಿಯನ್ಸ್ (ರೋಹಿತ್ ಶರ್ಮ) ಮತ್ತು ಚೆನ್ನೈ ಸೂಪರ್ಕಿಂಗ್ಸ್ (ಧೋನಿ) ತಲಾ 5 ಬಾರಿ ಪ್ರಶಸ್ತಿ ಗೆದ್ದಿದ್ದರೂ, ಒಬ್ಬರೇ ನಾಯಕರ ಸಾರಥ್ಯದಲ್ಲಿ ಈ ಸಾಧನೆ ಮಾಡಿವೆ. ನಾಯಕತ್ವ ಬದಲಾವಣೆಯ ನಂತರ ಈ ತಂಡಗಳು ಪ್ರಶಸ್ತಿ ಜಯಿಸಿಲ್ಲ.