ಬೆಂಗಳೂರಲ್ಲಿ ಪೊಲೀಸರಿಗೆ ಅಶ್ಲೀಲ ಸನ್ನೆ ಮಾಡಿ ನಿಂದಿಸಿದ ನೈಜೀರಿಯಾ ಪ್ರಜೆಗಳು

Nigeria citizens
Published on

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ನೈಜೀರಿಯಾ ಪ್ರಜೆಗಳ ಬೀದಿರಂಪಾಟ ಮತ್ತೆ ಶುರುವಾಗಿದೆ. ಕರೊನಾ ಸೋಂಕಿನ ಭೀತಿ ನಡುವೆಯೂ ಕಂಟಪೂರ್ತಿ ಎಣ್ಣೆ ಕುಡಿದು ತಡರಾತ್ರಿವರೆಗೂ ಪಾರ್ಟಿ ಮಾಡಿದ್ದಾರೆ.

ಹೆಣ್ಣೂರಿನ ಚಿಕ್ಕಣ್ಣ ಬಡಾವಣೆಯಲ್ಲಿ ಭಾನುವಾರ ರಾತ್ರಿವರೆಗೂ ಯಾರ ಭಯವಿಲ್ಲದೆ ಬೀದಿ ಬದಿಯಲ್ಲೇ ಎಣ್ಣೆಪಾರ್ಟಿ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ ಪೊಲೀಸರಿಗೆ ಅಶ್ಲೀಲ ಸನ್ನೆ ಮಾಡುತ್ತ ವಿಕೃತವಾಗಿ ವರ್ತಿಸಿದ ನೈಜೀರಿಯಾ ಪ್ರಜೆಗಳನ್ನು ಬಂಧಿಸಲಾಗಿದೆ.

ವೀಕೆಂಡ್ ಬಂದ್ರೆ ಸಾಕು ಬೀದಿಯನ್ನೇ ಪಾರ್ಟಿ ಹಾಲ್ ಮಾಡಿಕೊಳ್ಳುವ ನೈಜೀರಿಯಾ ಪ್ರಜೆಗಳು ನಿನ್ನೆ(ಭಾನುವಾರ) ರಾತ್ರಿಯೂ ಹೆಣ್ಣೂರಿನ ಗಲ್ಲಿಗಳಲ್ಲಿ ಎಣ್ಣೆ ಹೊಡೆದು ಮೋಜು-ಮಸ್ತಿಯಲ್ಲಿ ತೊಡಗಿದ್ದರು. ಇದನ್ನು ಪ್ರಶ್ನಿಸಿದ ಸ್ಥಳೀಯರ ಮೇಲೂ ಕೂಗಾಡಿದ್ದಾರೆ. ಅವರ ಹುಚ್ಚಾಟಕ್ಕೆ ಗರಂ ಆದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರ ಜತೆಗೆ ಸ್ಥಳೀಯರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ನೈಜೀರಿಯನ್ ಪ್ರಜೆಗಳನ್ನು ಹೆಣ್ಣೂರಿನ ಪೊಲೀಸರು ಬಂಧಿಸಿ ಕರೆದೊಯ್ದರು.

ನೈಜೀರಿಯಾ ಪ್ರಜೆಗಳು ಮನಸೋಇಚ್ಛೆ ವರ್ತಿಸುತ್ತಿದ್ದರೂ ಈ ಬಗ್ಗೆ ಅವರಿಗೆ ಮನೆ ಬಾಡಿಗೆ ನೀಡಿದ ಮಾಲೀಕರು ತಲೆ ಕೆಡಿಸಿಕೊಂಡಿಲ್ಲ ಎಂಬ ಅಸಮಾಧಾನ ಸ್ಥಳೀಯರಿಂದ ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net