ದೇಶದಲ್ಲಿ ಕೋಮುಗಲಭೆ ಸೃಷ್ಟಿಸಲು ಝೂಕಿರ್​ ನಾಯ್ಕ್​ ಪ್ರಯತ್ನ; ಸಚಿವ ಕಿರಣ್​ ರಿಜಿಜು ಹೀಗೆಳಿದ್ದೇಕೆ?

Untitled-design-2024-09-14T152915.869
Published on

ನವದೆಹಲಿ: ಕೇಂದ್ರದ ವಕ್ಫ್ ತಿದ್ದುಪಡಿ ಮಸೂದೆ ಕುರಿತು ಸುಳ್ಳು ಪ್ರಚಾರ ನಡೆಸುತ್ತಿರುವ ಇಸ್ಲಾಮಿಕ್ ಧರ್ಮ ಪ್ರಚಾರಕ ಝೂಕಿರ್ ನಾಯ್ಕ್ ಅವರನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಟೀಕಿಸಿದ್ದಾರೆ. ಮನಿ ಲಾಂಡರಿಂಗ್ ಮತ್ತು ದ್ವೇಷದ ಭಾಷಣಗಳ ಆರೋಪದ ಮೇಲೆ ಭಾರತಕ್ಕೆ ಬೇಕಾಗಿರುವ ಆರೋಪಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸಮ್ಮಿಶ್ರ ಸರ್ಕಾರವನ್ನು ಇಸ್ಲಾಂ ವಿರೋಧಿ ಮತ್ತು ಮುಸ್ಲಿಂ ವಿರೋಧಿ. ಮುಸ್ಲಿಮರ ಭೂಮಿಯನ್ನು ಕಬಳಿಸಲು ಪ್ರಯತ್ನಿಸುತ್ತಿದ್ದಾರೆ. ವಕ್ಫ್ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಿದರೆ, ಸಾವಿರಾರು ಮಸೀದಿಗಳು, ಮದರಸಾಗಳು, ಸ್ಮಶಾನಗಳು ಮತ್ತು ಲಕ್ಷಾಂತರ ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗುವುದು ಎಂದು ದೇಶದಿಂದ ಪರಾರಿಯಾಗಿರುವ ಝೂಕಿರ್​ ನಾಯ್ಕ್​ ವೀಡಿಯೋ ಸಂದೇಶದಲ್ಲಿ ಹೇಳಿದ್ದಾರೆ.

2016ರಲ್ಲೇ ದೇಶವನ್ನು ಬಿಟ್ಟು ಹೋಗಿರುವ ಝೂಕಿರ್​ ನಾಯ್ಕ್​ ಅವರು ಆನ್‌ಲೈನ್ ಪೋಸ್ಟ್​​ ಮೂಲಕ ಸುಳ್ಳು ಪ್ರಚಾರ ಮಾಡಿ ತಪ್ಪುದಾರಿಗೆಳೆಯುವ ಮೂಲಕ ಭಾರತದಲ್ಲಿ ಕೋಮುಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಇಂತಹವರ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕಾಗಿದೆ ಎಂದು ರಿಜಿಜು ತಿಳಿಸಿದರು.

ಈ ವಾರದ ಆರಂಭದಲ್ಲಿ ಝೂಕಿರ್​​ ನಾಯ್ಕ್ ಪ್ರಸ್ತಾವಿತ ಕಾನೂನನ್ನು ಅಪಾಯಕಾರಿ ಎಂದು ಹೇಳಿಮತ್ತು ಮಸೂದೆಯನ್ನು ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ತಮ್ಮ ಭಿನ್ನಾಭಿಪ್ರಾಯವನ್ನು ತಿಳಿಸುವಂತೆ ಮುಸ್ಲಿಮರಿಗೆ ಮನವಿ ಮಾಡಿದ್ದರು. ಕ್ಯೂಆರ್ ಕೋಡ್ ಮತ್ತು ಆನ್‌ಲೈನ್ ಅರ್ಜಿಯ ಲಿಂಕ್ ಅನ್ನು ಹಂಚಿಕೊಂಡಿದ್ದು, ಸೆಪ್ಟೆಂಬರ್ 13 ರೊಳಗೆ ಕನಿಷ್ಠ 50 ಲಕ್ಷ ಭಾರತೀಯ ಮುಸ್ಲಿಮರು ತಮ್ಮ ಅಸಮ್ಮತಿಯನ್ನು ಜೆಪಿಸಿಗೆ ಕಳುಹಿಸಬೇಕು ಎಂದು ಹೇಳಿದರು. ಅದಕ್ಕೆ ಸಚಿವ ಕಿರಣ್​ ರಿಜಿಜು, ದೇಶದ ಹೊರಗಿನ ಮುಸ್ಲಿಮರ ದಾರಿಯನ್ನು ದಯವಿಟ್ಟು ತಪ್ಪಿಸಬೇಡಿ. ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಹೊಂದಿದ್ದಾರೆ ಎಂದು ಹೇಳಿದ್ದರು. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net